ಅಂತಹ ಸ್ನೇಹಿತರ ಜೊತೆ..ಯುಜ್ವೇಂದ್ರ ಚಹಾಲ್ ಜೊತೆ ಸಂಬಂಧ ಕಡಿದುಕೊಂಡಿದ್ದೇಕೆ ಆರ್‌ಜೆ ಮಹ್ವಾಶ್? ಕಾರಣ ಹೇಳಿದ ನಟಿ
ಕ್ರಿಕೆಟ್ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳು. ಈ ಎರಡು ಕ್ಷೇತ್ರಗಳನ್ನು ನಮ್ಮಲ್ಲಿ ಧರ್ಮದಂತೆ ಆರಾಧಿಸಲಾಗುತ್ತೆ. ಇನ್ನು ಬದಲಾದ ಈ ಕಾಲದಲ್ಲಿ ಇವರ ಬದುಕು ಕೇವಲ ಮೈದಾನಕ್ಕೆ ಮತ್ತು ಬೆಳ್ಳಿತೆರೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಹಲವರು ಇವರ ಮೇಲೆ ನಿಗಾ ವಹಿಸಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇವರ ಒಂದು ಚಿಕ್ಕ ನಡೆ ಹಲವು ಅನುಮಾನಕ್ಕೆ ಕಾರಣವಾಗುತ್ತೆ. ಚರ್ಚೆಗೆ ಗ್ರಾಸವಾಗುತ್ತೆ. ಉದಾಹರಣೆಗೆ ಯುಜುವೇಂದ್ರ ಚಹಾಲ್ ಮತ್ತು ಆರ್ ಜೆ ಮಹ್ವಾಶ್ ಅವರ ಸಂಬಂಧವನ್ನೇ ತೆಗೆದುಕೊಳ್ಳಿ.
ಹೌದು. ಆರ್‌ಜೆ ಮಹ್ವಾಶ್ ಸದ್ಯ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿರುವ ಚೆಲುವೆ. ಈಗಾಗಲೇ ನಿರ್ಮಾಪಕಿಯಾಗಿ ''ಸೆಕ್ಷನ್ 108'' ಚಿತ್ರವನ್ನು ನಿರ್ಮಾಣ ಮಾಡಿರುವ ಮಹ್ವಾಶ್ ''ಥೇಡಿ ಹೈ ಪರ್ ಮೇರಿ ಹೈ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.''ಪ್ಯಾರ್, ಪೈಸಾ, ಪ್ರಾಪಿಟ್'' ಎಂಬ ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿದ್ದಾರೆ.

ಇಂಥಾ ಆರ್ ಜೆ ಮಹ್ವಾಶ್ ವರ್ಷದ ಹಿಂದೆಚಹಾಲ್ ಬದುಕಿನಲ್ಲಿ ಪ್ರವೇಶ ಮಾಡಿದ್ದರು. ಧನಶ್ರೀ ವರ್ಮಾ ಅವರಿಂದ ಅದಾಗಲೇ ದೂರವಾಗಿದ್ದ ಚಹಾಲ್ ಕೂಡ ಮಹ್ವಾಶ್ ಸಾಂಗತ್ಯ ಬೆಳೆಸಿಕೊಂಡರು. 2025ರಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇಬ್ಬರು ಗ್ಯಾಲರಿಯಲ್ಲಿ ಕುಂತು ಮ್ಯಾಚ್ ಕಣ್ತುಂಬಿಕೊಂಡಿದ್ದರು.
ಆದರೆ, ಇದೇ ಸಮಯದಲ್ಲಿ ಇಬ್ಬರನ್ನು ಜೊತೆಯಲ್ಲಿ ಕಣ್ತುಂಬಿಕೊಂಡ ಹಲವರು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿದರು. ಇದಕ್ಕೆ ಪೂರಕವಾಗಿ ಹಲವು ಬಾರಿ ಆ ನಂತರ ಚಹಾಲ್ ಮತ್ತು ಮಹ್ವಾಶ್ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಬಂದರು.
ಹೀಗಾಗಿ ಹಬ್ಬಿರುವ ಈ ಸುದ್ದಿಯನ್ನು ಹಲವರು ನಿಜಾ ಎಂದುಕೊಂಡಿದ್ದರು. ಅಧಿಕೃತವಾಗಿ ಇಂದಲ್ಲ.. ನಾಳೆ.. ಇಬ್ಬರು ಘೋಷಣೆ ಮಾಡಬಹುದು, ಮದುವೆಯಾಗಬಹುದು ಎಂದು ಕಾಯುತ್ತಿದ್ದರು. ಆದರೆ ಅದೇನಾಯ್ತೋ..? ಈ ಸಂಬಂಧ ಮುರಿದು ಬಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಇಬ್ಬರು ಅನ್‌ಫಾಲೋ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂತು. ಆದರೆ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಸದ್ಯ ದೂರವಾಗಿದ್ದೇಕೆ..? ಎಂದು ಮಹ್ವಾಶ್ ಹೇಳಿದ್ಧಾರೆ.
ಈ ಕುರಿತು ''ಪಿಂಕ್‌ವಿಲ್ಲಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆರ್ ಜೆ ಮಹ್ವಾಶ್ ನಮ್ಮ ಜನ ಚಿಕ್ಕ ಚಿಕ್ಕ ವಿಚಾರಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ ಎಂದಿದ್ದಾರೆ. ಸ್ನೇಹಿತರು ಅಂದ್ಮೇಲೆ ಅಲ್ಲಿ ವಾದ-ವಿವಾದ-ಜಗಳ ಇದ್ದೇ ಇರುತ್ತೆ ಎಂದು ಹೇಳಿರುವ ಆರ್ ಜೆ ಮಹ್ವಾಶ್, ನಮ್ಮ ನಡುವೆ ಕೂಡ ಸ್ನೇಹಿತರ ನಡುವೆ ನಡೆಯುವಂತೆ ಒಂದು ವಾದ ನಡೆಯಿತು, ಕೋಪದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿಕೊಂಡೆವು, ಅಲ್ಲಿಗೆ ಆ ವಿಷಯ ಮುಗಿದು ಹೋಯ್ತು ಎಂದಿದ್ಧಾರೆ.

