ಕೋವಿಡ್ ಸಂಕಷ್ಟದ ನಡುವೆಯೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ ಬಾಲಿವುಡ್ ಚಿತ್ರ: ಎಲ್ಲಿ? ಹೇಗೆ?

By Avani Malnad

ಲಾಕ್ ಡೌನ್ ಮಧ್ಯೆ ಜಗತ್ತಿನಾದ್ಯಂತ ಸಿನಿಮಾ ಪ್ರದರ್ಶನಗಳು ಸ್ಥಗಿತಗೊಂಡಿವೆ. ಈ ನಡುವೆ ಬಾಲಿವುಡ್‌ನ ಚಿತ್ರವೊಂದು ತೆರೆಕಾಣಲು ಸಿದ್ಧವಾಗಿದೆ. ಆದರೆ ಇದು ಭಾರತದಲ್ಲಿ ಅಲ್ಲ, ನ್ಯೂಜಿಲೆಂಡ್‌ನಲ್ಲಿ.

Recommended Video

ಬುಲೆಟ್ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್ | Shraddha Srinath on Royal Enfield | Filmibeat Kannada

ರೋಹಿತ್ ಶೆಟ್ಟಿ ನಿರ್ದೇಶನದ 2017ರ 'ಗೋಲ್ ಮಾಲ್ ಅಗೈನ್' ಚಿತ್ರವು ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಯಾಗಲಿದೆ. ನ್ಯೂಜಿಲೆಂಡ್ ಈಗ ಕೊರೊನಾ ವೈರಸ್ ಮುಕ್ತವಾಗಿರುವುದರಿಂದ ಅಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸಿನಿಮಾ ಪ್ರದರ್ಶನಗಳೂ ಆರಂಭಗೊಳ್ಳುತ್ತಿವೆ.

ಕೋವಿಡ್ 19ರ ನಂತರ ಮರು ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ 'ಗೋಲ್‌ಮಾಲ್ ಅಗೈನ್' ಎಂದು ರೋಹಿತ್ ಶೆಟ್ಟಿ ತಿಳಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಪೋಸ್ಟರ್ ಅವೃತ್ತಿಯನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಶೋ ಮಸ್ಟ್ ಗೋ ಆನ್...

ಶೋ ಮಸ್ಟ್ ಗೋ ಆನ್...

ಪೋಸ್ಟರ್ ಮೇಲೆ ತಮ್ಮ ಸಹಿ ನಮೂದಿಸಿರುವ ರೋಹಿತ್ ಶೆಟ್ಟಿ, 'ಸರಿಯಾಗಿ ಹೇಳಿರುವಂತೆ, ಪ್ರದರ್ಶನ ಮುಂದುವರಿಯಲೇಬೇಕು' ಎಂದು ಬರೆದುಕೊಂಡಿದ್ದಾರೆ. ಬಿಕ್ಕಟ್ಟುಗಳ ನಡುವೆ ಹಿಂದಿ ಚಿತ್ರವೊಂದು ಮರುಬಿಡುಗಡೆಯಾಗುತ್ತಿದೆ ಎಂಬ ಸಂತಸ ಸಂಗತಿಯನ್ನು ಅವರು ತಿಳಿಸಿದ್ದಾರೆ.

ಬಹುತಾರಾಗಣ

ಬಹುತಾರಾಗಣ

ಅಜಯ್ ದೇವಗನ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಕುನಾಲ್ ಕೇಮು, ಶ್ರೇಯಸ್ ತಲ್ಪಾಡೆ, ಜಾನಿ ಲಿವರ್, ಪರಿಣೀತಿ ಚೋಪ್ರಾ, ತಬು, ಪ್ರಕಾಶ್ ರಾಜ್ ಮತ್ತು ನೀಲ್ ನಿತಿನ್ ಮುಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗುರುವಾರದಿಂದ ಪ್ರದರ್ಶನ

ಗುರುವಾರದಿಂದ ಪ್ರದರ್ಶನ

'ಚಿತ್ರಮಂದಿರಗಳಲ್ಲಿ ಗೋಲ್ ಮಾಲ್ ಅಗೈನ್ ಅನ್ನು ಮರುಬಿಡುಗಡೆ ಮಾಡಲು ನ್ಯೂಜಿಲೆಂಡ್ ನಿರ್ಧರಿಸಿದೆ. ಕೋವಿಡ್ ನಂತರ ಬಿಡುಗಡೆ ಮಾಡಲಿರುವ ಮೊದಲ ಹಿಂದಿ ಸಿನಿಮಾ ಇದು. ಕೋವಿಡ್ ಮುಕ್ತವಾಗಿರುವ ನ್ಯೂಜಿಲೆಂಡ್‌ನಲ್ಲಿ 'ಗೋಲ್ ಮಾಲ್ ಅಗೈನ್' ಮೂಲಕ ಜೂನ್ 25ರಿಂದ ಚಿತ್ರಮಂದಿರಗಳು ತೆರೆಯಲಿವೆ' ಎಂದು ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

ಈ ಸರಣಿಯ ನಾಲ್ಕನೆಯ ಚಿತ್ರ

ಈ ಸರಣಿಯ ನಾಲ್ಕನೆಯ ಚಿತ್ರ

ಜನಪ್ರಿಯ 'ಗೋಲ್‌ಮಾಲ್' ಸರಣಿಯ ನಾಲ್ಕನೆಯ ಭಾಗವಾಗಿ 'ಗೋಲ್‌ಮಾಲ್ ಅಗೈನ್' ಬಿಡುಗಡೆಯಾಗಿತ್ತು. ಹಾರರ್ ಕಾಮಿಡಿ ಜಾನರ್‌ನ ಈ ಚಿತ್ರ ಅಮೆಜಾನ್ ಪ್ರೈಮ್‌ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಿದೆ. 'ಗೋಲ್‌ಮಾಲ್ ಫೈವ್' ಮಾಡುವುದಾಗಿ ಕಳೆದ ವರ್ಷ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ತಿಳಿಸಿದ್ದರು.

More from Filmibeat

English summary
Rohit Shetty directed Golamaal Again to be re released in COVID free New Zealand on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X