twitter
    For Quick Alerts
    ALLOW NOTIFICATIONS  
    For Daily Alerts

    ಗದ್ದಲ ಎಬ್ಬಿಸುತ್ತಿದೆ ಕತ್ರಿನಾ ಕೈಫ್ ಕೆನ್ನೆ: ಸಚಿವರು ಹಂಗ್ಯಾಕ್ ಅಂದ್ರು?

    |

    ನಟಿ ಕತ್ರಿನಾ ಕೈಫ್‌ ಹೆಸರು ಇತ್ತೀಚೆಗೆ ಹೆಚ್ಚು ಸುದ್ದಿ ಆಗುತ್ತಾ ಇದ್ದದ್ದು ಆಕೆಯ ಮದುವೆ ವಿಚಾರವಾಗಿ. ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಹೆಸರು ತಳುಕು ಹಾಕಿಕೊಂಡಿತ್ತು. ಹಾಗಾಗಿ ಇವರ ಮದುವೆ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಾ ಇತ್ತು.

    ಈಗ ಕತ್ರೀನಾ ಪ್ರತ್ಯೇಕವಾಗಿ ಸುದ್ದಿ ಆಗಿದ್ದಾರೆ. ಆದರೆ ಆಕೆ ಸುದ್ದಿ ಆಗಿರುವುದು ತಮ್ಮ ಕೆನ್ನೆಯ ವಿಚಾರಕ್ಕೆ. ಅರೆರೆ ಇದೇನಿದು ಕತ್ರಿನಾ ಕೆನ್ನೆಯ ವಿಚಾರಕ್ಕೆ ಸುದ್ದಿ ಆದ್ರಾ? ಅಂತಹದ್ದೇನಪ್ಪ ಮಾಡಿದರು ಎಂದುಕೊಳ್ಳಬೇಡಿ. ಯಾಕಂದರೆ ಇಲ್ಲಿ ಕತ್ರಿನಾ ಕೈಫ್ ಏನು ಮಾಡಿಲ್ಲ.

    ಬದಲಿಗೆ ಕತ್ರಿನಾ ಅವರ ಕೆನ್ನೆ ವಿಚಾರವನ್ನು ರಾಜಸ್ಥಾನ ಸಚಿವರೊಬ್ಬರು ಮಾತನಾಡಿ ಸುದ್ದಿ ಆಗಿದ್ದಾರೆ. ಎಲ್ಲಾ ಬಿಟ್ಟು ಈ ಸಚಿವರು ಕತ್ರಿನಾ ಕೆನ್ನೆ ವಿಚಾರಕ್ಕೆ ಯಾಕೆ ಹೋರದು ಅಂತೀರಾ.. ಮುಂದೆ ಓದಿ...

    ಕತ್ರಿನಾ ಕೆನ್ನೆಯಂತೆ ಮೃದುವಾಗಿ ಇರಬೇಕಂತೆ ರಸ್ತೆಗಳು !

    ಕತ್ರಿನಾ ಕೆನ್ನೆಯಂತೆ ಮೃದುವಾಗಿ ಇರಬೇಕಂತೆ ರಸ್ತೆಗಳು !

    ರಾಜಸ್ಥಾನದ ಸಚಿವ 'ರಾಜೇಂದ್ರ ಸಿಂಗ್ ಗುಢ' ರಸ್ತೆಗಳು ಕತ್ರಿನಾ ಕೈಫ್ ಕೆನ್ನೆಯಂತೆ ನಿರ್ಮಾಣವಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸಚಿವರ ಈ ಹೇಳಿಕೆ ವಿವಾದಕ್ಕೆ ಕಾರಣ ಆಗಿದೆ.

    ಸೈನಿಕ ಕಲ್ಯಾಣ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಢ ಇತ್ತೀಚೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ನಟಿ ಕತ್ರಿನಾ ಬಗ್ಗೆ ಮಾತನಾಡಿಲ್ಲ. ಬದಲಿಗೆ ಆಕೆಯ ಕೆನ್ನೆಯ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅವರ ಹೇಳಿಕೆ ವಿವಾದ ಹುಟ್ಟು ಹಾಕಿದೆ.

    ನವೆಂಬರ್ 23ರಂದು ಜುಂಜು ಜಿಲ್ಲೆಯ ಪಾಂಖ್ ಗ್ರಾಮದಲ್ಲಿ ಗ್ರಾಮ ಅಭಿಯಾನವಿತ್ತು. ಈ ಅಭಿಯಾನದಲ್ಲಿ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿ ಮಾತನಾಡುತ್ತಿದ್ದರು. ಮಧ್ಯದಲ್ಲಿ ಅವರಿಂದ ಮೈಕ್ ತೆಗೆದುಕೊಂಡ ಸಚಿವ ರಾಜೇಂದ್ರ ಸಿಂಗ್ "ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ನಿರ್ಮಾಣ ಮಾಡಬೇಕು" ಎಂದು ಹೇಳಿದರು. ಆದರೆ ನಂತರ ಅವರು, "ಇದೀಗ ಹೇಮಾ ಮಾಲಿನಿ ಅವರಿಗೆ ವಯಸ್ಸಾಗಿದೆ" ಎಂದರು.

    ಹೇಮಾ ಮಾಲಿನಿ ನಂತರ ಕತ್ರಿನಾ ಕೆನ್ನೆ ಬಗ್ಗೆ ಕಮೆಂಟ್!

    ಹೇಮಾ ಮಾಲಿನಿ ನಂತರ ಕತ್ರಿನಾ ಕೆನ್ನೆ ಬಗ್ಗೆ ಕಮೆಂಟ್!

