For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಪ್ರಭಾಸ್ ಬಗ್ಗೆ ಹೀಗೊಂದು ಬಿಸಿ ಬಿಸಿ ಸುದ್ದಿ.!

  By Harshitha
  |

  'ಬಾಹುಬಲಿ' ಸಿನಿಮಾ ಯರ್ರಾಬಿರ್ರಿ ಹಿಟ್ ಆದ್ಮೇಲೆ ನಟ ಪ್ರಭಾಸ್ ಇಡೀ ಭಾರತದಲ್ಲಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಪ್ರಭಾಸ್ ಮನೆ ಮುಂದೆ ನಿರ್ಮಾಪಕರು ಸಾಲು ಗಟ್ಟಿ ನಿಂತಿದ್ದಾರೆ. ಹೀಗಿರುವಾಗಲೇ, ನಟ ಪ್ರಭಾಸ್ ಬಗ್ಗೆ ಒಂದು ಬಿಸಿ ಬಿಸಿ ಸುದ್ದಿ ಕೇಳಿ ಬಂದಿದೆ.

  ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿರುವ ಪ್ರಭಾಸ್ ಹಾಗೂ ಬಾಲಿವುಡ್ ಬಾಕ್ಸ್ ಆಫೀಸ್ 'ಟೈಗರ್' ಸಲ್ಮಾನ್ ಖಾನ್ ಒಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸಲ್ಮಾನ್ ಖಾನ್ ಹಾಗೂ ಪ್ರಭಾಸ್ ರವರನ್ನ ಒಂದು ಮಾಡಲು ಹೊರಟಿರುವವರು ನಿರ್ದೇಶಕ ರೋಹಿತ್ ಶೆಟ್ಟಿ ಅಂತೆ ಎಂಬ ಅಂತೆ-ಕಂತೆ ಬಾಲಿವುಡ್ ಅಂಗಳದಲ್ಲಿ ನಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಮುಂದೆ ಓದಿರಿ....

  ರೋಹಿತ್ ಶೆಟ್ಟಿಗೆ ಆಸೆ ಇದ್ಯಂತೆ.!

  ರೋಹಿತ್ ಶೆಟ್ಟಿಗೆ ಆಸೆ ಇದ್ಯಂತೆ.!

  ತಮ್ಮ ಮುಂದಿನ ಆಕ್ಷನ್ ಸಿನಿಮಾದಲ್ಲಿ ನಟ ಪ್ರಭಾಸ್ ಹೀರೋ ಆಗಬೇಕು ಎಂಬ ಆಸೆ ನಿರ್ದೇಶಕ ರೋಹಿತ್ ಶೆಟ್ಟಿಗೆ ಇದ್ಯಂತೆ. ಹಾಗಂತ ಪ್ರಖ್ಯಾತ ದಿನಪತ್ರಿಕೆಯೊಂದು ವರದಿ ಮಾಡಿದೆ.

  ಕಡೆಗೂ 'ಹ್ಞೂಂ' ಎಂದು ಕುತ್ತಿಗೆ ಆಡಿಸಿದ 'ಬಾಹುಬಲಿ' ಹೀರೋ ಪ್ರಭಾಸ್.!

  ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ಇರಬೇಕು.!

  ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ಇರಬೇಕು.!

  ಆಕ್ಷನ್ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಸಲ್ಮಾನ್ ಖಾನ್ ಕೂಡ ಇರಬೇಕು ಎಂಬುದು ರೋಹಿತ್ ಶೆಟ್ಟಿ ಬಯಕೆಯಂತೆ.

  ಎಲ್ಲವೂ ಅಂದುಕೊಂಡಂತೆ ಅಗಬೇಕು.!

  ಎಲ್ಲವೂ ಅಂದುಕೊಂಡಂತೆ ಅಗಬೇಕು.!

  ಎಲ್ಲವೂ ರೋಹಿತ್ ಶೆಟ್ಟಿ ಪ್ಲಾನ್ ಪ್ರಕಾರ ನಡೆದರೆ, ತಮ್ಮ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಪ್ರಭಾಸ್ ಸ್ಕ್ರೀನ್ ಶೇರ್ ಮಾಡುವುದು ಪಕ್ಕಾ ಅಂತೆ.

  ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!

  ಪ್ರಭಾಸ್ ಗೆ 80 ಕೋಟಿ ಕೊಡ್ತಾರಾ.?

  ಪ್ರಭಾಸ್ ಗೆ 80 ಕೋಟಿ ಕೊಡ್ತಾರಾ.?

  ರೋಹಿತ್ ಶೆಟ್ಟಿ ಸಿನಿಮಾದಲ್ಲಿ ಪ್ರಭಾಸ್ ನಟಿಸಬೇಕು ಅಂದ್ರೆ, ಪ್ರಭಾಸ್ ಗೆ ರೋಹಿತ್ ಶೆಟ್ಟಿ 80 ಕೋಟಿ ಕೊಡಬೇಕು. ಅಷ್ಟು ದೊಡ್ಡ ಮೊತ್ತ ನೀಡಲು ರೋಹಿತ್ ಶೆಟ್ಟಿ ಹಾಗೂ ಅವರ ನಿರ್ಮಾಪಕರು ರೆಡಿ ಇದ್ದಾರಾ.?

  ಇದೆಲ್ಲ 'ಗಾಸಿಪ್' ಎಂದ ರೋಹಿತ್ ಶೆಟ್ಟಿ

  ಇದೆಲ್ಲ 'ಗಾಸಿಪ್' ಎಂದ ರೋಹಿತ್ ಶೆಟ್ಟಿ

  ಈ ಗಾಸಿಪ್ ರೋಹಿತ್ ಶೆಟ್ಟಿ ಕಿವಿಗೂ ಬಿದ್ದ ಮೇಲೆ, ''ಇದೆಲ್ಲ ಸುಳ್ಳು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿಗೆ, ಸದ್ಯಕ್ಕೆ ಸಲ್ಮಾನ್ ಹಾಗೂ ಪ್ರಭಾಸ್ ಪರದೆ ಹಂಚಿಕೊಳ್ಳುವುದು ಅನುಮಾನ. ಮುಂದಿನ ದಿನಗಳಲ್ಲಿ ಇದೇ ಗಾಸಿಪ್ ನಿಜ ಆದರೂ ಆಗಬಹುದು. ಯಾರಿಗೊತ್ತು.?!

  English summary
  According to the latest Grapevine, Rohit Shetty to cast Salman Khan and Prabhas in his next action film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X