Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್‌ಗೆ ಬೈಯ್ಯುವವರ ವಿರುದ್ಧ ತಿರುಗಿ ಬಿದ್ದ ರೋಹಿತ್ ಶೆಟ್ಟಿ
ಈ ವರ್ಷ ದಕ್ಷಿಣ ಭಾರತ ಚಿತ್ರರಂಗಗಳಿಗೆ ಚಿನ್ನದ ವರ್ಷವಾದರೆ ಬಾಲಿವುಡ್‌ಗೆ ಮಾತ್ರ ಕರಾಳ ವರ್ಷ. ದಕ್ಷಿಣ ಭಾರತದ ಸಿನಿಮಾಗಳು ಸಾಲು-ಸಾಲಾಗಿ ಹಿಟ್ ಆಗುತ್ತಿದ್ದರೆ ಬಾಲಿವುಡ್ ಮಾತ್ರ ಒಂದೇ ಒಂದು ಪಕ್ಕಾ ಸೂಪರ್ ಹಿಟ್ ಸಿನಿಮಾ ನೀಡಲು ತಿಣುಕಾಡಿ ಸೋತಿತು.
ಬಾಲಿವುಡ್‌ನ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಸಿನಿಮಾಗಳು ಇನ್ನಿಲ್ಲದಂತೆ ರೂಲ್ ಮಾಡಿದವು. ದಶಕಗಳಿಂದಲೂ ಹಿಂದಿ ಸಿನಿಮಾ ನೋಡುತ್ತಿದ್ದ ಸಿನಿಮಾ ಪ್ರೇಕ್ಷಕರೂ ಸಹ ದಕ್ಷಿಣ ಭಾರತದ ಸಿನಿಮಾಕ್ಕಾಗಿ ಕಾಯುವಂತಾಯಿತು.
ಇದೇ ಕಾರಣಕ್ಕೆ ಹಲವು ಬಾಲಿವುಡ್ ಮ್ಯಾಗಜೀನ್‌ಗಳೇ ಬಾಲಿವುಡ್‌ನ ಸುವರ್ಣಯುಗ ಮುಗಿಯಿತೆಂದು ಬರೆದವು. ಹಿಂದಿ ಸಿನಿಮಾ ವೀಕ್ಷಿಸುವ ಸಾಮಾನ್ಯ ಪ್ರೇಕ್ಷಕ ಸಹ ಹಿಂದಿ ಸಿನಿಮಾ ರಂಗದ ವಿರುದ್ಧ ತಿರುಗಿ ಬಿದ್ದ. ಬಾಲಿವುಡ್ ಕೇವಲ ಮುಂಬೈನ ಶ್ರೀಮಂತರಿಗಾಗಿ ಸಿನಿಮಾ ಮಾಡುತ್ತಿದೆ. ಇನ್ನು ಮುಂದೆ ಬಾಲಿವುಡ್ ಕತೆ ಮುಗಿಯುತ್ತದೆ ಎನ್ನಲಾಯಿತು. ಸ್ವತಃ ಬಾಲಿವುಡ್ ಮಂದಿಯೇ ಬಾಲಿವುಡ್ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.
ನಿರ್ದೇಶಕ ಅನುರಾಗ್ ಕಶ್ಯಪ್, ಹಿರಿಯ ನಿರ್ದೇಶಕ ಸೂರಜ್ ಬರ್ಜಾತಿಯಾ, ನಿರ್ಮಾಪಕ ಬೋನಿ ಕಪೂರ್, ನಟಿ ಕಂಗನಾ ರನೌತ್ ಇನ್ನೂ ಹಲವರು ಬಾಲಿವುಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈಗ ಒಬ್ಬ ಬಾಲಿವುಡ್ ನಿರ್ದೇಶಕ ಬಾಲಿವುಡ್ ಅನ್ನು ದೂರುವವರ ವಿರುದ್ಧ ನಿಂತಿದ್ದಾರೆ.

ಬಾಲಿವುಡ್ ಪರ ನಿಂತ ರೋಹಿತ್ ಶೆಟ್ಟಿ
ಬಾಲಿವುಡ್‌ನ ಪಕ್ಕಾ ಪೈಸಾ ವಸೂಲ್ ನಿರ್ದೇಶಕ ಎಂದೇ ಖ್ಯಾತರಾಗಿರುವ ರೋಹಿತ್ ಶೆಟ್ಟಿ ಬಾಲಿವುಡ್ ಅನ್ನು ಬೈಯ್ಯುವವರಿಗೆ ಉತ್ತರ ನೀಡಿದ್ದು, ''ಒಂದು ವರ್ಷ ಕೆಟ್ಟದಾಗಿ ಆಗಿದೆ ಎಂದ ಮಾತ್ರಕ್ಕೆ ಬಾಲಿವುಡ್ ಮುಳುಗಿ ಹೋಗಿಲ್ಲ'' ಎಂದಿದ್ದಾರೆ. ವಿಚಿತ್ರವೆಂದರೆ ಅವರು ಈ ಹೇಳಿಕೆ ನೀಡಿರುವ ಬೆನ್ನಲ್ಲೆ ಅವರೇ ನಿರ್ದೇಶಿಸಿರುವ 'ಸರ್ಕಸ್' ಸಿನಿಮಾ ಬಿಡುಗಡೆ ಆಗಿ ತೀರ ಮಂದ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿದೆ.

