ಪತ್ನಿಗೆ 'ಅಶ್ಲೀಲ ಆಂಟಿ' ಎಂದ ನೆಟ್ಟಿಗನಿಗೆ ಖಡಕ್ ಉತ್ತರ ಕೊಟ್ಟ ರಿತೇಶ್ ದೇಶಮುಖ್
ಬಹುಭಾಷಾ ನಟಿ ಜೆನಿಲಿಯಾ ದೇಶಮುಖ್ ಸದ್ಯ ನಟನೆಯಿಂದ ದೂರ ಉಳಿದರೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜನಿಲಿಯಾ ಪೋಸ್ಟ್ ಮಾಡುವ ವಿಡಿಯೋಗಳು ಕೆಲವರಿಗೆ ಇಷ್ಟವಾಗಬಹುದು ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಕೆಲವರು ಜೆನಿಲಿಯಾ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿ ಕಾಲೆಳೆಯುತ್ತಿರುತ್ತಾರೆ.
ತನ್ನನ್ನು ಟ್ರೋಲ್ ಮಾಡಿದವರಿಗೆ ಜೆನಿಲಿಯಾ ಸೈಲೆಂಟ್ ಆಗಿಯೇ ಉತ್ತರ ನೀಡಿದ್ದಾರೆ. ಜೆನಿಲಿಯಾ ಮಾತ್ರವಲ್ಲದೇ ಪತಿ ರಿತೇಶ್ ದೇಶಮುಖ್ ಸಹ ಟ್ರೋಲಿಗರಿಗೆ ಸರಿಯಾದ ಉತ್ತರ ನೀಡಿದ್ದಾರೆ. ನೆಟ್ಟಿಗನೊಬ್ಬ ಜೆನಿಲಿಯಾಗೆ ಓವರ್ ಆಕ್ಟಿಂಗ್, ಅಶ್ಲೀಲ ಆಂಟಿ, ನಾಚಿಕೆ ಆಗಬೇಕು ನಿಮಗೆ ಎಂಬಿತ್ಯಾದಿ ಕಮೆಂಟ್ ಗಳನ್ನು ಮಾಡಿದ್ದರು. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ, ಇಬ್ಬರು ಮಕ್ಕಳಿದ್ದಾರೆ. ನಿಮ್ಮ ಅವತಾರ ನೋಡಿ ಮಕ್ಕಳು ಕೂಡ ಶಾಕ್ ಆಗಬಹುದು" ಎಂದು ಟ್ರೋಲಿಗನೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ.
ಇದಕ್ಕೆ ಉತ್ತರ ನೀಡಿದ್ದ ಜೆನಿಲಿಯಾ "ಬಹುಶಃ ಕಾಮೆಂಟ್ ಮಾಡಿದ ವ್ಯಕ್ತಿಯ ದಿನ ಕೆಟ್ಟದಾಗಿತ್ತು ಅನಿಸುತ್ತದೆ. ಈ ಕಾರಣಕ್ಕೆ ಅವರು ಆ ರೀತಿ ಕಾಮೆಂಟ್ ಹಾಕಿರಬಹುದು. ಅವರ ಮನೆಯಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದರು.

ಇದೀಗ ನಟ, ಪತಿ ರಿತೇಶ್ ದೇಶಮುಖ್ ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದ ವ್ಯಕ್ತಿ ಯಾರೆಂದು ತಿಳಿದು ರಿತೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ಮಾಡಿದ್ದ ವ್ಯಕ್ತಿಯ ಪ್ರೋಫೈಲ್ ಹೆಸರು ಯೋಗ ಎಂದಿದೆ. ಹಾಗಾಗಿ ರಿತೇಶ್ ಕೆಟ್ಟದಾಗಿ ಕಾಮೆಂಟ್ ಮಾಡಿದ ವ್ಯಕ್ತಿ ಮೊದಲು ಯೋಗವನ್ನು ಸರಿಯಾಗಿ ಮಾಡಲಿ ಎಂದು ಹೇಳಿದ್ದಾರೆ.
"ನೀವು ಇದನ್ನ ಸರಿಯಾಗಿ ಮಾಡಬೇಕು. ಅದರಲ್ಲೂ ಶವಾಸನ ಮತ್ತು ಕಪಾಲಭಾತಿಯನ್ನು ನಿಖರವಾಗಿ ಮಾಡಿ" ಎಂದು ರಿತೇಶ್ ದೇಶಮುಖ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ನಟಿ ಜೆನಿಲಿಯಾ ಪತಿ ರಿತೇಶ್ ದೇಶಮುಖ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ರೀತೇಶ್ ಮತ್ತು ಪ್ರೀತಿ ಇಬ್ಬರೂ ಮಾತನಾಡುವ ವೇಳೆ ಜೆನಿಲಿಯಾ ಎಕ್ಸ್ ಪ್ರೆಶನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆಯೂ ಜೆನಿಲಿಯಾ ಪ್ರತಿಕ್ರಿಯೆ ನೀಡಿದ್ದಾರೆ. "ನಿಜ ಹೇಳಬೇಕೆಂದರೆ ಬಹಳ ಸಮಯದ ನಂತರ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಿದ್ದೆ. ನಾನು ಸಂಪೂರ್ಣ ಡ್ರೆಸ್ ಮಾಡಿಕೊಂಡಿದ್ದೆ, ಹೈ ಹೀಲ್ಸ್ ಹಾಕಿದ್ದೆ. ನಾವು ತುಂಬಾ ಜನರನ್ನು ಭೇಟಿ ಮಾಡಿದ್ದೆವು. ನನ್ನ ಪಾದಗಳು ತುಂಬಾ ಹಿಂಸೆ ನೀಡುತ್ತಿತ್ತು. ಅದೆ ಸಮಯದಲ್ಲಿ ಪ್ರೀತಿ ಮತ್ತು ರಿತೇಶ್ ಸಂಭಾಷಣೆ ನಡೆಸುತ್ತಿದ್ದರು. ದುರದೃಷ್ಟವಶಾತ್ ಕ್ಯಾಮರಾಮನ್ ನನ್ನ ಪ್ರತಿಕ್ರಿಯೆಯನ್ನು ಸೆರೆಹಿಡಿದ್ದಾರೆ" ಎಂದು ಹೇಳಿದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಜನಿಲಿಯಾ ತುಜೆ ಮೇರಿ ಕಸಮ್ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದರು. ಚೆನ್ನೈ ಕಾದಲ್, ಸಂತೋಷ್ ಸುಬ್ರಮಣ್ಯಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಮದುವೆ ಬಳಿಕ ಜೆನಿಲಿಯಾ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ನಟ ರಿತೇಶ್ ದೇಶಮುಖ್ ಕೊನೆಯದಾಗಿ ಬಾಘಿ-3 ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ರಿತೇಶ್ ಮತ್ತು ಜೆನಿಲಿಯಾ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


Click it and Unblock the Notifications











