ಕೋಟ್ಯಂತರ ರುಪಾಯಿ ಸಂಭಾವನೆ ಪಡೆವ ಈ ಸ್ಟಾರ್ ನಿರ್ದೇಶಕನ ಮೊದಲ ಸಂಬಳವೆಷ್ಟು ಗೊತ್ತೆ?

ಏನೋ ಆಗಿದ್ದವರು ಕೆಲವೇ ದಿನಗಳಲ್ಲಿ ದೊಡ್ಡ ಸ್ಟಾರ್‌ಗಳಾಗುವ ಅವಕಾಶ ಚಿತ್ರರಂಗದಲ್ಲಿದೆ. ಆದರೆ ಪ್ರತಿಭೆ ಮತ್ತು ಶ್ರಮ ಜೊತೆಗೆ ಅದೃಷ್ಟ ಸಹ ಜೊತೆಗಿರಬೇಕು ಅಷ್ಟೆ.

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತಿರಾಜು ಭಾರತದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿದ್ದಾರೆ. ದಿನದ ಊಟಕ್ಕೆ ಪರದಾಡುತ್ತಿದ್ದ ತೇಜ ತೆಲುಗಿನ ನಂಬರ್ 1 ನಿರ್ದೇಶಕ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ಕನ್ನಡದ ಹಿಟ್ ನಿರ್ದೇಶಕರಲ್ಲಿ ಒಬ್ಬರು. ಹೀಗೆ ಉದಾಹರಣೆ ಕೊಡುತ್ತಾ ಸಾಗಿದರೆ ಇನ್ನೂ ಅದೆಷ್ಟೋ ಇವೆ.

ರೋಹಿತ್ ಶೆಟ್ಟಿ ಬಾಲಿವುಡ್‌ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಮಸಾಲೆಭರಿತ ಸಿನಿಮಾ ಮಾಡುವುದರಲ್ಲಿ ಅವರನ್ನು ಮೀರಿಸುವವರಿಲ್ಲ ಎನ್ನಲಾಗುತ್ತದೆ. ಹಾಸ್ಯ ಮತ್ತು ಆಕ್ಷನ್ ಇವೆರಡು ಬಿಟ್ಟರೆ ಮತ್ತೊಂದು ಮಾದರಿಗೆ ಕೈಹಾಕದ ರೋಹಿತ್ ಶೆಟ್ಟಿ ಸಿನಿಮಾಗಳ ಬಗ್ಗೆ ಸಾಕಷ್ಟು ಮಂದಿ ವಿಮರ್ಶೆ ಮಾಡುತ್ತಾರೆ, ಆದರೆ ಅವರೊಬ್ಬ ಸತತ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಎಂಬುದನ್ನು ಟೀಕಿಸುವವರೂ ಒಪ್ಪಲೇ ಬೇಕು.

ಇಂದು ಸಿನಿಮಾ ಒಂದಕ್ಕೆ ಕೋಟ್ಯಂತರ ರುಪಾಯಿ ಸಂಭಾವನೆ ಪಡೆವ ರೋಹಿತ್ ಶೆಟ್ಟಿ ತಮ್ಮ ಮೊತ್ತ ಮೊದಲ ಕೆಲಸಕ್ಕೆ ಪಡೆದ ಸಂಬಳವೆಷ್ಟು ಗೊತ್ತೆ? ಕೇವಲ 35 ರುಪಾಯಿ. ಈ ವಿಷಯವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ರೋಹಿತ್ ಶೆಟ್ಟಿಯ ಮೊದಲ ಸಂಬಳ ಎಷ್ಟು?

ರೋಹಿತ್ ಶೆಟ್ಟಿಯ ಮೊದಲ ಸಂಬಳ ಎಷ್ಟು?

''ನಾನು ಸ್ಟಂಟ್‌ಮ್ಯಾನ್ ಆಗಿ ಕೆಲಸ ಮಾಡಲು ಪ್ರಾರಂಭ ಮಾಡಿದಾಗ ನನಗೆ ಕೇವಲ 35 ರುಪಾಯಿ ಸಂಬಳ ದೊರೆಯುತ್ತಿತ್ತು ಎಂದಿದ್ದಾರೆ. ನಾನು ಆ 35 ರುಪಾಯಿಯಲ್ಲಿ ಊಟ ಮಾಡುತ್ತಿದ್ದೆ, ತುಸು ಹಣವನ್ನು ಮನೆಯಲ್ಲಿ ನೀಡಬೇಕಿತ್ತು, ಹಾಗಾಗಿ ಬಸ್ಸಿನಲ್ಲಿ ಹೋಗುವ ಬದಲು ನಡೆದುಕೊಂಡು ಮನೆ ಸೇರುತ್ತಿದ್ದೆ'' ಎಂದಿದ್ದಾರೆ ರೋಹಿತ್ ಶೆಟ್ಟಿ.

