ಚಿಕ್ಕ ವಯಸ್ಸಿನಲ್ಲಿಯೆ ನನ್ನನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು: ಬಾಲಿವುಡ್ ವಿರುದ್ಧ ಅಸಮಾಧಾನ ಹೊರಹಾಕಿದ ರಿಯಾ

By ಫಿಲ್ಮ್ ಡೆಸ್ಕ್

ಚಿಕ್ಕ ವಯಸ್ಸಿನಲ್ಲಿಯೆ ಖ್ಯಾತಿಗಳಿಸಿದ ನಟಿ ರಿಯಾ ಸೇನ್ ಬಾಲಿವುಡ್ ನ ಕೆಟ್ಟ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಿಂದಿ ಮಾತ್ರವಲ್ಲದೆ ಬೆಂಗಾಲಿ ಸಿನಿಮಾದಲ್ಲಿಯೂ ಮಿಂಚಿರುವ ರಿಯಾ 16ನೇ ವಯಸ್ಸಿನಲ್ಲಿಯೆ ಬಾಲಿವುಡ್ ಗೆ ಕಾಲಿಟ್ಟಿದ್ದರು. ಚಿಕ್ಕ ವಯಸ್ಸಿನಲ್ಲಿಯೆ ಖ್ಯಾತಿಗಳಿಸಿದ್ದರು.

Recommended Video

ಸಿದ್ದರಾಮಯ್ಯನ ಸೊಸೆ ಮೇಘನಾರಾಜ್ ಮನೆಗೆ ಬಂದ್ರು | Smitha Rakesh meets Meghana Raj & Family

ಸಿನಿಮಾ ಕುಟುಂಬದಿಂದ ಬಂದವರಾದರು ರಿಯಾಗೆ ಹೇಳುಕೊಳ್ಳುವಂತಹ ಅವಕಾಶ ಸಿಗಲಿಲ್ಲ. ರಿಯಾ, ಅಜ್ಜಿ ಸುಚಿತ್ರಾ ಸೇನ್, ತಾಯಿ ಮೂನ್ ಮೂನ್ ಸೇನ್ ಮತ್ತು ಸಹೋದರಿ ರೈಮಾ ಸೇನ್ ಎಲ್ಲರೂ ಖ್ಯಾತ ಕಲಾವಿದರು. 16ನೇ ವಯಸ್ಸಿನಲ್ಲಿ ರಿಯಾ ಫಾಲ್ಗುಣಿ ಪಾಠಕ್ ಅವರ ಯಾದ್ ಪಿಯಾ ಕಿ ಆನೆ ಲಗಿ ಮ್ಯೂಸಿಕ್ ವಿಡಿಯೋ ಮೂಲಕ ಪ್ರಸಿದ್ಧಿ ಪಡೆದಿದ್ದರು.

ತಮಿಳು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ

ತಮಿಳು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ

ಈ ಹಾಡಿನ ಬಳಿಕ ಸಾಕಷ್ಟು ಸಿನಿಮಾಗಳಿಗೆ ಆಫರ್ ಬಂದಿದೆ. ತಮಿಳಿನಲ್ಲಿ ಚೊಚ್ಚಲ ಸಿನಿಮಾಗೆ ಬಣ್ಣಹಚ್ಚುವ ಮೂಲಕ ದೊಡ್ಡ ಪರದೆಮೇಲೆ ಮಿಂಚಿದ್ದಾರೆ. ಆನಂತರ ಹಿಂದಿ ಸಿನಿಮಾದಲ್ಲಿ ಮಿಂಚಿದ್ದಾರೆ. ಪ್ರಾರಂಭದ ದಿನದಲ್ಲಿ ಸಿನಿಮಾದ ಬಗ್ಗೆ ತುಂಬಾ ಕನಸುಕೊಂಡಿದ್ದ ನಟಿಗೆ ಆ ನಂತರ ಕನಸೆಲ್ಲ ನುಚ್ಚುನೂರಾಗಿದೆ.

