ಕೊರೊನಾ ಬಳಿಕ ಚೇತರಿಸಿಕೊಳ್ಳದ ಬಾಲಿವುಡ್: ಹೀನಾಯ ಗಳಿಕೆ ಕಂಡ 'ರೂಹಿ'

ಕೊರೊನಾ ವೈರಸ್‌ ಬಳಿಕ ಸಿನಿಮಾರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ದೊಡ್ಡ ದೊಡ್ಡ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿವೆ. ತಮಿಳಿನಲ್ಲಿ ಮಾಸ್ಟರ್, ತೆಲುಗಿನಲ್ಲಿ ಕ್ರ್ಯಾಕ್, ಉಪ್ಪೇನಾ, ಕನ್ನಡದಲ್ಲಿ ಪೊಗರು, ರಾಬರ್ಟ್ ಅಂತಹ ದೊಡ್ಡ ಚಿತ್ರಗಳು ರಿಲೀಸ್ ಆಗಿ ಕೋಟಿ ಕೋಟಿ ಬಾಚಿಕೊಂಡಿದೆ.

ಆದರೆ, ಬಾಲಿವುಡ್‌ನಲ್ಲಿ ಅಂತಹ ಬೆಳವಣಿಗೆ ಕಾಣುತ್ತಿಲ್ಲ. ಸ್ಟಾರ್ ನಟರು ತೆರೆಗೆ ಬರಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಜನ ಥಿಯೇಟರ್‌ಗೆ ಬರ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿದ್ದಂತೆ ಕಾಣುತ್ತಿದೆ.

ಇದಕ್ಕೆ ತಾಜಾ ಉದಾಹರಣೆ ಜಾಹ್ನವಿ ಕಪೂರ್ ಹಾಗೂ ರಾಜ್ ಕುಮಾರ್ ರಾವ್ ನಟನೆಯ 'ರೂಹಿ' ಸಿನಿಮಾ. ಚಿತ್ರಮಂದಿರಲ್ಲಿ 100 ಪರ್ಸೆಂಟ್ ಅವಕಾಶ ಕೊಟ್ಟ ಮೇಲೆ ಬಂದ ಮೊದಲ ದೊಡ್ಡ ಸಿನಿಮಾ ಎನ್ನಬಹುದು.

 Roohi Movie Collection Completely Drops on Friday

ಈ ಚಿತ್ರ ಮೊದಲ ದಿನ ಗಳಿಸಿದ್ದು ಮಾತ್ರ 3.06 ಕೋಟಿ. ಮಾರ್ಚ್ 11 ರಂದು ಬಿಡುಗಡೆಯಾಗದ ಹಾರರ್ ಕಾಮಿಡಿ ಥ್ರಿಲ್ಲಿಂಗ್ ಸಿನಿಮಾ ಇದಾಗಿದ್ದು, ಎರಡನೇ ದಿನ ಮತ್ತಷ್ಟು ಇಳಿಕೆ ಕಂಡಿದೆ. ಶುಕ್ರವಾರ ರೂಹಿ ಚಿತ್ರ 2.25 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ಎರಡು ದಿನಕ್ಕೆ 5.31 ಕೋಟಿ ಸಂಗ್ರಹವಾಗಿದೆ ಎಂದು ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

ಜಾಹ್ನವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಂತಹ ಪ್ರತಿಭಾನ್ವಿತರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಗಳಿಕೆಯಲ್ಲಿ ನಿರ್ಮಾಪಕರಿಗೆ ಲಾಭ ತಂದುಕೊಡುವ ಲಕ್ಷಣ ಕಾಣುತ್ತಿಲ್ಲ.

ಇದುವರೆಗೂ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿಲ್ಲ. ಈಗ ಒಂದೊಂದೆ ಸಿನಿಮಾ ರಿಲೀಸ್ ದಿನಾಂಕ ನಿಗದಿ ಮಾಡಿಕೊಂಡಿದೆ. ಮೇ 13 ರಂದು ಸಲ್ಮಾನ್ ಖಾನ್ ಅಭಿನಯದ 'ರಾಧೇ' ಬಿಡುಗಡೆಯಾಗಲಿದೆ. ಮುಂದಿನ ವಾರ ಮಾರ್ಚ್ 19ಕ್ಕೆ 'ಮುಂಬೈ ಸಗ' ರಿಲೀಸ್ ಆಗುತ್ತಿದೆ.

ಹಾರ್ದಿಕ್ ಮೆಹ್ತಾ ಈ ಚಿತ್ರ ನಿರ್ದೇಶನ ಮಾಡಿದ್ದು, ವರುಣ್ ಶರ್ಮಾ, ಅಲೆಕ್ಸ್ ಓ ನೆಲ್, ಮನವ್ ವಿಜ್, ಸರಿತಾ ಜೋಶಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

More from Filmibeat

English summary
janhvi kapoor and rajkummar rao starrer Roohi movie collection completely Drop's on Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X