For Quick Alerts
  ALLOW NOTIFICATIONS  
  For Daily Alerts

  24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್

  By ಸೋನು ಗೌಡ
  |

  ಪ್ರೇಮಿಗಳು ಎಂದ ಮೇಲೆ ರಹಸ್ಯವಾಗಿ ಭೇಟಿಯಾಗೋದು, ಕದ್ದು ಮುಚ್ಚಿ ರೋಮ್ಯಾನ್ಸ್ ಮಾಡೋದು, ಕದ್ದು ಫೋನ್ ಮಾಡೋದು ಎಲ್ಲಾ ಸಹಜ ಬಿಡಿ. ಈ ಯುವ ಮನಸ್ಸುಗಳ ಆಟಕ್ಕೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಕೂಡ ಹೊರತಾಗಿಲ್ಲ.

  ಹೌದು ಬಿಟೌನ್ ಬಾದ್ ಷಾ ಶಾರುಖ್ ಖಾನ್ ಅವರದು ಲವ್ ಮ್ಯಾರೇಜ್. ಅದೂ ಅಂತರ್ಜಾತೀಯ ವಿವಾಹ (ಹಿಂದು ಮುಸ್ಲಿಂ). ಇದೀಗ ಶಾರುಖ್ ಖಾನ್ ಅವರು ಗೌರಿ ಅವರನ್ನು ಮದುವೆಯಾಗಿ ಬರೋಬ್ಬರಿ 24 ವರ್ಷಗಳಾಗಿವೆ. ಮದುವೆಗೂ ಮುಂಚಿನ ಲವ್ ಸ್ಟೋರಿಯನ್ನು ಶಾರುಖ್ ಅವರು ಬಹಿರಂಗ ಪಡಿಸಿದ್ದಾರೆ.[ಅರೆ ಬರೆ ಉಡುಗೆ ತೊಟ್ಟು ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರಿ]

  ವಿವಾಹಕ್ಕೂ ಮುನ್ನ ಪ್ರೇಮಿಗಳಾಗಿದ್ದ ಇವರಿಬ್ಬರ ಭೇಟಿ ಬಹಳ ಕಷ್ಟವಾಗಿತ್ತಂತೆ. ಅದಕ್ಕೆ ಶಾರುಖ್ ಅವರು ಗೌರಿ ಅವರ ಜೊತೆ ಮಾತನಾಡಲು ಅವರ ಮನೆಯ ಲ್ಯಾಂಡ್ ಲೈನ್ ಗೆ ಫೋನ್ ಮಾಡಿ ಹುಡುಗಿ ಧ್ವನಿಯಲ್ಲಿ ಮಾತನಾಡುತ್ತಿದ್ದರಂತೆ.

  'ಕಪಿಲ್ ಶರ್ಮಾ ಶೋ' ನಲ್ಲಿ ಸೆಲ್ಫಿ ಸಂಸ್ಕೃತಿ ಬಗ್ಗೆ ಮಾತನಾಡುತ್ತಾ, 'ಮೊಬೈಲ್ ಫೋನ್ ಬಳಕೆ ಬಂದ ಮೇಲೆ ಸೆಲ್ಫಿ ಅನ್ನೋದು ಹುಟ್ಟಿಕೊಂಡಿತು. ನಮ್ಮ ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಮಾತ್ರ ಇದ್ದುದ್ದರಿಂದ, ನಾನು ಗೌರಿ ಜೊತೆ ಮಾತನಾಡಬೇಕಾದರೆ ಮನೆಯ ಲ್ಯಾಂಡ್ ಲೈನ್ ಗೆ ಕರೆ ಮಾಡಬೇಕಿತ್ತು'.[ಅಬ್ಬಾ.!ಈ ವರ್ಷದ ಕೆಟ್ಟ ಸಿನಿಮಾ, ಕೆಟ್ಟ ನಟ-ನಟಿ ಇವರೇ ಸ್ವಾಮಿ]

  'ಪ್ರತೀ ಬಾರಿ ನಾನು ಕರೆ ಮಾಡಿದಾಗ ಗೌರಿ ಅಣ್ಣ ವಿಕ್ರಾಂತ್ ಕರೆ ಸ್ವೀಕರಿಸುತ್ತಿದ್ದರು. ಹಾಗಾಗಿ ನಾನು ಹುಡುಗಿ ವಾಯ್ಸ್ ನಲ್ಲಿ ಮಾತನಾಡುತ್ತಿದ್ದೆ' ಎಂದು ಹಳೆಯ ಸಿಹಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಕಿಂಗ್ ಖಾನ್.

  'ನಾನು ಯಾವಾಗಲೂ ಹುಡುಗಿ ವಾಯ್ಸ್ ನಲ್ಲಿ 'ಹಲೋ ಕೆನ್ ಐ ಪ್ಲೀಸ್ ಸ್ಪೀಕ್ ಟೂ ಗೌರಿ' ಎಂದು ಕೇಳುತ್ತಿದೆ. ವಿಕ್ರಾಂತ್ ನನ್ನನ್ನು ಗೌರಿಯ ಸ್ನೇಹಿತೆ ಎಂದು ತಿಳಿದು ಫೋನ್ ರವಾನಿಸುತ್ತಿದ್ದರು. ಈವರೆಗೂ ವಿಕ್ರಾಂತ್ ಅವರಿಗೆ ಗೊತ್ತಿಲ್ಲ ಅಂದು ಹುಡುಗಿ ವಾಯ್ಸ್ ನಲ್ಲಿ ಮಾತಾಡಿದ್ದು ನಾನೇ ಅಂತ. ಇವಾಗ ಮಾತ್ರ ಖಂಡಿತ ಗೊತ್ತಾಗಿರುತ್ತದೆ' ಎಂದು ಹಳೇ ಸತ್ಯವನ್ನು ಬಹಿರಂಗ ಮಾಡಿದ್ದಾರೆ ಶಾರುಖ್ ಅವರು.[ಶಾರುಖ್ ಜೊತೆ ಮಾದಕ ತಾರೆ ಸನ್ನಿ ಲಿಯೋನ್ ಡ್ಯುಯೆಟ್]

  ಶಾರುಖ್ ಮತ್ತು ಗೌರಿ ಖಾನ್ ಅವರ ಅಪರೂಪದ ಫೋಟೋ ಅಲ್ಬಂ ನೋಡಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ...

  -

  -

  -

  -

  -

  -

  -

  -

  -

  -

  -

  24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್

  24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್

  -

  -

  -

  -

  -

  -

  -

  -

  English summary
  Shahrukh made a romantic revelation about his love life.He revealed how he used to call Gauri before marriage, and how difficult it was for him since there were no mobiles during those times.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X