ಬೆಂಗಳೂರಿನಲ್ಲಿ ನಡೆದ ಆ ಘಟನೆ ರಿತೇಶ್ ದೇಶ್‌ಮುಖ್‌ಗೆ ನೋವು ತಂದಿತ್ತು!
ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಅವರ ಅಹಂಗೆ (Ego) ನೋವು ತಂದ ಘಟನೆ ಬಗ್ಗೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ ಎಂದು ಸ್ವತಃ ದೇಶ್‌ಮುಖ್ ಹೇಳಿಕೊಂಡಿದ್ದಾರೆ.
ಆ ಘಟನೆ ಬಗ್ಗೆ ತಿಳಿಯುವುದಕ್ಕೂ ಮುಂಚೆ ರಿತೇಶ್ ದೇಶ್‌ಮುಖ್ ಮತ್ತು ಆತನ ಪತ್ನಿ ನಟಿ ಜೆನಿಲಿಯಾ ಡಿಸೋಜಾ ಬಗ್ಗೆಯೂ ತಿಳಿಯಬೇಕು. 2013ರಲ್ಲಿ ತೆರೆಕಂಡ 'ತುಜೇ ಮೇರಿ ಕಸಮ್' ಸಿನಿಮಾ ಮೂಲಕ ಇಬ್ಬರು ಒಟ್ಟಿಗೆ ಸಿನಿಮಾ ಜಗತ್ತಿಗೆ ಬಂದರು. ನಂತರ ರಿತೇಶ್ ಬಾಲಿವುಡ್ ಹಾಗೂ ಮರಾಠಿ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿಕೊಂಡರು, ಜೆನಿಲಿಯಾ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿ ಆದರು. ಅಷ್ಟಕ್ಕೂ, ರಿತೇಶ್ ಅಹಂಗೆ ನೋವು ತಂದ ಘಟನೆ ಯಾವುದು? ಮುಂದೆ ಓದಿ...

ಬೆಂಗಳೂರಿನಲ್ಲಿ ಸಿಸಿಲ್ ನಡೆಯುತ್ತಿತ್ತು
''ಬೆಂಗಳೂರಿನಲ್ಲಿ ಸಿಸಿಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ನಡೆಯುತ್ತಿತ್ತು. ದಕ್ಷಿಣ ಇಂಡಸ್ಟ್ರಿಯ ತಂಡದಲ್ಲಿದ್ದ ಇಬ್ಬರು ಆಟಗಾರರು, ನನ್ನನ್ನು ನೋಡಿ 'ಜೆನಿಲಿಯಾ ಪತಿ' ಎಂದು ಪಿಸುಗುಟ್ಟಿದ್ದರು. 'ಜೆನಿಲಿಯಾ ಅವರ ಪತಿ' ಎಂದಿದ್ದು ನನ್ನ ಅಹಂಗೆ ನೋವು ಉಂಟು ಮಾಡಿತು. ಅದಕ್ಕೆ ನಾನು ಅವರಿಗೆ ಹೇಳಿದೆ, 'ನಾನು ಇಲ್ಲಿ ಜೆನೆಲಿಯಾಳ ಗಂಡ, ಮಹಾರಾಷ್ಟ್ರದಲ್ಲಿ ಆಕೆ ರಿತೇಶ್ ಹೆಂಡತಿ ಎಂದು ಹೇಳಿದೆ'' ಎಂದು ಘಟನೆ ಸ್ಮರಿಸಿಕೊಂಡಿದ್ದಾರೆ.

ರಿತೇಶ್ ಗೆ ಸಿಕ್ಕ ಉತ್ತರವೇನು?
ಆ ಬಳಿಕ ಅವರು ''ಸರ್, ರಿತೇಶ್ ದೇಶ್‌ಮುಖ್ ಅವರ ಪತ್ನಿ ಎನ್ನುವುದು ಕೇವಲ ಒಂದು ರಾಜ್ಯದಲ್ಲಿ, ಆದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ 'ಜೆನಿಲಿಯಾ ಅವರ ಗಂಡ' ಅಂತಾನೇ ಹೇಳುವುದು'' ಎಂದರಂತೆ.

2012ರಲ್ಲಿ ಜೆನಿಲಿಯಾ-ರಿತೇಶ್ ಮದುವೆ
2003ರಲ್ಲಿ ನಟಿಗೆ ಸಿನಿ ಜರ್ನಿ ಆರಂಭಿಸಿದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ 2012ರಲ್ಲಿ ವಿವಾಹವಾದರು. ಮದುವೆ ಆದ್ಮೇಲೆ ಜೆನಿಲಿಯಾ ಅಷ್ಟಾಗಿ ಸಿನಿಮಾಗಳನ್ನು ಮಾಡಲಿಲ್ಲ. ಈ ದಂಪತಿಗೆ ರಿಯಾನ್ ಮತ್ತು ರಹೈಲ್ ಇಬ್ಬರು ಮಕ್ಕಳಿದ್ದಾರೆ.
Recommended Video

ಕೊರೊನಾ ಸೋಂಕಿಗೆ ತುತ್ತಾಗಿದ್ದರು
ನಟಿ ಜೆನಿಲಿಯಾ ಡಿಸೋಜಾ ಅವರು ಇತ್ತೀಚಿಗಷ್ಟೆ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಈ ವೇಳೆ ತನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಸಹ ಹಾಕಿದ್ದರು. ಈಗ, ಕೊರೊನಾದಿಂದ ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ.


Click it and Unblock the Notifications











