For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ರಿಯಾ ಸೇನ್ ಗೆ ಕೂಡಿ ಬಂತು ಕಂಕಣ ಭಾಗ್ಯ

  By Harshitha
  |

  ಬಾಲಿವುಡ್ ನಟಿ ರಿಯಾ ಸೇನ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸದ್ಯದಲ್ಲಿಯೇ, ತಮ್ಮ ಬಹುಕಾಲದ ಗೆಳೆಯ ಶಿವಂ ತೆವಾರಿ ಜೊತೆ ಹಸೆಮಣೆ ಏರಲಿದ್ದಾರೆ ನಟಿ ರಿಯಾ ಸೇನ್.

  36 ವರ್ಷ ವಯಸ್ಸಿನ ರಿಯಾ ಸೇನ್, ನಟಿ ಮೂನ್ ಮೂನ್ ಸೇನ್ ಹಾಗೂ ಭರತ್ ದೇವ್ ವರ್ಮಾ ರವರ ಪುತ್ರಿ. 1991ರಲ್ಲಿಯೇ 'ವಿಷಕನ್ಯಾ' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ರಿಯಾ ಸೇನ್ 'ಸ್ಟೈಲ್', 'ಅಪ್ನಾ ಸಪ್ನಾ ಮನಿ ಮನಿ', 'ಪ್ಲಾನ್', 'ಹೇ ಬೇಬಿ' ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಲಿ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ತೆರೆಮೇಲೆ ಗ್ಲಾಮರಸ್ ಆಗಿ ಮಿಂಚುತ್ತಿದ್ದ ರಿಯಾ ಸೇನ್ ಇದೀಗ ತಮ್ಮ ಬಾಯ್ ಫ್ರೆಂಡ್ ಶಿವಂ ತೆವಾರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ.

  ವರದಿಗಳ ಪ್ರಕಾರ, ಇದೇ ತಿಂಗಳ ಕೊನೆಯಲ್ಲಿ ರಿಯಾ ಸೇನ್-ಶಿವಂ ತೆವಾರಿ ವಿವಾಹ ಮಹೋತ್ಸವ ನಡೆಯಲಿದೆ.

  English summary
  Bollywood Actress Riya Sen is all set to marry her boyfriend Shivam Tewari by the end of this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X