'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅದ್ವಾನಿ ಪಾತ್ರಕ್ಕೆ ಸರ್ಕಸ್ ಕಲಾವಿದೆ 'ಫಿಯರ್‌ಲೆಸ್ ನಡಿಯಾ' ಸ್ಫೂರ್ತಿನಾ?

ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ನಟೀಮಣಿಯರ ಕಾರುಬಾರು ಜೋರಾಗಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಪಾತ್ರಗಳ ಹೆಸರು, ಲುಕ್ ಸಹ ರಿವೀಲ್ ಆಗಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ನಿಧಾನವಾಗಿ ಒಂದೊಂದೇ ಪಾತ್ರಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಟೋನಿ ಪಾತ್ರದಲ್ಲಿ ಅಕ್ಷಯ್ ಒಬೆರಾಯ್, ಸಾಲ್ವಡಾರ್ ಪಾತ್ರದಲ್ಲಿ ಡ್ಯಾರೆಲ್ ಡಿ'ಸಿಲ್ವಾ ಹಾಗೂ ಕರ್ಮಾಡಿ ಪಾತ್ರದಲ್ಲಿ ಸುದೇವ್ ನಾಯರ್ ಲುಕ್ ರಿವೀಲ್ ಆಗಿದೆ. ನಟ ಯಶ್ ಕೂಡ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ.

Rocking Star Yash s Toxic Is Kiara Advani s Nadia Inspired by Fearless Nadia

ಈಗಾಗಲೇ ಚಿತ್ರದ 3 ಟೀಸರ್‌ಗಳು ರಿಲೀಸ್ ಆಗಿದೆ. ಯಾವುದರಲ್ಲಿ ಕೂಡ ನಟಿಯರ ದರ್ಶನ ಆಗಿಲ್ಲ. ಬೇಕೆಂದೇ ಚಿತ್ರತಂಡ ನಟಿಯರ ಝಲಕ್ ತೋರಿಸಿಲ್ಲ. ಟ್ರೈಲರ್‌ನಲ್ಲಿ ಗಂಗಾ(ನಯನತಾರ), ನಾಡಿಯಾ(ಕಿಯಾರಾ ಅದ್ವಾನಿ), ಎಲಿಜಬೆತ್(ಹುಮಾ ಖುರೇಷಿ), ಮೆಲ್ಲಿಸಾ(ರುಕ್ಮಿಣಿ) ಹಾಗೂ ರೆಬೆಕಾ(ತಾರಾ ಸುತಾರಿಯಾ) ಆರ್ಭಟದ ಗ್ಲಿಂಪ್ಸ್ ನೋಡಲು ಸಿಗಬಹುದು. ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇರುವಂತೆ ಕಾಣುತ್ತಿದೆ. ಅದರಲ್ಲೂ ಬಾಲಿವುಡ್ ಬ್ಯೂಟಿ ಕಿಯಾರಾ ಮಾಡಿರುವ ನಾಡಿಯಾ ಪಾತ್ರದ ಬಗ್ಗೆ ಹೊಸದೊಂದು ಚರ್ಚೆ ಶುರುವಾಗಿದೆ.

ನಿಜ ಜೀವನದ ಪಾತ್ರಗಳು, ಘಟನೆಗಳಿಂದ ಪ್ರೇರಣೆಗೊಂಡು ಸಿನಿಮಾ ಮಾಡುವುದು ಹೊಸದೇನು ಅಲ್ಲ. ಕೆಲವೊಮ್ಮೆ ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ಕಥೆ, ಚಿತ್ರಕಥೆ ಅಥವಾ ಪಾತ್ರಪೋಷಣೆಯಲ್ಲಿ ಸ್ಫೂರ್ತಿ ಪಡೆಯುವುದನ್ನು ನೋಡಿದ್ದೇವೆ. 'ಟಾಕ್ಸಿಕ್' ಚಿತ್ರಕ್ಕೂ ಸರ್ಕಸ್‌ಗೂ ಬಹಳ ನಂಟಿದೆ. ಗೋವಾ ಹಿನ್ನೆಲೆಯಲ್ಲಿ 50-60ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಚಿತ್ರದ 'ರಾಯಲ್ ಸರ್ಕಸ್' ಸುತ್ತಾ ಸಾಕಷ್ಟು ಕಥೆ ನಡೆಯಲಿದೆ. ಕೆಲ ದಿನಗಳ ಹಿಂದೆ ನಾಡಿಯಾ ಆಗಿ ಕಿಯಾರಾ ಪಾತ್ರ ಪರಿಚಯಿಸಲಾಗಿತ್ತು.

