ಅಮ್ಮನ ಹಳೇ ಸೀರೆಯಲ್ಲಿ ಶೇರ್ವಾನಿ ಹೊಲಿಸಿ ದೀಪಾವಳಿ ಸಂಭ್ರಮಿಸಿದ ರಿತೇಶ್ ದೇಶ್ ಮುಖ್

ಹಬ್ಬ, ಮದುವೆ ಅಥವಾ ಯಾವುದೇ ಕಾರ್ಯಕ್ರಮಗಳಾಗಲಿ ಸೆಲೆಬ್ರಿಟಿಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಹೇಗೆ ಕಾಣಿಸಿಬೇಕು, ಯಾವ ರೀತಿಯ ಬಟ್ಟೆ ಧರಿಸಿಬೇಕು, ಹೇಗೆ ವಿನ್ಯಾಸ ಮಾಡಬೇಕು ಎನ್ನುವ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ.

ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ, ಆದರೆ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಬೇಕು ಎನ್ನುವುದು ಪ್ರತಿಯೊಬ್ಬರಿಗೂ ಇರುವ ಚಾಲೆಂಜ್. ಇದೀಗ ದೀಪಾವಳಿಯ ಸಂಭ್ರಮ, ಸೆಲೆಬ್ರಿಟಿಗಳು ದುಬಾರಿ ಉಡುಪು ಧರಿಸಿ ಕ್ಯಾಮರಾಗೆ ಪೋಸ್ ನೀಡಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ದೀಪಾವಳಿ ಶುಭಾಶಯ ತಿಳಿಸುತ್ತಿದ್ದಾರೆ.

ಆದರೆ ನಟ ರಿತೇಶ್ ದೇಶ್ ಮುಖ್ ಲಕ್ಷಗಟ್ಟಲೆ ಹಣ ಖರ್ಚು ಮಾಡದೆ, ಮನೆಯಲ್ಲೇ ಬಟ್ಟೆ ತಯಾರಿಸಿಕೊಂಡಿದ್ದಾರೆ. ಅಮ್ಮನ ಹಳೆಯ ಸೀರೆಯನ್ನು ಶೇರ್ವಾನಿ ಮಾಡಿಕೊಂಡು ಧರಿಸಿ ಸಂಭ್ರಮಿಸಿದ್ದಾರೆ. ರಿತೇಶ್ ದೇಶ ಮುಖ್ ಮಾತ್ರವಲ್ಲದೆ ಇಬ್ಬರು ಮುದ್ದಾದ ಮಕ್ಕಳಿಗೂ ಅಮ್ಮನ ಸೀರೆಯಲ್ಲೇ ಬಟ್ಟೆ ಹೊಲಿಸಿದ್ದಾರೆ.

Riteish Deshmukh Recycles His Moms Old Saree To Make Deepavali Outfit

ಅಮ್ಮನ ಸೀರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಮ್ಮನ ಹಳೆಯ ಸೀರೆ, ಮಕ್ಕಳಿಗೆ ಹೊಸ ದೀಪಾವಳಿ ಬಟ್ಟೆ ಎಂದು ಬರೆದುಕೊಂಡು ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ ರಿತೇಶ್ ದೇಶ್ ಮುಖ್ ಪ್ಲಾನ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಆಮೀರ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್ ಸೇರಿದಂತೆ ಅನೇಕರು ವಿಶ್ ಮಾಡಿ ಹಬ್ಬ ಸಂಭ್ರಮಿಸುವಂತೆ ಹೇಳಿದ್ದಾರೆ.

Recommended Video

ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ಅಬ್ಬರಿಸಲಿದ್ದಾರೆ ಬಾಲಿವುಡ್ ನಟ | James | Puneeth Rajkumar

More from Filmibeat

English summary
Bollywood Actor Riteish Deshmukh recycles his mom's old saree to make Deepavali outfit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X