RRR ಗೆ ಬೆದರಿದ ಬೋನಿ ಕಪೂರ್: ಅಜಯ್ ದೇವಗನ್ ಮಧ್ಯಸ್ಥಿಕೆ

ಭಾರತದ ಬಹುನಿರೀಕ್ಷಿತ ಸಿನಿಮಾ 'RRR'. ತೆಲುಗು ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾಕ್ಕಾಗಿ ಬಾಲಿವುಡ್‌ನ ಮಂದಿ ಸಹ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

RRR ಸಿನಿಮಾವನ್ನು ಅಕ್ಟೋಬರ್ 13 ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಜಮೌಳಿ ಪ್ರಕಟಿಸಿದ್ದಾರೆ. ಜೂ.ಎನ್‌ಟಿಆರ್, ರಾಮ್ ಚರಣ್ ಅಭಿಮಾನಿಗಳಿಗೆ ಈ ಸುದ್ದಿ ಬಹುಖುಷಿ ತಂದಿದೆ. ಆದರೆ ರಾಜಮೌಳಿಯ ಈ ಪ್ರಕಟಣೆಯಿಂದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮಾತ್ರ ಕಂಗಾಲಾಗಿದ್ದಾರೆ.

ಆರ್ಆರ್ಆರ್ ಸಿನಿಮಾ ಬಿಡುಗಡೆ ಆದ ಎರಡೇ ದಿನಕ್ಕೆ ಅಂದರೆ ಅಕ್ಟೋಬರ್ 15 ಕ್ಕೆ ಬೋನಿ ಕಪೂರ್ ನಿರ್ಮಿಸಿ, ಅಜಯ್ ದೇವಗನ್ ನಟಿಸಿರುವ 'ಮೈದಾನ್' ಸಿನಿಮಾ ಬಿಡುಗಡೆ ಆಗಿತ್ತಿದೆ. ಆರ್‌ಆರ್‌ಆರ್ ಅಲೆಯಲ್ಲಿ ತಮ್ಮ ನಿರ್ಮಾಣದ ಸಿನಿಮಾ 'ಮೈದಾನ್' ಕೊಚ್ಚಿಹೋಗುತ್ತದೆ ಎಂಬ ಭಯ ಬೋನಿ ಕಪೂರ್ ಅನ್ನು ಕಾಡುತ್ತಿದೆ.

ರಾಜಮೌಳಿ ವಿರುದ್ಧ ಬೋನಿ ಕಪೂರ್ ಅಸಮಾಧಾನ

ರಾಜಮೌಳಿ ವಿರುದ್ಧ ಬೋನಿ ಕಪೂರ್ ಅಸಮಾಧಾನ

ಆರ್‌ಆರ್ಆರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದಂದು ಬಹಿರಂಗವಾಗಿಯೇ ರಾಜಮೌಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು ಬೋನಿ ಕಪೂರ್. ಇದೀಗ ಬೋನಿ ಕಪೂರ್ ಪರವಾಗಿ ರಾಜಮೌಳಿ ಬಳಿ ಅಜಯ್ ದೇವಗನ್ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುತ್ತಿದ್ದಾರೆ.

ಅಜಯ್ ದೇವಗನ್ ಮಧ್ಯಸ್ಥಿಕೆ

ಅಜಯ್ ದೇವಗನ್ ಮಧ್ಯಸ್ಥಿಕೆ

ಆರ್‌ಆರ್ಆರ್ ಸಿನಿಮಾದಲ್ಲಿ ನಟ ಅಜಯ್ ದೇವಗನ್ ಸಹ ನಟಿಸಿರುವ ಕಾರಣ, ಆರ್ಆರ್ಆರ್ ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಅಜಯ್ ದೇವಗನ್ ಅವರು ರಾಜಮೌಳಿ ಬಳಿ ಮನವಿ ಮಾಡುತ್ತಿದ್ದಾರೆ.

ಮುಂದೂಡಲು ಒಪ್ಪದ ರಾಜಮೌಳಿ

ಮುಂದೂಡಲು ಒಪ್ಪದ ರಾಜಮೌಳಿ

ಆದರೆ ರಾಜಮೌಳಿ ಹಾಗೂ ಆರ್‌ಆರ್ಆರ್ ಚಿತ್ರತಂಡ ಬಿಡುಗಡೆ ದಿನಾಂಕ ಮುಂದೂಡಲು ಒಪ್ಪಿಲ್ಲ ಎನ್ನಲಾಗುತ್ತಿದೆ. ಬದಲಿಗೆ ಮೈದಾನ್ ಸಿನಿಮಾದ ಬಿಡುಗಡೆ ದಿನಾಂಕವನ್ನೇ ಮುಂದಕ್ಕೆ ಹಾಕುವಂತೆ ಹೇಳಿದ್ದಾರೆ ಎನ್ನಲಾಗಿದೆ.

Recommended Video

ತೆಲುಗು ಮಾಧ್ಯಮಗಳಿಗೆ ಉತ್ತರಕೊಟ್ಟ ಪ್ರಶಾಂತ್ ನೀಲ್ | Salaar | Prabhas | Filmibeat Kannada
ರಾಜಮೌಳಿ ಕೆಲಸ ಅನೈತಿಕ ಎಂದಿದ್ದ ಬೋನಿ ಕಪೂರ್

ರಾಜಮೌಳಿ ಕೆಲಸ ಅನೈತಿಕ ಎಂದಿದ್ದ ಬೋನಿ ಕಪೂರ್

ಈ ಹಿಂದೆ ರಾಜಮೌಳಿ ಬಗ್ಗೆ ಮಾತನಾಡಿದ್ದ ಬೋನಿ ಕಪೂರ್, 'ಇದು ಅನೈತಿಕ. ನಾನು ನನ್ನ ಸಿನಿಮಾದ ಬಿಡುಗಡೆಯನ್ನು ಆರು ತಿಂಗಳ ಮೊದಲೇ ಘೋಷಿಸಿದ್ದೆ. ಯಾವ ಸಮಯದಲ್ಲಿ ನಾವೆಲ್ಲರೂ ಸೇರಿ ಉದ್ಯಮವನ್ನು ಉಳಿಸಬೇಕಾಗಿದೆಯೋ ಅದೇ ಸಮಯದಲ್ಲಿ ಹೀಗೆ ರಾಜಮೌಳಿ ಬೇರೆ ಸಿನಿಮಾಕ್ಕೆ ತೊಂದರೆ ಆಗುವಂತೆ ತಮ್ಮ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ರಾಜಮೌಳಿ ಏಕೆ ತಮ್ಮ ಸಿನಿಮಾವನ್ನು ರಜೆಯುಳ್ಳ ವೀಕೆಂಡ್‌ನಲ್ಲಿ ಬಿಡುಗಡೆ ಮಾಡಬೇಕು. ಈಗಾಗಲೇ ಬಾಹುಬಲಿಯಿಂದ ಸಾಕಷ್ಟು ಹೆಸರು ಗಳಿಸಿರುವ ಅವರು ತಮ್ಮ ಸಿನಿಮಾವನ್ನು ಯಾವುದೇ ದಿನದಲ್ಲಿ ಬಿಡುಗಡೆ ಮಾಡಿದರೂ ಚೆನ್ನಾಗಿ ಓಡುತ್ತದೆ' ಎಂದಿದ್ದಾರೆ ಬೋನಿ ಕಪೂರ್.

More from Filmibeat

English summary
RRR movie release date is clashing with Ajay Devgn starer Maidaan movie which producer by Boney Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X