Rocking Star Yash s Toxic Is Kiara Advani s Nadia Inspired by Fearless Nadia

ನಾಡಿಯಾ ಲುಕ್ ನೋಡಿದರೆ ಸರ್ಕಸ್‌ನಲ್ಲಿ ಕೆಲಸ ಮಾಡುವ ಕಲಾವಿದೆ ರೀತಿ ಕಾಣುತ್ತಿದೆ. ಇದೇ ಕಾರಣಕ್ಕೆ ಫಿಯರ್‌ಲೆಸ್ ನಡಿಯಾ ಈ ಪಾತ್ರಕ್ಕೆ ಸ್ಫೂರ್ತಿನಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. 1930ರ ದಶಕದಲ್ಲಿ ಭಾರತದ ಮೊದಲ ಮಹಿಳಾ ಆಕ್ಷನ್ ತಾರೆ ಮೇರಿ ಆನ್ ಇವಾನ್ಸ್ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಫಿಯರ್‌ಲೆಸ್ ನಾಡಿಯಾ ಎಂದು ಆಕೆ ಜನಪ್ರಿಯರಾಗಿದ್ದರು.

1930 ರ ದಶಕದ ಆರಂಭದಲ್ಲಿ ಜಾರ್ಕೊ ಸರ್ಕಸ್‌ನಲ್ಲಿ ಟ್ರಾಪೆಜ್ ಕಲಾವಿದೆ ಮತ್ತು ನರ್ತಕಿಯಾಗಿ ನಾಡಿಯಾ ಪ್ರದರ್ಶನ ನೀಡುತ್ತಿದ್ದರು. ಮುಂದೆ ಚಿತ್ರರಂಗ ಪ್ರವೇಶಿಸಿದ್ದರು. ಜಾರ್ಕೊ ಸರ್ಕಸ್‌ ಕಲಾವಿದೆಯಾಗಿ ಆಗಿ ಭಾರತದಾದ್ಯಂತ ಸುತ್ತಾಡಿದ್ದರು. ತಮ್ಮ ಜಿಮ್ನಾಸ್ಟಿಕ್ ಕೌಶಲ್ಯ ಮತ್ತು ಧೈರ್ಯಶಾಲಿ ಸಾಹಸಗಳ ಮೂಲಕ ನೋಡುಗರನ್ನು ರಂಜಿಸಿದ್ದರು. ಹಾಗಾಗಿ ಆಕೆಗೂ 'ಟಾಕ್ಸಿಕ್' ಚಿತ್ರದ ನಾಡಿಯಾಗೂ ಲಿಂಕ್ ಇದ್ಯಾ, ಅಥವಾ ಬರೀ ಆಕೆ ಹೆಸರನ್ನು ಮಾತ್ರ ಬಳಸಿಕೊಂಡಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ.

ಜಾರ್ಕೊ ಸರ್ಕಸ್‌ನಲ್ಲಿ ಫಿಯರ್‌ಲೆಸ್ ನಾಡಿಯಾ ಗಮನ ಸೆಳೆಯುತ್ತಿದ್ದ ಕಾಲಘಟ್ಟದಲ್ಲೇ 'ಟಾಕ್ಸಿಕ್' ಸಿನಿಮಾ ಕಥೆ ಕೂಡ ಮೂಡಿ ಬರುವ ಸಾಧ್ಯತೆಯಿದೆ. ಹಾಗಾಗಿ ಆ ಪಾತ್ರದಿಂದ ಪ್ರೇರಣೆಗೊಂಡಿರಬಹುದು ಎನ್ನುವುದು ಕೆಲವರ ವಾದ. ನನ್ನಿಂದ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಹೆಚ್ಚಿನದನ್ನು ಬೇಡುವ ಪಾತ್ರ ಇದು. ಪಾತ್ರಕ್ಕಾಗಿ ಬಹಳ ಪರಿವರ್ತನೆ ಆಗುವಂತಾಯಿತು. ಈ ಪಾತ್ರಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿರುವುದಾಗಿ ಕಿಯಾರಾ ಹೇಳಿಕೊಂಡಿದ್ದರು.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದಲೇ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

Read more about: yash toxic kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X