twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ನಟಿ, ಸಂಸದೆ ರೂಪಾ ಗಂಗೂಲಿ ಒತ್ತಾಯ

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ನಿಗೂಢವಾಗಿದ್ದು, ಕಾಣದ ಕೈಗಳ ಕೈವಾಡ ಇದರಲ್ಲಿದೆ. ಮಾನಸಿಕ ಖಿನ್ನತೆ ಕಾರಣದಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದಿರುವ ನಟಿ, ಬಿಜೆಪಿ ಸಂಸದೆ ರೂಪಾ ಗಂಗೂಲಿ, ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.

    Recommended Video

    ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

    ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವ ರೂಪಾ ಗಂಗೂಲಿ, ಅನೇಕ ಪ್ರಶ್ನೆಗಳನ್ನು ಮತ್ತು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿಯೂ ಪ್ರಭಾವ ಬೀರಿ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದ್ದಾರೆ. ಮುಂದೆ ಓದಿ...

    ನಾವೇ ಉತ್ತರ ನೀಡಬೇಕು

    ನಾವೇ ಉತ್ತರ ನೀಡಬೇಕು

    ಸುಶಾಂತ್ ಅವರ ಸಾವಿಗೆ ನ್ಯಾಯ ದೊರಕಿಸುವಲ್ಲಿ ನಾವು ಪೋಷಕರು, ಸಹೋದ್ಯೋಗಿಗಳು, ಸ್ನೇಹುತರು ಕುಟುಂಬದವರು ಹಾಗೂ ಭಾರತೀಯ ಪ್ರಜೆಗಳು ವಿಫಲರಾದರೆ ನಮ್ಮ ಮುಂದಿನ ಪೀಳಿಗೆಗೆ ನಾವೇ ಉತ್ತರದಾಯಿಗಳಾಗಬೇಕಾಗುತ್ತದೆ. ಈ ಪ್ರಕರಣದಲ್ಲಿ ಸ್ವತಂತ್ರ ಸಿಬಿಐ ತನಿಖೆ ಅಗತ್ಯವಾಗಿದೆ ಎಂದು ರೂಪಾ ಗಂಗೂಲಿ ಹೇಳಿದ್ದಾರೆ.

    ಬಣ್ಣದ ಜಗತ್ತಿಗಿಂತಲೂ ವರ್ಣಮಯವಾಗಿತ್ತು ಸುಶಾಂತ್ ಜೀವನ ಮತ್ತು ಕನಸು...ಬಣ್ಣದ ಜಗತ್ತಿಗಿಂತಲೂ ವರ್ಣಮಯವಾಗಿತ್ತು ಸುಶಾಂತ್ ಜೀವನ ಮತ್ತು ಕನಸು...

    ತಪ್ಪಿತಸ್ಥರನ್ನು ಶಿಕ್ಷಿಸುವುದಿಲ್ಲವೇ?

    ತಪ್ಪಿತಸ್ಥರನ್ನು ಶಿಕ್ಷಿಸುವುದಿಲ್ಲವೇ?

    ಭಾರತದ ಪ್ರದೇಶದ ಒಳಗೆ ಕಾನೂನಿನ ಸಮಾನ ರಕ್ಷತೆ ಮತ್ತು ಕಾನೂನಿನ ಎದುರು ಯಾವುದೇ ವ್ಯಕ್ತಿಯ ಸಮಾನತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಮಾನ್ಯ ನಾಗರಿಕರಾಗಿ ನಾವು ಅದನ್ನು ಪಡೆದುಕೊಂಡಿದ್ದೇವೆ. ಉತ್ತರವಿಲ್ಲದೆ ಇದನ್ನೂ ಬಿಟ್ಟುಬಿಡಬೇಕೇ? ತಪ್ಪಿತಸ್ಥರನ್ನು ಶಿಕ್ಷಿಸುವುದಿಲ್ಲವೇ? ಹಾಗೆ ಆದರೆ ಇದಕ್ಕೆ ನಾವೂ ಹೊಣೆಗಾರರಾಗುತ್ತೇವೆ ಎಂದು ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟತೆಯಿಲ್ಲ

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟತೆಯಿಲ್ಲ

    ಸುಶಾಂತ್ ಅವರ ಮರಣೋತ್ತರ ಪರೀಕ್ಷೆ ವರದಿಯು ಅವರು ತೆಗೆದುಕೊಳ್ಳುತ್ತಿದ್ದ ಔಷಧದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ. ವರದಿಯಲ್ಲಿ ಸಾಕಷ್ಟು ಸ್ಪಷ್ಟತೆ ಇದೆಯೇ? ನಾವು ಇದನ್ನು ಪೂರ್ವ ನಿರ್ಧರಿತವಾದ ದಿಕ್ಕಿನಡೆಗೆ ನೂಗುವ ಅಥವಾ ಊಹಾಪೋಹಗಳನ್ನು ಏಕೆ ಮಾಡುತ್ತಿದ್ದೇವೆ?

