'ಕಾಂಡೋಮ್' ತಗೋ ಮಜಾ ಮಾಡು ಎಂದು ನನ್ನ ತಾಯಿಯೇ ನನಗೆ ಹೇಳ್ತಾರೆ ಎಂದ ಖ್ಯಾತ ನಟಿ..!

ಸಾಮಾನ್ಯವಾಗಿ ಗಂಡು ಮಕ್ಕಳ ವಿಷಯದಲ್ಲಿ ಮೃದು ಧೋರಣೆ ತೋರುವ ಪೋಷಕರು, ಹೆಣ್ಣು ಮಕ್ಕಳ ವಿಚಾರದಲ್ಲಿ ಚಿಕ್ಕಂದಿನಿಂದಲೇ ಕಟ್ಟುಪಾಡು ವಿಧಿಸುತ್ತಾರೆ. ಲಿಂಗ ಸಮಾನತೆಯ ಪಾಠವನ್ನು ಮಾಡದೇ ನೀನು ಇದನ್ನು ಮಾಡಬೇಡ.. ಹೀಗೆ ಮಾತನಾಡಬೇಡ.. ಈ ಡ್ರೆಸ್ ಹಾಕಬೇಡ.. ಮನೆಗೆ ತಡವಾಗಿ ಬರಬೇಡ.. ಹುಡುಗರ ಜೊತೆ ಸಲುಗೆಯಿಂದ ಇರಬೇಡ.. ಹೀಗೆ ಹಲವರು ಹಲವು ಮಾತುಗಳನ್ನು ಮನೆಯಲ್ಲಿಯೇ ಹೇಳುತ್ತಾರೆ.

ಈ ಎಲ್ಲಾ ಬೇಡಗಳ ನಡುವೆಯೇ ಹೆಣ್ಣು ಮಕ್ಕಳು ಬೆಳೆಯುತ್ತಾರೆ. ಇನ್ನು.. ಚಿತ್ರರಂಗ ಅಂದರೆ, ಈಗಲೂ ಕೂಡ ಅನೇಕರು ಮೂಗು ಮುರಿಯುತ್ತಾರೆ. ಅದರಲ್ಲಿಯೂ ಹೆಣ್ಣು ಮಕ್ಕಳು ನಾಯಕಿಯಾಗುವ ಕನಸೇನಾದರೂ ಕಂಡಂರೆ ಅರೇ.. ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ ಎಂದು ಮಾತನಾಡುತ್ತಾರೆ. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತ ಅಲ್ಲ ಎಂದು ಹೇಳುತ್ತಾರೆ.

Roshni Walia s Mom Breaks Taboos Carry Condoms Go Out Have Fun Advice Shakes Social Media

ನಿಜಾ. ಕಾಲ ಈಗ ಬದಲಾಗಿದೆ. ಆದರೂ ಕೂಡ ಹೆಣ್ಣು ಮಕ್ಕಳು ಅಂದರೆ ಮನೆ ಸ್ವಚ್ಚಗೊಳಿಸುವುದು.. ಅಡುಗೆ ಮಾಡುವುದು.. ಮದುವೆಯಾಗಿ ಮಕ್ಕಳ ಲಾಲನೆ ಪಾಲನೆ ಮಾಡುವುದು.. ಅಡುಗೆ ಮಾಡಲು ಮಾತ್ರ ಎಂಬಂತೆ ಹಲವರು ವರ್ತಿಸುತ್ತಾರೆ. ಹೀಗಿರುವಾಗ ನನ್ನ ತಾಯಿಯೇ ನನಗೆ ಕಾಂಡೋಮ್ ಬಳಸುವಂತೆ ಹೇಳುತ್ತಾರೆ ಎಂದು ಚಿತ್ರರಂಗದ ಚೆಲುವೆಯೊಬ್ಬರು ಹೇಳಿದ್ದಾರೆ.

ಹೌದು.. ''ರೋಶ್ನಿ ವಾಲಿಯಾ''.. ಉಂಡು, ಆಡಿ, ಒದ್ದು ಮಲಗುವ ವಯಸ್ಸಿನಲ್ಲಿಯೇ ಬಣ್ಣದ ಸೆಳೆತಕ್ಕೆ ಸಿಲುಕಿದ ಸುಂದರಿ. ಬಾಲ ಕಲಾವಿದೆಯಾಗಿ ''ಮೇ ಲಕ್ಷ್ಮಿ ತೇರೆ ಆಂಗನ್ ಕೀ''.. ''ಬಾಲಿ ಕಾ ವಧು''.. ''ದೇವೋ ಕೇ ದೇವ್ ಮಹಾದೇವ್''.. ''ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್''.. ಧಾರಾವಾಹಿಗಳಲ್ಲಿ ಮಿಂಚಿದ ರೋಶ್ನಿ ''ಮೈ ಫ್ರೆಂಡ್ ಗಣೇಶ 4''.. ''ಮಚಲಿ ಜಲ್ ಕೀ ರಾಣಿ ಹೈ''.. ''ಫಿರಂಗಿ'' .. ಅಂತಹ ಚಿತ್ರಗಳಲ್ಲಿ ಕೂಡ ಅಭಿನಯಿಸಿದರು.

