ನಟ ಸೈಫ್ ಅಲಿಖಾನ್ ಮೇಲೆ ದಾಳಿ; ದುಷ್ಕರ್ಮಿ ಇಟ್ಟ ಬೇಡಿಕೆ ಏನು?
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ್ದು ಆತಂಕ ತಂದಿದೆ. ಗಂಭೀರವಾಗಿ ಗಾಯಗೊಂಡಿರುವ ನಟ ಸೈಫ್ ಅಲಿಖಾನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಆಪ್ತ ಮೂಲಗಳಿಂದ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮೊನ್ನೆ ರಾತ್ರಿ 2.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಅಲಿಖಾನ್ ಮನಗೆ ನುಗ್ಗಿದ್ದ. ಆತ ದರೋಡೆಗೆ ಯತ್ನಿಸಿದ್ದಾನೆ, ಈ ವೇಳೆ ಅಡ್ಡ ಬಂದ ನಟನ ಮೇಲೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ. ಈಗಾಗಲೇ ಆಗಂತುಕನ ಫೋಟೊ ಕೂಡ ರಿವೀಲ್ ಆಗಿದೆ. ಸಿಸಿಟಿವಿಯಲ್ಲಿ ಆತನ ದೃಶ್ಯಗಳು ಬಹಿರಂಗವಾಗಿದೆ. ಮುಂಬೈ ಪೊಲೀಸರು ಆತನ ಸೆರೆಗೆ ಮುಂದಾಗಿದ್ದಾರೆ.

ಎಲ್ಲಾ ಭದ್ರತೆಯನ್ನು ಭೇದಿಸಿ ಬಾಲಿವುಡ್ ಖ್ಯಾತ ನಟನ ಮನೆಗೆ ದುಷ್ಕರ್ಮಿ ನುಗ್ಗಿ ಹಲ್ಲೆ ನಡೆಸಿರುವುದು ಅಚ್ಚರಿ ಉಂಟು ಮಾಡಿದೆ. ನಟ ಸೈಫ್ ಅಲಿಖಾನ್ ಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ಪತ್ನಿ, ಮಕ್ಕಳ ಜೊತೆ ವಾಸಿಸುತ್ತಿದ್ದಾರೆ. ರಾತ್ರಿ ಎಲ್ಲರೂ ಮಲಗಿದ್ದಾಗ ದುಷ್ಕರ್ಮಿ ಮನೆ ಪ್ರವೇಶಿಸಿದ್ದಾರೆ. ಈ ವೇಳೆ ಸೈಫ್ ಅಲಿಖಾನ್‌ಗೆ 6 ಬಾಕಿ ಇರಿದಿದ್ದಾನೆ. ನಟನ ಬೆನ್ನಿಗೆ ಹೊಕ್ಕಿದ್ದ 2.5 ಇಂಚು ಉದ್ದದ ಚಾಕುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರಗೆ ತೆಗೆದಿದ್ದಾರೆ ಎನ್ನಲಾಗ್ತಿದೆ.
ಘಟನೆಯ ಬಗ್ಗೆ ಸೈಫ್ ಅಲಿಖಾನ್ ಮನೆ ಕೆಲಸದಾಕೆ ಮಾಹಿತಿ ನೀಡಿದ್ದಾರೆ. ನಟನ ಮಗ ಜೇಹ್‌ನ ಟೇರ್ ಟೇಕರ್, ನರ್ಸ್ ಆಗಿ ಕೆಲಸ ಮಾಡುತ್ತಿರುವ ಎಲಿಯಾಮ ಫಿಲಿಪ್ ಮಾತನಾಡಿದ್ದಾರೆ. "ಬುಧವಾರ ರಾತ್ರಿ ಎಲ್ಲರೂ ಮಲಗಿದ್ದೆವು. 11 ಗಂಟೆ ಸುಮಾರಿಗೆ ಒಬ್ಬ ಕುಳ್ಳಗಿನ ವ್ಯಕ್ತಿ ಜೇಹ್ ಬೆಟ್ ಕಡೆಗೆ ಹೋಗುವುದನ್ನು ನಾನು ನೋಡಿದೆ. ನಾನು ಎದ್ದಾಗ ಶಬ್ಧ ಮಾಡದಂತೆ ಬೆದರಿಕೆ ಹಾಕಿದ. ನಾನು ಜೇಹ್ ಕಡೆಗೆ ಓಡಿದೆ" ಎಂದು ಆ ಘಟನೆಯ ಬಗ್ಗೆ ತಿಳಿಸಿದ್ದಾರೆ.
