ಸುಖಿ ದಾಂಪತ್ಯ ಜೀವನಕ್ಕೆ 7 ವರ್ಷ, 40ನೇ ವಯಸ್ಸಿನಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಖ್ಯಾತ ನಟಿ
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.
.
ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಆ ಪೈಕಿ ಸೋನಂ ಕಪೂರ್ ಕೂಡ ಒಬ್ಬರು.

ಹೌದು, ಸೋನಂ ಕಪೂರ್.. ಕನ್ನಡದ ''ಪಲ್ಲವಿ ಅನುಪಲ್ಲವಿ'' ಚಿತ್ರದ ಮೂಲಕ ಚಿತ್ರ ಜೀವನ ಶುರು ಮಾಡಿದ ಅನಿಲ್ ಕಪೂರ್ ಅವರ ಮುದ್ದಿನ ಮಗಳು. ಬಾಲಿವುಡ್‌ನ ಸಂಪ್ರದಾಯದಂತೆ ತನ್ನ ತಂದೆಯ ಜಾಡು ಹಿಡಿದು 2007ರಲ್ಲಿ ರಣ್‌ಬೀರ್ ಕಪೂರ್ ಜೊತೆ ಚಿತ್ರರಂಗವನ್ನು ಪ್ರವೇಶ ಮಾಡಿದ ಸೋನಂ ಕಪೂರ್ ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿದರು. ಆ ಪೈಕಿ ''ನೀರ್ಜಾ''.. ''ಭಾಗ್ ಮಿಲ್ಕಾ ಭಾಗ್''.. ''ರಾಂಜಾನಾ''.. ಪ್ರಮುಖವಾದವು.
ಆದರೆ, ಅದೇನಾಯ್ತೋ 2017ರಲ್ಲಿ ಚಿತ್ರರಂಗದಿಂದ ಏಕಾಏಕಿ ದೂರವಾದ ಸೋನಂ ಕಪೂರ್, ತಾವು ಮನ ಮೆಚ್ಚಿದ ಹುಡುಗ ಆನಂದ್ ಅಹುಜಾ ಜೊತೆ 2018ರ ಮೇ 8ರಂದು ಮದುವೆಯ ಬಂಧನಕ್ಕೊಳಗಾದರು. ಮುಂಬೈಗೆ ಗುಡ್ ಬೈ ಹೇಳಿ ಲಂಡನ್‌ನಲ್ಲಿ ಬಿಡಾರ ಹೂಡಿದರು. ಲಂಡನ್‌ನಲ್ಲಿ ಬೋರ್ ಆದಾಗ ಆಗೊಮ್ಮೆ.. ಈಗೊಮ್ಮೆ.. ಸೋನಂ ಚಿತ್ರಗಳನ್ನು ಮಾಡುತ್ತಿರುತ್ತಾರೆ.
ಹೀಗೆ ಸುಖಿ ದಾಂಪತ್ಯ ಜೀವನ ನಡೆಸುತ್ತಿರುವ ಸೋನಂ ಕಪೂರ್, ಮದುವೆಯಾಗಿ ನಾಲ್ಕು ವರ್ಷದ ನಂತರ ಅಂದರೆ 2022ರಲ್ಲಿ ಆಗಸ್ಟ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮುದ್ದಾದ ಮಗನಿಗೆ ''ವಾಯು'' ಎಂದು ನಾಮಕರಣವನ್ನು ಕೂಡ ಮಾಡಿದ್ದರು. ಸದ್ಯ ಸೋನಂ ಕಪೂರ್‌ಗೆ ಈಗ 40ರ ಪ್ರಾಯ. ಈಗ ಸೋನಂ ಕಪೂರ್ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ.
ಹೌದು, ಅಸಲಿಗೆ ಕಳೆದ ಕೆಲ ದಿನಗಳಿಂದ ಸೋನಂ ಕಪೂರ್ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎನ್ನುವ ಅನುಮಾನ ಬಾಲಿವುಡ್‌ನ ಹಲವರಲ್ಲಿತ್ತು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿತ್ತು.

ಈಗ ಖುದ್ದು ಸೋನಂ ಕಪೂರ್ ತಾವು ಮತ್ತೊಮ್ಮೆ ಗರ್ಭಿಣಿಯಾಗಿರುವ ವಿಚಾರವನ್ನು ಹಂಚಿಕೊಂಡಿದ್ಧಾರೆ. ಹೊಸ ಫೋಟೊಶೂಟ್ ಮಾಡಿಸಿಕೊಂಡು ಬೇಬಿ ಬಂಪ್ ಪ್ರದರ್ಶನ ಮಾಡಿದ್ದಾರೆ. ಕಡು ಗುಲಾಬಿ ಬಣ್ಣದ ಸೂಟ್ ಧರಿಸಿ ಮಿಂಚಿರುವ ಸೋನಂ ಕಪೂರ್ ''ಮದರ್'' ಎಂದು ಬರೆದುಕೊಂಡಿದ್ದಾರೆ.
ಸದ್ಯ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರಿಗೆ ಇವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ.. ಈಶಾ ಗುಪ್ತಾ.. ಪತ್ರಲೇಖಾ.. ಪರಿಣಿತಿ ಚೋಪ್ರಾ.. ಕರೀನಾ ಕಪೂರ್ ಖಾನ್.. ಭೂಮಿ ಫೆಡ್ನೇಕರ್.. ಹೀಗೆ ಚಿತ್ರರಂಗದ ಹಲವರು ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇನ್ನುಳಿದಂತೆ 2022ರಲ್ಲಿ ಮೊದಲ ಮಗುಗೆ ಜನ್ಮ ನೀಡಿದ್ದ ಸಮಯದಲ್ಲಿ ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಸೋನಂ ಕಪೂರ್ ಹೀಗೆಂದು ಬರೆದುಕೊಂಡಿದ್ದಾರೆ. "ನಾಲ್ಕು ಕೈಗಳು ನಾವು ನಿಮ್ಮನ್ನು ಅತ್ಯುತ್ತಮವಾಗಿ ಬೆಳೆಸಲು. ಎರಡು ಹೃದಯಗಳು ಅದು ನಿಮ್ಮ ಪ್ರತಿ ಹೆಜ್ಜೆಯೊಂದಿಗೆ ನಾವಿರಲು. ಒಂದು ಕುಟುಂಬ ನಿಮಗೆ ಪ್ರೀತಿ ಮತ್ತು ಬೆಂಬಲವನ್ನು ನೀಡಲು. ನಿಮ್ಮನ್ನು ಸ್ವಾಗತಿಸಲು ನಾವು ಕಾಯಲು ಸಾಧ್ಯವಿಲ್ಲ. ಪ್ರತಿ ದಿನವೂ ಅಪೂರ್ವ ಎಂದು ಸೋಶಿಯಲ್ ಮೀಡಿಯಾದಲ್ಲಿ ಸೋನಂ ಕಪೂರ್ ಬರೆದುಕೊಂಡಿದ್ದರು.


Click it and Unblock the Notifications