    ಮೊದಲು ಹೇಮಾ ಮಾಲಿನಿ ಬಗ್ಗೆ ಕಮೆಂಟ್ ಮಾಡಿ ನಂತರ ಕತ್ರಿನಾ ಕೈಫ್ ಕೆನ್ನೆ ವಿಚಾರಕ್ಕೆ ಬಂದಿದ್ದಾರೆ ಸಚಿವ ರಾಜೇಂದ್ರ ಸಿಂಗ್. ನೆರೆದಿದ್ದ ಸಭಿಕರಲ್ಲಿ "ಈಗಿನ ಖ್ಯಾತ ನಟಿ ಯಾರು" ಎಂದು ಸಚಿವರು ಕೇಳಿದರು. ಸಭಿಕರು, ಕತ್ರಿನಾ ಕೈಫ್ ಎಂದು ಉತ್ತರಿಸಿದರು. ಆಗ ಸಚಿವ ರಾಜೇಂದ್ರ ಸಿಂಗ್ "ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡಬೇಕು" ಎಂದು ನಗುತ್ತಾ ಹೇಳಿದರು. ಇದು ಸಭೆಯಲ್ಲಿ ನಗು ಉಕ್ಕಲು ಕಾರಣವಾಯಿತು. ಆದರೆ ಅವರು ಮಾತನಾಡಿ ಈ ವೀಡಿಯೋ ಒಂದು ದಿನದ ಬಳಿಕ ವೈರಲ್‌ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

    ಹೇಮಾ ಮಾಲಿನಿ ಕೆನ್ನೆ ಬಗ್ಗೆ ಮೊದಲು ಹೇಳಿಕೆ ನೀಡಿದ್ದು ಲಾಲು ಪ್ರಸಾದ್ ಯಾದವ್!

    ಹೇಮಾ ಮಾಲಿನಿ ಕೆನ್ನೆ ಬಗ್ಗೆ ಮೊದಲು ಹೇಳಿಕೆ ನೀಡಿದ್ದು ಲಾಲು ಪ್ರಸಾದ್ ಯಾದವ್!

    'ಹೇಮಾ ಮಾಲಿನಿಯವರ ಕೆನ್ನೆಯಂತೆ ರಸ್ತೆ ನಿರ್ಮಿಸಬೇಕು' ಎನ್ನುವ ಹೇಳಿಕೆ ಇದೇ ಮೊದಲೇನಲ್ಲ.

    2005 ರಲ್ಲಿ ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳ ಬಗ್ಗೆ ಮಾತನಾಡುತ್ತಾ, ಹೇಮಾ ಮಾಲಿನಿ ಅವರ ಕೆನ್ನೆಯಂತೆಯೇ ಇಲ್ಲಿನ ರಸ್ತೆಗಳು ಸುಗಮವಾಗಿರುತ್ತವೆ ಎಂದು ಹೇಳಿದ್ದರು. ಈ ವಿವಾದದ ನಂತರ 2013 ರಲ್ಲಿ ಆಗಿನ ಉತ್ತರ ಪ್ರದೇಶ ಸಚಿವ ರಾಜಾರಾಮ್ ಪಾಂಡೆ ಅವರು ಹೇಮಾ ಮಾಲಿನಿ ಅವರ ಕೆನ್ನೆಗಳನ್ನು ಉತ್ತಮ ರಸ್ತೆಗೆ ಹೋಲಿಸಿದ್ದರು.

    2019 ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದ ಆಗಿನ ಸಚಿವ ಪಿಸಿ ಶರ್ಮಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಛತ್ತೀಸ್‌ಗಢದ ಅಂದಿನ ಸಚಿವ ಖವಾಸಿ ಲಖ್ಮಾ ಕೂಡ ಹೇಮಾ ಮಾಲಿನಿಯ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸ ಬೇಕೆಂದು ಹೇಳಿಕೆ ನೀಡಿದ್ದರು.

    ಹೇಮಾ ಮಾಲಿನಿ ಬಳಿಕ ಕತ್ರಿನಾ ಕೆನ್ನೆ ಸರದಿ!

    ಹೇಮಾ ಮಾಲಿನಿ ಬಳಿಕ ಕತ್ರಿನಾ ಕೆನ್ನೆ ಸರದಿ!

    ಇದೀಗ ಈ ಸಾಲಿಗೆ ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಕೂಡ ಸೇರ್ಪಡೆಯಾಗಿದ್ದಾರೆ. ಇಷ್ಟು ದಿನ ಈ ರಸ್ತೆ ನಿರ್ಮಾಣ ವಿಚಾರ ಕೇವಲ ಹೇಮಾ ಮಾಲಿನಿ ಕೆನ್ನೆಗೆ ಸೀಮಿತ ಆಗಿತ್ತು. ಆದರೆ ಈಗ ಸಚಿವ ರಾಜೇಂದ್ರ ಸಿಂಗ್ ಒಂದು ಹೆಜ್ಜೆ ಮುಂದೆ ಹೋಗಿ ಕತ್ರಿನಾ ಕೈಫ್ ಕೆನ್ನೆಯನ್ನು ಉದಾಹರಣೆ ಆಗಿ ಕೊಟ್ಟಿದ್ದಾರೆ. ಆದರೆ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಚಿವರಿಗೆ ಛೀಮಾರಿ ಹಾಕುತ್ತಿದ್ದಾರೆ.

    English summary
    Roads as smooth as Katrina Kaif's cheeks: Viral Video Lands Rajasthan Minister in Controversy. Know more
    Wednesday, November 24, 2021, 20:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X