ಹಣ ಉಳಿಸಲು ನಡೆದುಕೊಂಡು ಓಡಾಡುತ್ತಿದ್ದೆ: ರೋಹಿತ್

ಹಣ ಉಳಿಸಲು ನಡೆದುಕೊಂಡು ಓಡಾಡುತ್ತಿದ್ದೆ: ರೋಹಿತ್

''ನಾವು ಮುಂಬೈನ ಸಾಂತಾಕ್ರೂಜ್‌ನಲ್ಲಿದ್ದೆವು, ನಂತರ ಅಲ್ಲಿಂದ ದೈಸರ್ ಏರಿಯಾದ ನಮ್ಮ ಅಜ್ಜಿ ಮನೆಗೆ ಶಿಫ್ಟ್ ಆದೆವು. ಆವಾಗ ನಾವು ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೆವು. ಹಾಗಾಗಿ ನನಗೆ ಬಂದ ಹಣವನ್ನು ಖರ್ಚು ಮಾಡದೆ ಚಿತ್ರೀಕರಣದ ಸೆಟ್‌ಗೆ ನಡೆದುಕೊಂಡೇ ಓಡಾಡುತ್ತಿದ್ದೆ. ಬಿಸಿಲಿನಲ್ಲಿ 1 ಗಂಟೆ 2 ಗಂಟೆ ನಡೆದುಕೊಂಡೇ ಓಡಾಡುತ್ತಿದ್ದೆ, ಅಂಧೇರಿಯಿಂದ ಮಲಾಡ್‌ಗೆ ಸಾಕಷ್ಟು ಬಾರಿ ನಡೆದಿದ್ದೇನೆ. ಅಲ್ಲಿನ ಸಣ್ಣ-ಸಣ್ಣ ಏರಿಯಾಗಳ ಪರಿಚಯವೂ ನನಗೆ ಇದೆ'' ಎಂದಿದ್ದಾರೆ ರೋಹಿತ್ ಶೆಟ್ಟಿ.

ರೋಹಿತ್ ಶೆಟ್ಟಿ ತಂದೆ ಕರ್ನಾಟಕದವರು

ರೋಹಿತ್ ಶೆಟ್ಟಿ ತಂದೆ ಕರ್ನಾಟಕದವರು

ರೋಹಿತ್ ಶೆಟ್ಟಿ ತಂದೆ ಎಂ.ಬಿ.ಶೆಟ್ಟಿ ಕರ್ನಾಟಕದ ಮಂಗಳೂರಿನವರು. ಕನ್ನಡದ ಹಲಾವರು ಸಿನಿಮಾಗಳಲ್ಲಿ ಎಂಬಿ ಶೆಟ್ಟಿ ನಟಿಸಿದ್ದಾರೆ ಮತ್ತು ಫೈಟ್ ನಿರ್ದೇಶಕ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ, 'ಆಪರೇಷನ್ ಡೈಮಂಡ್ ರಾಕೆಟ್', 'ಸಿಂಹದ ಮರಿ ಸೈನ್ಯ', 'ಕಿಲಾಡಿ ಕಿಟ್ಟು' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದು ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಿಗೆ ಸ್ಟಂಟ್ ಮ್ಯಾನ್ ಆಗಿ, ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.

ಸ್ಟಂಟ್ ಮ್ಯಾನ್ ಆಗಿದ್ದ ರೋಹಿತ್ ಶೆಟ್ಟಿ

ಸ್ಟಂಟ್ ಮ್ಯಾನ್ ಆಗಿದ್ದ ರೋಹಿತ್ ಶೆಟ್ಟಿ

ರೋಹಿತ್ ಶೆಟ್ಟಿ ಸಹ ಸ್ಟಂಟ್ ಮ್ಯಾನ್ ಆಗಿಯೇ ಬಾಲಿವುಡ್‌ನಲ್ಲಿ ವೃತ್ತಿ ಪ್ರಾರಂಭಿಸಿದರು. ಆ ನಂತರ ಹೀರೋಗಳಿಗೆ ಸ್ಟಂಟ್ ಡಬಲ್ ಅಥವಾ ಡ್ಯೂಪ್ ಆಗಿ ಕೆಲಸ ಮಾಡಲಾರಂಭಿಸಿದರು. ನಂತರ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ 2003 ರಲ್ಲಿ ಮೊದಲ ಬಾರಿಗೆ ಅಜಯ್ ದೇವಗನ್ ಜೊತೆಗೆ 'ಜಮೀನ್' ಹೆಸರಿನ ಸಿನಿಮಾ ಮಾಡಿದರು. ಸಿನಿಮಾ ಸಾಧಾರಣ ಹಿಟ್ ಆಯಿತು. ಆ ನಂತರ 2006ರಲ್ಲಿ ಅಜಯ್ ದೇವಗನ್ ಅವರನ್ನೇ ಹಾಕಿಕೊಂಡು 'ಗೋಲ್‌ಮಾಲ್' ಸಿನಿಮಾ ಮಾಡಿದರು ಅದು ಸೂಪರ್ ಡೂಪರ್ ಹಿಟ್ ಆಯಿತು. ಬಳಿಕ ಅಜಯ್ ದೇವಗನ್ ಗಾಗಿ ಹಲವು ಸಿನಿಮಾಗಳನ್ನು ಮಾಡಿದರು. ಕೊನೆಗೆ ಹಿಟ್ ನಿರ್ದೇಶಕ ಎನಿಸಿಕೊಂಡರು. ಇದೀಗ ಅವರ ನಿರ್ದೇಶನದ 'ಸೂರ್ಯವಂಶಿ' ಸಿನಿಮಾ ಬಿಡುಗಡೆ ಆಗಿದ್ದು ಈ ಸಿನಿಮಾವು ಕೆಲವೇ ದಿನಗಳಲ್ಲಿ 175 ಕೋಟಿ ಹಣ ಗಳಿಸಿ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ.

More from Filmibeat

English summary
Bollywood star director Rohit Shetty's first remuneration was just 35 rs. He said we had very bad time I use to walk to save money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X