    ರಿಯಾ ಚಕ್ರಬೊರ್ತಿ ಕುರಿತು ತಮಗೆ ಗೊತ್ತೇ ಇಲ್ಲ ಎಂದ ಸುಶಾಂತ್ ಸಿಂಗ್ ರಜಪೂತ್ ತಂದೆರಿಯಾ ಚಕ್ರಬೊರ್ತಿ ಕುರಿತು ತಮಗೆ ಗೊತ್ತೇ ಇಲ್ಲ ಎಂದ ಸುಶಾಂತ್ ಸಿಂಗ್ ರಜಪೂತ್ ತಂದೆ

    ಬೆರಳಿನ ಗುರುತುಗಳ ಬಗ್ಗೆ ಮಾಹಿತಿ ಇಲ್ಲ

    ಬೆರಳಿನ ಗುರುತುಗಳ ಬಗ್ಗೆ ಮಾಹಿತಿ ಇಲ್ಲ

    ಭಾರತದ ಪ್ರಜೆಗಳಾದ ನಾವು ಘಟನೆ ನಡೆದ ಸ್ಥಳ ಮತ್ತು ತನಿಖೆಯ ವಿವರಗಳ ಬಗ್ಗೆ ಏಕೆ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ? ಅಲ್ಲಿ ಮೂಡಿರಬಹುದಾದ ಬೆರಳಿನ ಗುರುತುಗಳ ಬಗ್ಗೆ ಏಕೆ ತಿಳಿಸುತ್ತಿಲ್ಲ. ನಾವು ಇದುವರೆಗೂ ತಿಳಿದಿರುವುದನ್ನು ಬದಲಿಸುವ ಪ್ರಯತ್ನ ನಡೆದಿದೆಯೇ?

    ಸಾಕ್ಷ್ಯ ನಾಶಕ್ಕೆ ಅವಕಾಶ

    ಸಾಕ್ಷ್ಯ ನಾಶಕ್ಕೆ ಅವಕಾಶ

    ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಏಕೆ ಜೂನ್ 15ರಂದು ತಡವಾಗಿ ಭೇಟಿ ನೀಡಿತ್ತು? ಅಲ್ಲಿನ ಸಾಕ್ಷ್ಯಗಳನ್ನು ನಾಶಪಡಿಸಲು ಸಾಧ್ಯವಾಗುವಂತೆ ಏಕೆ ಅಷ್ಟು ಸಮಯ ನೀಡಿತು? ಆ ಮನೆಗೆ ಬೀಗ ಮುದ್ರೆ ಹಾಕಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸುದ್ದಿ ಇಲ್ಲ. ಆ ಸ್ಥಳದ ಯಥಾಸ್ಥಿತಿ ಮತ್ತು ಸಾಕ್ಷ್ಯಗಳ ನಾಶದ ಸಾಧ್ಯತೆಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ವಿಚಾರವೂ ತಿಳಿಯುತ್ತಿಲ್ಲ. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಹೀಗಾಗಿ ಸಿಬಿಐ ತನಿಖೆ ನಡೆಸಿ ಸುಶಾಂತ್‌ಗೆ ನ್ಯಾಯ ದೊರಕಿಸಿಕೊಡಿ ಎಂದು ರೂಪಾ ಗಂಗೂಲಿ ಒತ್ತಾಯಿಸಿದ್ದಾರೆ.

    ಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ: ಅಭಿಮಾನಿಗಳ ಅಸಮಾಧಾನಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ: ಅಭಿಮಾನಿಗಳ ಅಸಮಾಧಾನ

    English summary
    Actress, MP Roopa Ganguly has demanded for CBI investigation into Sushant Singh Rajput's death case.
    Friday, June 26, 2020, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X