''ದಕ್ಷಿಣ ಭಾರತದ ಸಿನಿಮಾಗಳು ಮೊದಲೇ ನಿರ್ಮಾಣವಾಗಿದ್ದವು''
ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಿರ್ದೇಶಕ ರೋಹಿತ್ ಶೆಟ್ಟಿ, ''ಕಳೆದ ಎರಡು ವರ್ಷ ನಾವು ಕೋವಿಡ್‌ನಿಂದ ಸಮಸ್ಯೆಗೆ ಒಳಪಟ್ಟಿದ್ದೆವು. ನಮ್ಮ ದೊಡ್ಡ ಸಿನಿಮಾಗಳು ಪ್ರಾರಂಭವಾಗಲಿಲ್ಲ. ಅಥವಾ ನಿಂತೇ ಹೋದವು. ದಕ್ಷಿಣ ಭಾರತದಲ್ಲಿ ಹಿಟ್ ಆದ ಸಿನಿಮಾಗಳು, ಕೋವಿಡ್‌ಗೆ ಮೊದಲೇ ತಯಾರಾಗಿಬಿಟ್ಟಿದ್ದವು ಹಾಗಾಗಿ ಹಿಟ್ ಆದವು'' ಎಂದಿದ್ದಾರೆ.

ಹಿಟ್ ಹಿಂದಿ ಸಿನಿಮಾಗಳ ಪಟ್ಟಿ ಕೊಟ್ಟ ರೋಹಿತ್ ಶೆಟ್ಟಿ
''ಬಾಲಿವುಡ್ ಸಿನಿಮಾಗಳು ಓಡುತ್ತಿಲ್ಲ ಎಂಬುದು ಸುಳ್ಳು. ಕೋವಿಡ್ ಬಳಿಕ ನಮ್ಮ 'ಸೂರ್ಯವಂಶಿ' ಬಿಡುಗಡೆ ಆಯ್ತು ಸೂಪರ್ ಹಿಟ್. ಆ ನಂತರ 'ದಿ ಕಾಶ್ಮೀರ್ ಫೈಲ್ಸ್' ಆ ನಂತರ 'ಗಂಗೂಬಾಯಿ ಕಾಠಿಯಾವಾಡಿ', 'ಭೂಲ್ ಭುಲಯ್ಯ 2', 'ದೃಶ್ಯಂ 2' ಈ ಸಿನಿಮಾಗಳೆಲ್ಲ ಸೂಪರ್ ಹಿಟ್ ಆದವು. ನೀವು ಸಣ್ಣ ವಯಸ್ಸಿನಿಂದಲೂ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅವರನ್ನು ನೋಡುತ್ತಲೇ ಬಂದಿದ್ದಿರಿ. ಅವರ ಸಿನಿಮಾಗಳನ್ನೂ ನೋಡುತ್ತಲೇ ಬಂದಿದ್ದೀರಿ ಅಲ್ಲವೆ?'' ಎಂದು ಪ್ರಶ್ನೆ ಮಾಡಿದ್ದಾರೆ ರೋಹಿತ್ ಶೆಟ್ಟಿ.

''ಒಂದು ವರ್ಷ ಕೆಟ್ಟದಾಯ್ತು ಎಂದು ಬಾಲಿವುಡ್ ಮುಳುಗಿತು ಎನ್ನುವುದೇ''
''ಮುಘಲ್-ಎ-ಅಜಮ್' ನಾವು ಮಾಡಿದ್ದು, 'ಮದರ್ ಇಂಡಿಯಾ' ನಾವು ಮಾಡಿದ್ದು, 'ಶೋಲೆ' ನಾವು ಮಾಡಿದ್ದು. ನೀವು 'ಅಮರ್ ಅಕ್ಬರ್ ಆಂಟೊನಿ' ನೋಡಿರುತ್ತೀರಿ, ನೀವು 'ಡಾನ್' ನೋಡಿರುತ್ತೀರಿ, 'ಹಮ್ ಆಪ್ಕೆ ಹೈ ಕೋನ್', 'ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ', 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಂ', 'ಸೂರ್ಯವಂಶಿ', 'ಸಿಂಘಂ', 'ಹೇರಾ ಪೇರಿ', 'ಗೋಲ್ ಮಾಲ್', 'ಲಗೆ ರಹೊ ಮುನ್ನಾ ಭಾಯಿ' ಇನ್ನೂ ಎಷ್ಟೋ ಸಿನಿಮಾಗಳನ್ನು ನೋಡಿರುತ್ತೀರಿ. ಒಂದು ವರ್ಷ ಕೆಟ್ಟದಾಗಿ ಆದ ಮಾತ್ರಕ್ಕೆ ಬಾಲಿವುಡ್ ಸರಿ ಇಲ್ಲ ಎನ್ನುವುದರಲ್ಲಿ ಅರ್ಥವೇ ಇಲ್ಲ'' ಎಂದಿದ್ದಾರೆ ರೋಹಿತ್ ಶೆಟ್ಟಿ.