ದೂರವಾಗಿರುವ ಮಾತ್ರಕ್ಕೆ ಎಲ್ಲವೂ ಸರಿ ಇಲ್ಲ ಅಂತೇನು ಇಲ್ಲ, ಸ್ನೇಹಿತರಾಗಿ ಒಳ್ಳೆಯ ದಿನ ಮತ್ತು ಕ್ಷಣಗಳನ್ನು ನಾವು ಕಳೆದಿದ್ದೇವೆ, ಅಂತಹ ಸ್ನೇಹಿತರಿಗಾಗಿ ನಾವು ಮನದಲ್ಲಿ ಕಹಿ ತುಂಬಿಸಿಕೊಳ್ಳಬಾರದು, ನಾನು ಯಾವಾಗಲೂ ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಮುಂದುವರೆದು ಹಲವರು ಅಂದುಕೊಂಡತೆ ನಮ್ಮ ನಡುವೆ ಇದ್ದಿದ್ದು ಬೇರೇನೂ ಇರಲಿಲ್ಲ ಬದಲಿಗೆ ಇದ್ದಿದ್ದು ಕೇವಲ ಸ್ನೇಹ ಮಾತ್ರ ಎಂದು ಹೇಳಿರುವ ಆರ್ ಜೆ ಮಹ್ವಾಶ್ ನಾನು ಅವರಿಗೆ ಒಬ್ಬ ಉತ್ತಮ ಸ್ನೇಹಿತೆಯಾಗಿದ್ದೆ ಅಷ್ಟೇ. ಆ ಸಮಯದಲ್ಲಿ ವಿಚ್ಚೇದನದ ಸಮಯದಲ್ಲಿ ಅವರಿಗೆ ಒಂದೊಳ್ಳೆ ಸ್ನೇಹದ ಅಗತ್ಯ ಇತ್ತು, ಆದ್ದರಿಂದ ನಾವೆಲ್ಲರೂ ಅವರು ತಮ್ಮ ಐಪಿಎಲ್ ಸೀಸನ್ ಕಡೆಗೆ ಸಂಪೂರ್ಣ ಗಮನ ಹರಿಸುವಂತೆ ಮಾಡಲು ಪ್ರಯತ್ನ ಮಾಡಿದೆವು ಎಂದು ಹೇಳಿದ್ದಾರೆ. ನಾನು ಅವರ ಕಠಿಣ ದಿನಗಳಲ್ಲಿ ಒಂದು ಭದ್ರವಾದ ಬೆಂಬಲ ವ್ಯವಸ್ಥೆಯಾಗಿ ಅವರ ಜೊತೆ ನಿಂತಿದ್ದೆ ಅಷ್ಟೇ ಎಂದು ಹೇಳಿರುವ ಮಹ್ವಾಶ್ ನನ್ನ ಬೆಂಬಲ ಯಾವತ್ತು ಅವರಿಗೆ ಇರುತ್ತೆ ಎಂದು ಹೇಳಿದ್ದಾರೆ.


Click it and Unblock the Notifications