ದುಷ್ಕರ್ಮಿಯ ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಬ್ಲೇಡ್ ಮಾದರಿಯ ಕತ್ತಿ ಇತ್ತು. ಆತ ಕೂಡಲೇ ನನ್ನ ಕಡೆ ಧಾವಿಸಿ ಹಲ್ಲೆ ನಡೆಸಿದ. ನನ್ನ ಮಣಿಕಟ್ಟಿಗೆ ಗಾಯವಾಗಿದೆ. ಬಳಿಕ ಏನು ಬೇಕು ಎಂದು ಕೇಳಿದಾಗ 1 ಕೋಟಿ ರೂ. ಬೇಕು ಎಂದು ಹೇಳಿದ. ಬಳಿಕ ತಾನು ಕೂಗಿಕೊಂಡಾಗ ಸೈಫ್ ಅಲಿಖಾನ್ ಹಾಗೂ ಕರೀನಾ ಬಂದರು. ದುರ್ಷರ್ಮಿಯನ್ನು ಸೈಫ್ ಪ್ರಶ್ನಿಸುತ್ತಿದ್ದಂತೆ ಅವರ ಮೇಲೆ ಹಲ್ಲೆ" ನಡೆಸಿದ ಎಂದು ಎಲಿಯಾಮ ವಿವರಿಸಿದ್ದಾರೆ.
ತೈಮೂರ್ ದಾದಿ ಕೂಡ ತಡೆಯಲು ಹೋದಾಗ ಆಕೆಯ ಮೇಲೆಯೂ ಹಲ್ಲೆ ನಡೆಸಿದ. ಬಳಿಕ ನಾವೆಲ್ಲಾ ಮೇಲಿನ ಮಹಡಿಗೆ ಓಡಿದೆವು. ಇನ್ನುಳಿದ ಸಿಬ್ಬಂದಿ ಎಲ್ಲರೂ ಅಷ್ಟರಲ್ಲಿ ಎದ್ದು ಬಂದರು. ಆದರೆ ದುಷ್ಕರ್ಮಿ ಅಲ್ಲಿ ಓಡಿ ಹೋಗಿದ್ದ ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಇದು ನಿಜಕ್ಕೂ ನಮ್ಮ ಕುಟುಂಬಕ್ಕೆ ಸವಾಲಿನ ದಿನ. ನಾವು ಇನ್ನು ಇದರಿಂದ ಹೊರ ಬರಬೇಕಿದೆ. ಮಾಧ್ಯಮಗಳು ಹಾಗೂ ಪಾಪರಾಜಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರೂ ಕೂಡ ಊಹಾಪೋಹ ಸುದ್ದಿಗಳನ್ನು ಹರಡಬೇಡಿ. ನಿಮ್ಮೆಲ್ಲರ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ಆದರೂ ನಿರಂತರ ಸುದ್ದಿಪ್ರಸಾರದಿಂದ ನಮ್ಮ ಭದ್ರತೆಗೆ ತೊಂದರೆ ಆಗಬಹುದು. ಈ ಘಟನೆಯಿಂದ ಸುಧಾರಿಸಿಕೊಳ್ಳಲು ಕೊಂಚ ಸಮಯ ಬೇಕು. ನಮ್ಮ ಗೌಪ್ಯತೆ ಗೌರವಿಸಿ" ಎಂದು ಮನವಿ ಮಾಡಿದ್ದಾರೆ.


Click it and Unblock the Notifications










