twitter
    For Quick Alerts
    ALLOW NOTIFICATIONS  
    For Daily Alerts

    ಲೈಸೆನ್ಸ್ ಇರೋ ಬಾರ್ ಓಪನ್ ಮಾಡಿಸಿ: ಮದ್ಯ ಪ್ರಿಯರ ಪರ ಸರ್ಕಾರಕ್ಕೆ ರಿಷಿ ಕಪೂರ್ ಮನವಿ

    |

    ನಾವೆಲ್ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಮನವಿಯೊಂದನ್ನು ಮಾಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುವ ರಿಷಿ ಕಪೂರ್, ಲಾಕ್‌ಡೌನ್‌ನ ನಿರ್ಧಾರದಿಂದ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ನಿರಂತರವಾಗಿ ತಮ್ಮ ಕಳವಳ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಎಲ್ಲ ಅಗತ್ಯ ಸೌಲಭ್ಯಗಳೂ ಸಿಗಬೇಕು ಎಂದು ಹೇಳಿರುವ ರಿಷಿ, ಜನರಿಗೆ ಸಂಜೆ ಸ್ವಲ್ಪ ಸಮಯ ಎಲ್ಲ ಲೈಸೆನ್ಸ್ ಇರುವ ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ. ರಿಷಿ ಕುಡುಕರ ಪರವಾಗಿ ಬ್ಯಾಟ್ ಬೀಸಿರುವುದು ಮದ್ಯ ಪ್ರಿಯರಿಗೆ ಖುಷಿ ನೀಡಿದೆ. ಮುಂದೆ ಓದಿ.

    ಸಂಜೆ ಸ್ವಲ್ಪ ಹೊತ್ತು

    ಸಂಜೆ ಸ್ವಲ್ಪ ಹೊತ್ತು

    ಸಂಜೆ ಸ್ವಲ್ಪ ಹೊತ್ತು ಕೊಂಚ ಎಣ್ಣೆ ಬಿಟ್ಕೊಂಡರೆ ಸಮಾಧಾನ. ಆಲ್ಕೊಹಾಲ್ ಇಲ್ಲದೆ ಹೋದರೆ ಬದುಕಲು ಸಾಧ್ಯವೇ ಇಲ್ಲ ಎಂಬಂತಿರುವ ಅನೇಕರಿದ್ದಾರೆ. ಈಗ ಲಾಕ್‌ಡೌನ್ ಕಾರಣದಿಂದ ಮದ್ಯ ಲಭ್ಯವಾಗದೆ ಇರುವುದು ಅನೇಕರನ್ನು ಪೇಚಿಗೆ ಸಿಲುಕಿಸಿದೆ.

    ಲೈಸೆನ್ಸ್ ಇದ್ದವರಿಗೆ ಅವಕಾಶ ನೀಡಿ

    ಲೈಸೆನ್ಸ್ ಇದ್ದವರಿಗೆ ಅವಕಾಶ ನೀಡಿ

    ಯೋಚನೆ ಮಾಡಿ. ಪರವಾನಗಿಯುಳ್ಳ ಎಲ್ಲ ಲಿಕ್ಕರ್ ಅಂಗಡಿಗಳನ್ನೂ ಸಂಜೆ ವೇಳೆ ಸ್ವಲ್ಪ ಸಮಯ ತೆರೆಯಲು ಸರ್ಕಾರ ಅವಕಾಶ ನೀಡಬೇಕು ಎಂದು ರಿಷಿ ಕಪೂರ್ ಹೇಳಿದ್ದಾರೆ.

    ನನ್ನ ಮಾತು ತಪ್ಪಾಗಿ ಭಾವಿಸಬೇಡಿ

    'ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ. ಜನರು ಈ ಎಲ್ಲಾ ಒತ್ತಡ, ಸುತ್ತಲಿನ ಅನಿರ್ದಿಷ್ಟ ಸಂಗತಿಗಳ ನಡುವೆ ಮನೆಯಲ್ಲಿಯೇ ಇರುತ್ತಾರೆ. ಹಾಗೆಯೇ ಪೊಲೀಸರು, ವೈದ್ಯರು, ನಾಗರಿಕರು ಎಲ್ಲರಿಗೂ ಸ್ವಲ್ಪ ಬಿಡುವು ಬೇಕು. ಅದೇನೇ ಮಾಡಿದ್ದರೂ ಬ್ಲಾಕ್‌ನಲ್ಲಿ ಮದ್ಯ ಸಿಗುತ್ತಿದೆಯಲ್ಲವೇ?' ಎಂದಿದ್ದಾರೆ.

    ಕುಡಿಯುತ್ತಿದ್ದೇವೆ, ಲೀಗಲೈಸ್ ಮಾಡಿ

    ರಾಜ್ಯ ಸರ್ಕಾರವು ಅಬಕಾರಿಯಿಂದ ಹಣ ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿವೆ. ಖಿನ್ನತೆಗೆ ಎಂದಿಗೂ ಹತಾಶೆಯೂ ಸೇರಿಕೊಳ್ಳುವಂತಾಗಬಾರದು. ಹೇಗೂ ಕುಡಿಯುತ್ತಾ ಇದ್ದೇವೆ, ಅದನ್ನು ಕಾನೂನುಬದ್ಧಗೊಳಿಸಿ. ಇದರಲ್ಲಿ ಬೂಟಾಟಿಕೆ ಬೇಡ. ಇದು ನನ್ನ ಯೋಚನೆಯಷ್ಟೇ' ಎಂದು ರಿಷಿ ಕಪೂರ್ ಹೇಳಿದ್ದಾರೆ.

    ಎಮರ್ಜೆನ್ಸಿ ಘೋಷಿಸಿ

    ಆತ್ಮೀಯ ಭಾರತೀಯರೇ , ನಾವು ತುರ್ತುಪರಿಸ್ಥಿತಿಯನ್ನು ಘೋಷಿಸಲೇಬೇಕು. ದೇಶದೆಲ್ಲೆಡೆ ಏನಾಗುತ್ತಿದೆ ಎಂಬುದನ್ನು ನೋಡಿ. ಈ ಪರಿಸ್ಥಿತಿಯನ್ನು ನಿಭಾಯಿಸಲು ಬೇರೆ ಯಾವುದೇ ದಾರಿ ಇಲ್ಲ. ಇದು ನಮ್ಮ ಒಳ್ಳೆಯದಕ್ಕಾಗಿಯೇ ಎಂದು ಕೆಲವು ದಿನಗಳ ಹಿಂದೆ ರಿಷಿ ಕಪೂರ್ ಹೇಳಿದ್ದರು.

    English summary
    Veteran bollywood actor Rishi Kapoor has urged government to open all licensed liqour shops for sometime in the evening.
    Saturday, March 28, 2020, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X