ಸಾರಾ ಅಲಿ ಖಾನ್ - ಅನನ್ಯಾ ಪಾಂಡೆ ಸೌಂದರ್ಯಕ್ಕೆ ಮನಸೋತ ರಿಯಾನ್ ಪರಾಗ್ ..!
ಬಣ್ಣದ ಲೋಕದ ಬೆಡಗು-ಬಿನ್ನಾಣ ಕೇವಲ ಜನಸಾಮಾನ್ಯರ ಕಣ್ಣನ್ನಷ್ಟೇ ಕುಕ್ಕುವುದಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿ ಖ್ಯಾತಿಯ ಶಿಖರಕ್ಕೇರಿದವರ ಮತ್ತು ಏರುತ್ತಿರುವವರ ಕಣ್ಣನ್ನೂ ಅರಳಿಸುತ್ತೆ. ಯಾಕೆಂದರೆ ಅವರು ಕೂಡ ಮನುಷ್ಯರೇ. ಅವರಲ್ಲಿಯೂ ವಯೋಸಹಜ ಆಕರ್ಷಣೆ ಇದ್ದೇ ಇರುತ್ತೆ. ಇದಕ್ಕೆ ಕ್ರಿಕೆಟ್ ಪ್ಲೇಯರ್ ರಿಯಾನ್ ಪರಾಗ್ ಅತ್ಯುತ್ತಮ ಉದಾಹರಣೆ.
ಹೌದು.. ಮೊನ್ನೆ..ಮೊನ್ನೆ.. ಮುಕ್ತಾಯವಾದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಾನ್ ಪರಾಗ್, ಬಾಲಿವುಡ್‌ನ ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆಯ ಹಸಿ-ಬಿಸಿ ವಿಡಿಯೋಗಳನ್ನ ಯೂಟ್ಯೂಬ್‌ನಲ್ಲಿ ಹುಡುಕಾಡಿದ್ದಾರೆ.

ಹುಡುಗಾಟದ ಹುಡುಗನ ಈ ಹುಡುಕಾಟದ ಪ್ರಯತ್ನ ಯಶಸ್ವಿ ಆಯ್ತಾ..? ಗೊತ್ತಿಲ್ಲ. ಆದರೆ ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಹೆಸರು ರಿಯಾನ್ ಪರಾಗ್ ಹೆಸರಿನ ಜೊತೆ ಸದ್ಯಕ್ಕೆ ಪ್ರಚಲಿತದಲ್ಲಿದೆ. ಇದಕ್ಕೆ ಕಾರಣ ಸ್ಕ್ರೀನ್ ಶಾಟ್.
ಹೌದು, ಅಸಲಿಗೆ.. ಐಪಿಎಲ್ 2024ರಲ್ಲಿ 15 ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿ ಮನೆ-ಮನಗಳನ್ನ ತಲುಪಿದ ರಿಯಾನ್ ಪರಾಗ್, ಕೇವಲ ಅತ್ಯುತ್ತಮ ಕ್ರಿಕೆಟರ್ ಮಾತ್ರ ಅಲ್ಲ. ಒಳ್ಳೇಯ ಗೇಮರ್ ಕೂಡ ಹೌದು. ಬಿಡುವು ಇರುವ ಸಮಯದಲ್ಲಿ ಯುಟ್ಯೂಬ್‌ನಲ್ಲಿ ಗೇಮ್ ಆಡುವುದು ಇವರ ಹವ್ಯಾಸಗಳಲ್ಲೊಂದು.

ಹೀಗಾಗಿಯೇ.. ಮೊನ್ನೆ ಯುಟ್ಯೂಬ್‌ನಲ್ಲಿ ಗೇಮಿಂಗ್ ಸೆಷನ್‌ಗಾಗಿ ಬಂದಿದ್ದ ರಿಯಾನ್ ಪರಾಗ್ ಇದೇ ಸಮಯದಲ್ಲಿ ಹಾಡು ಕೇಳುತ್ತಾ ಆಟವಾಡುವ ನಿರ್ಧಾರವನ್ನ ಮಾಡಿದರು. ಕಾಪಿ ರೈಟ್ ಇಲ್ಲದ ಹಾಡನ್ನ ಪ್ಲೇ ಮಾಡಲು ಮುಂದಾದರು. ಆದರೆ.. ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡುವುದನ್ನ ರಿಯಾನ್ ಮರೆತು ಹೋದರು. ಹೀಗಾಗಿಯೇ ಸಂಗೀತವನ್ನ ಹುಡುಕಲು ರಿಯಾನ್ ಮುಂದಾಗಿದ್ದೇ ತಡ ಸರ್ಚ್ ಹಿಸ್ಟರಿಯಲ್ಲಿ ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಅವರ ಹೆಸರು ಎಲ್ಲರಿಗೂ ಕಾಣಿಸಿತು.
ಇನ್ನೇನು..! ರಿಯಾನ್ ಪರಾಗ್ ಅವರ ಸರ್ಚ್ ಹಿಸ್ಟರಿ ಕಣ್ಣಿಗೆ ಬಿದ್ದಿದ್ದೇ ತಡ ಅದನ್ನ ಅನೇಕರು ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡರು. ಪರಿಣಾಮ ರಿಯಾನ್ ಪರಾಗ್ ಅವರ ಸರ್ಚ್ ಹಿಸ್ಟರಿ ಸದ್ಯಕ್ಕೆ ದೇಶದೆಲ್ಲೆಡೆ ತಲುಪಿದೆ. ರಿಯಾನ್ ಪರಾಗ್ ಅವರನ್ನ ವ್ಯಾಪಕವಾಗಿ ಟ್ರೋಲ್ ಕೂಡ ಮಾಡಲಾಗುತ್ತಿದೆ.ಹಾಗಂಥ ಎಲ್ಲರೂ ರಿಯಾನ್ ಕಾಲೆಳೆಯುತ್ತಿಲ್ಲ. ಕೆಲವರು ರಿಯಾನ್ ಬೆಂಬಲಕ್ಕೂ ಬಂದಿದ್ದಾರೆ. ರಿಯಾನ್ ಗೆ ಈಗ 22ರ ಹರೆಯ ಈ ವಯಸ್ಸಿನಲ್ಲಿ ಇದೆಲ್ಲವೂ ಸಹಜ ಎನ್ನುತ್ತಿದ್ದಾರೆ. ರಿಯಾನ್ ಪರಾಗ್ ಗೆ ಧೈರ್ಯವನ್ನೂ ತುಂಬುತ್ತಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್ ಹಿಸ್ಟ್ರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ರಿಯಾನ್ ಪರಾಗ್ ಹೆಸರು ಟ್ರೆಂಡಿಂಗ್ ನಲ್ಲಿಯೂ ಇದೆ.


Click it and Unblock the Notifications











