ನಟಿ ಅನುಷ್ಕಾರನ್ನು ಅನ್ ಫಾಲೋ ಮಾಡಿದ ರೋಹಿತ್ ಶರ್ಮಾ
ಭಾರತದ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೋಹ್ಲಿ ನಡುವೆ ಮುನಿಸು ಇದೆ ಎನ್ನುವ ಸುದ್ದಿ ಹಿಂದಿನಿಂದಲೂ ಇದೆ. ಬರೀ ಸುದ್ದಿ ಮಾತ್ರವಲ್ಲ, ಇದಕ್ಕೆ ಕೆಲವು ಘಟನೆಗಳು ಪುಷ್ಟಿ ನೀಡುತ್ತ ಬರುತ್ತಿವೆ.
ಈ ಹಿಂದೆ ಟ್ವಿಟ್ಟರ್ ನಲ್ಲಿ ಕೊಹ್ಲಿರನ್ನು ರೋಹಿತ್ ಅನ್ ಫಾಲೋ ಮಾಡಿದ್ದರು. ಆದರೆ, ಇದೀಗ ಇನ್ ಸ್ಟಾಗ್ರಾಮ್ ನಲ್ಲಿಯೂ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ರನ್ನು ರೋಹಿತ್ ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ ವಿರಾಟ್ ಹಾಗೂ ರೋಹಿತ್ ನಡುವೆ ಮನಸ್ತಾಪ ಇದೆ ಎಂಬ ಚರ್ಚೆ ಜಾಸ್ತಿಯಾಗಿದೆ.

ಅಚ್ಚರಿಯ ವಿಷಯ ಏನೆಂದರೆ, ತಮ್ಮನ್ನು ಅನ್ ಫಾಲೋ ಮಾಡಿದ್ದರೂ, ವಿರಾಟ್ ಕೊಹ್ಲಿ ಮಾತ್ರ ರೋಹಿತ್ ರನ್ನು ಈಗಲೂ ಇನ್ ಸ್ಟಾಗ್ರಾಮ್ ನಲ್ಲಿ ಹಿಂಬಾಲಿಸುತ್ತಿದ್ದಾರೆ. ಆದರೆ, ಅನುಷ್ಕಾ, ರೋಹಿತ್ ಹಾಗೂ ಅವರ ಪತ್ನಿ ರಿತಿಕಾ ಇಬ್ಬರನ್ನು ಫಾಲೋ ಮಾಡುತ್ತಿಲ್ಲ.
ಆಗಾಗ ತಮ್ಮ ಬಗ್ಗೆ ಚರ್ಚೆ ಆಗುತ್ತಿದ್ದರೂ, ರೋಹಿತ್-ಕೊಹ್ಲಿ ಇಬ್ಬರೂ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಆದರೆ, ಇಬ್ಬರ ವರ್ತನೆ ಮಾತ್ರ ಅನುಮಾನ ಮೂಡಿಸುವಂತಿವೆ.
ಒಬ್ಬ ಸೆಲೆಬ್ರೆಟಿ ಇನ್ನೊಬ್ಬ ಸೆಲೆಬ್ರೆಟಿಯನ್ನು ಫಾಲೋ ಮಾಡಿದರೇ ಮಾತ್ರ ಅವರ ನಡುವಿನ ಸಂಬಂಧ ಚೆನ್ನಾಗಿದೆ ಅಂತೇನು ಅಲ್ಲ. ಆದರೆ, ಇಷ್ಟು ದಿನ ಫಾಲೋ ಮಾಡಿದ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಅನ್ ಫಾಲೋ ಮಾಡಿದಾಗ ಯಾಕೆ..? ಎನ್ನುವ ಪ್ರಶ್ನೆ ಬರುತ್ತದೆ. ಇಬ್ಬರ ನಡುವೆ ಏನಾಯ್ತು..? ಎನ್ನುವ ಅನುಮಾನ ಅನೇಕ ಗಾಸಿಪ್ ಗಳಿಗೆ ಕಾರಣ ಆಗುತ್ತದೆ.


Click it and Unblock the Notifications