ಇಂಥಾ ರೋಶ್ನಿ ವಾಲಿಯಾ ಸದ್ಯ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆ ತಮ್ಮ ಅನುಭವ ಮತ್ತು ಚಿತ್ರಜೀವನದ ಕುರಿತು ಮಾಧ್ಯಮಗಳಿಗೆ ಸಂದರ್ಶನವನ್ನು ಕೊಡುತ್ತಿರುವ ರೋಶ್ನಿ ನಾನು ಈ ಹಂತದವರೆಗೆ ಬರಲು ನನ್ನ ತಾಯಿಯ ತ್ಯಾಗ ತುಂಬಾನೇ ದೊಡ್ಡದು ಎಂದು ಹೇಳಿದ್ದಾರೆ. ನನ್ನ ಕನಸು ನನಸಾಗಿಸಲು ನನ್ನ ತಾಯಿ ಹಲವು ಕಷ್ಟಗಳನ್ನು ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ನನ್ನ ತಾಯಿ ಯಾವತ್ತು ಕಟ್ಟು ನಿಟ್ಟಾಗಿ ಇರಲಿಲ್ಲ ಎಂದು ಹೇಳಿದ್ದಾರೆ.

Roshni Walia s Mom Breaks Taboos Carry Condoms Go Out Have Fun Advice Shakes Social Media

ಈ ಕುರಿತು ''ಹಾಟರ್‌ಫ್ಲೈ'' ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರೋಶ್ನಿ ಶಿಸ್ತಿಂದ ಬೆಳೆಸಿದ ಮಕ್ಕಳೇ ದಾರಿ ತಪ್ಪುವುದು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ. ಮುಂದುವರೆದು ನನ್ನ ಅಮ್ಮ ನೀನೇನಾದರೂ ಮಾಡು ಆದರೆ ''ಕಾಂಡೋಮ್'' ಬಳಸು ಎಂದು ಸಲಹೆ ಕೊಡುತ್ತಾರೆ ಎಂದು ಹೇಳಿರುವ ರೋಶ್ನಿ ನಾನು ಚಿಕ್ಕವಳಿದ್ದಾಗ ಈ ಮಾತನ್ನು ನನ್ನ ತಾಯಿ ನನ್ನ ಅಕ್ಕನಿಗೆ ಹೇಳುತ್ತಿದ್ದರು. ಆದರೆ ಈಗ ನಾನು ದೊಡ್ಡವಳಾಗಿದ್ದೇನೆ ಹೀಗಾಗಿ ನನಗೂ ಕೂಡ ಈ ಮಾತನ್ನೇ ಅವರು ಹೇಳುತ್ತಾರೆ ಎಂದು ಹೇಳಿದ್ದಾರೆ.

ಇನ್ನು ನಾನು ಮನೆಯ ಹೊರಗಡೆ ಹೋಗುವುದು ಕಡಿಮೆ, ಮನೆಯಲ್ಲಿಯೇ ಹೆಚ್ಚು ಇರುತ್ತೇನೆ.. ಹೀಗಾಗಿ ಅಮ್ಮನೇ ನನ್ನ ಬಳಿ ಬಂದು ಹೊರ ಹೋಗುವಂತೆ ಹೇಳುತ್ತಾರೆ. ಮನೆಯಲ್ಲಿ ಸುಮ್ಮನೆ ಕೂರಬೇಡ ಹೋಗು ಓಡಾಡಿಕೊಂಡು ಬಾ, ಪಾರ್ಟಿ ಮಾಡು ಎಂದು ಕಳುಹಿಸುತ್ತಾರೆ ಎಂದಿರುವ ರೋಶ್ನಿ ಪಾರ್ಟಿಗಳಿಗೆ ಹೋಗಿ ಬಂದರೆ ಇವತ್ತು ''ಎಣ್ಣೆ'' ಕುಡಿಯಲಿಲ್ವಾ ? ಚೂರು ಕುಡಿಬೇಕಿತ್ತು ತಾನೇ ಎಂದು ಕೂಡ ಹೇಳುತ್ತಾರೆ ಎಂದು ಹೇಳಿದ್ದಾರೆ. ನಾನು ''ಪಂಜಾಬಿ''ಯಾದ ಕಾರಣ ಮನೆಯಲ್ಲಿ ಎಣ್ಣೆ ಕುಡಿಯುವುದು ಎಲ್ಲ ಮಾಮೂಲು ಎಂದು ಹೇಳಿದ್ದಾರೆ.

ಸದ್ಯ ರೋಶ್ನಿ ವಾಲಿ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ರೋಶ್ನಿ ಮತ್ತು ಅವರ ತಾಯಿಯ ವಿರುದ್ದ ಕೆಂಡ ಕಾರುತ್ತಿದ್ದರೆ, ಇನ್ನೂ ಕೆಲವರು ರೋಶ್ನಿ ಮತ್ತು ತಾಯಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Discover former child actor Roshni Walia's revelation about her mom's shocking advice to always "carry condoms." A candid discussion on safe relationships.
Read more about: actress life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X