ರಿಯಲ್ ಲೈಫ್ ನಲ್ಲಿಯೂ ಮಾದಕವಾಗಿ ನೋಡಲು ಬಯಸುತ್ತಿದ್ದರು

ರಿಯಲ್ ಲೈಫ್ ನಲ್ಲಿಯೂ ಮಾದಕವಾಗಿ ನೋಡಲು ಬಯಸುತ್ತಿದ್ದರು

ಸಿನಿಮಾಗಳಲ್ಲಿ ರಿಯಾ ಅನ್ನು ಮಾದಕವಾಗಿ ನೋಡಲು ಇಷ್ಟಪಡುತ್ತಿದ್ದರಂತೆ, ಹಾಗೆ ರಿಯಲ್ ಲೈಫ್ ನಲ್ಲಿಯೂ ಅವರನ್ನು ಮಾದಕವಾಗಿ ನೋಡಲು ಬಯಸುತ್ತಿದ್ದರಂತೆ. ಆಗಿನ್ನೂ ರಿಯಾಗೆ ತುಂಬಾ ಚಿಕ್ಕ ವಯಸ್ಸು. ಆಗಲೆ ಬೋಲ್ಡ್ ಪಾತ್ರಗಳನ್ನು ಮಾಡಿದ ನಂತರ ಬೋಲ್ಡ್ ಎನ್ನುವ ಟ್ಯಾಗ್ ಲೈನ್ ಸಿಕ್ಕಿತು. ಆ ರೀತಿಯ ಪಾತ್ರಗಳನ್ನು ಮಾಡಲು ಇಷ್ಟವಿರದಿದ್ದರು ಮಾಡುತ್ತಿದ್ದಂತೆ. ಇದರಿಂದ ಕೆಟ್ಟ ನಟಿ ಎಂದು ತಿಳಿದರು, ಆದರೆ ನಾನು ಜನರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.

ಸೆಕ್ಸಿ, ಬೋಲ್ಡ್ ಪದ ನನ್ನನ್ನು ಭಯಭೀತ ಗೊಳಿಸಿತ್ತು

ಸೆಕ್ಸಿ, ಬೋಲ್ಡ್ ಪದ ನನ್ನನ್ನು ಭಯಭೀತ ಗೊಳಿಸಿತ್ತು

ಚಿತ್ರರಂಗದಲ್ಲಿ ಸೆಕ್ಸಿ ಮತ್ತು ಬೋಲ್ಡ್ ಅಂತಹ ಲೇಬಲ್ ನನ್ನನ್ನು ಭಯಭೀತಗೊಳಿದೆ ಎಂದು ರಿಯಾ ಹೇಳಿದ್ದಾರೆ. ಆಗಿನ್ನು ಚಿಕ್ಕವಳಾಗಿದ್ದೆ. ಶಾಲಿಗೆ ಹೋಗುತ್ತಿದೆ. ಎಲ್ಲರೂ ಹಾಗೆ ಕರೆಯುತ್ತಿದ್ದರು. ಹೊರಗೆ ಹೋದಾಗಲು ಜನರು ಓ ರಿಯಾ ಸೇನ್ ಎನ್ನುತ್ತಿದ್ದರು. ತೆರೆಮೇಲೆ ಹೇಗೆ ಇದ್ದೀವಿಯೋ ರಿಯಲ್ ಲೈಫ್ ನಲ್ಲಿಯೂ ಹಾಗೆ ಇರ್ತಾರೆ ಎಂದು ಭಾವಿಸಿರುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಾಲಿ ಮತ್ತು ವೆಬ್ ಸೀರಿಸ್ ನಲ್ಲಿ ಬ್ಯುಸಿ

ಬೆಂಗಾಲಿ ಮತ್ತು ವೆಬ್ ಸೀರಿಸ್ ನಲ್ಲಿ ಬ್ಯುಸಿ

ಸದ್ಯ ಬೆಂಗಾಲಿ ಸಿನಿಮಾರಂಗದಲ್ಲಿ ರಿಯಾ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಗಿಂತ ಹೆಚ್ಚಾಗಿ ಬೆಂಗಾಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ರೀತಿಯ ಕೆಟ್ಟ ಅನುಭವಗಳ ನಂತರ ಬಾಲಿವುಡ್ ನಿಂದ ದೂರ ಆದ ರಿಯಾ ಬೆಂಗಾಲಿಯಲ್ಲಿ ಪ್ರಸಿದ್ಧಿ ಪೆಡಯುತ್ತಾರೆ. ಈಗ ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Actress Riya Sen reveals bad experience in bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X