ಮಲ್ಕೊಂಡರೆ 1 ಲಕ್ಷಕ್ಕೂ ಜಾಸ್ತಿ ಹಣ ಸಿಗುತ್ತೆ ; ಪಾತ್ರಕ್ಕಾಗಿ ಪಲ್ಲಂಗವೇರುವಂತೆ ನಟಿಗೆ ಆಫರ್, ಮೆಸೇಜ್‌ನಲ್ಲೇ ಡೀಲ್
ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಕನಸೊತ್ತು ಬರುವ ಚೆಲುವೆಯರಿಗೆ ಇಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಕೆಲವರು ಪಾತ್ರ ಬೇಕು ಅಂದರೆ ಪಲ್ಲಂಗಕ್ಕೆ ಕರೆಯುತ್ತಾರೆ. ಬೇಡಿಕೆ ಈಡೇರಿಸದಿದ್ದರೆ ಚಿತ್ರದಿಂದಲೇ ಹೊರ ಹಾಕುತ್ತಾರೆ.
ಇನ್ನೂ ಕೆಲ ಒಮ್ಮೆ ಎಲ್ಲಿಯೂ ಅವಕಾಶ ಸಿಗದಂತೆ ಕೂಡ ನೋಡಿಕೊಳ್ಳುತ್ತಾರೆ. ಮತ್ತೂ ಕೆಲವರು ಮಾನಸಿಕ ಕಿರುಕುಳ ಕೊಡುತ್ತಾರೆ. ಹೇಗಾದರೂ ಮಾಡಿ ಸ್ವಾಭಿಮಾನ ಅಡ ಇಡುವಂತೆ ಮಾಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಭಾವುಕರಾಗಿದ್ದಾರೆ. ಈ ಸಾಲಿಗೆ ಈಗ ಮಾನ್ವಿ ಗಾಗ್ರೂ ಕೂಡ ಸೇರಿಕೊಂಡಿದ್ದಾರೆ.

ಹೌದು, ಮಾನ್ವಿ ಗಾಗ್ರೂ.. ಬಾಲ್ಯದಲ್ಲಿಯೇ ಬಣ್ಣದ ಸೆಳೆತಕ್ಕೆ ಸಿಲುಕಿದ ಮಾನ್ವಿ '' ದ್ ಡಿಸ್ನಿ ಪ್ರೈಡ್ ಆಫ್ ಪ್ರಿಹುಡಿಸ್'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. 2011ರಲ್ಲಿ ತೆರೆಗೆ ಬಂದ ''ನೋ ಒನ್ ಕಿಲ್ಡ್ ಜೆಸ್ಸಿಕಾ'' ಚಿತ್ರದ ಮೂಲಕ ಹಲವರ ಗಮನ ಸೆಳೆದರು.
''ಉಜಡಾ ಚಮನ್''.. ''ಶುಭ್ ಮಂಗಲ್ ಜ್ಯಾದಾ ಸಾವಧಾನ್''.. ''ಕಿಲ್ ದಿಲ್'' ಹೀಗೆ ಒಂದಾದ ಮೇಲೊಂದು ಚಿತ್ರ ಮಾಡಿದ ಮಾನ್ವಿ ಪ್ರೇಕ್ಷಕರ ಹೃದಯಕ್ಕೆ ಇನ್ನೂ ಹತ್ತಿರವಾಗಿದ್ದು ಓಟಿಟಿಯ ಮೂಲಕ.
''ಟಿವಿಎಫ್ ಪಿಚರ್ಸ್''.. ''ಟಿವಿಎಫ್ ಟ್ರಿಪ್ಲಿಂಗ್''.. ''ಫೋರ್ ಮೋರ್ ಶಾಟ್ಸ್ ಪ್ಲೀಸ್''.. ಅಂತಹ ಸರಣಿ ಮಾಡಿದ ಮಾನ್ವಿ ಗಾಗ್ರೂ ಕೈಯಲ್ಲಿ ಸದ್ಯ ಹಲವು ಅವಕಾಶಗಳಿವೆ. ಇಂಥಾ ಮಾನ್ವಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ತಮಗೆ ಬಂದ ಮೆಸೇಜ್ ಓದಿ ಆಘಾತಕ್ಕೀಡಾಗಿದ್ದಾಗಿ ಹೇಳಿದ್ದಾರೆ.
ಈ ಕುರಿತು ''ಟೂ ಗರ್ಲ್ಸ್ & ಟೂ ಕಪ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾನ್ವಿ, ತಾವು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸವಾಲುಗಳನ್ನು ಎದುರಿಸಬೇಕಾಯ್ತು ಎಂದಿದ್ದಾರೆ.

ಅವಕಾಶಕ್ಕಾಗಿ ನಾನು ಅಲೆಯುತ್ತಿದ್ದ ದಿನಗಳವು. ನೆಲೆಯೂರಬೇಕೆಂದು ಪ್ರಯತ್ನ ಮಾಡುತ್ತಿದ್ದೆ ಎಂದು ಹೇಳಿರುವ ಮಾನ್ವಿ ಆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಇಲ್ಲಿ ಕೆಲಸ ಸಿಗುತ್ತೆ, ಇಷ್ಟೇ ಅಲ್ಲ ಒಂದು ಲಕ್ಷಕ್ಕೂ ಅಧಿಕ ಸಂಭಾವನೆ ಕೂಡ ನಿಮಗೆ ಸಿಗುತ್ತೆ ಎಂದು ಕಾಸ್ಟಿಂಗ್ ಕೋ ಆರ್ಡಿನೇಟರ್ ಒಬ್ಬರು ನನಗೆ ಮೆಸೇಜ್ ಮಾಡಿದ್ದರು ಎಂದು ಆ ದಿನವನ್ನು ನೆನೆದಿದ್ದಾರೆ.
ನನಗೆ ಆರಂಭದಲ್ಲಿ ಆ ಮೆಸೇಜ್ ಅರ್ಥ ಆಗಲಿಲ್ಲ,ಯಾಕೆಂದರೆ ಆಗಲೇ ಹೇಳಿದಂತೆ ನಾನು ಆಗ ತಾನೇ ಚಿತ್ರರಂಗಕ್ಕೆ ಬಂದಿದ್ದೆ, ಹೀಗಾಗಿ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು, ಹೀಗಾಗಿ ಹೊಂದಾಣಿಕೆಯ ಮಾತುಗಳನ್ನಾಡುತ್ತಿದ್ದಾರೆ ಎಂದುಕೊಂಡಿದ್ದೆ ಎಂದು ಹೇಳಿರುವ ಮಾನ್ವಿ ಆ ನಂತರ ನಾನು ಆ ಮೆಸೇಜ್‌ನ ನನ್ನ ಮಾರ್ಗದರ್ಶಕದಂತೆ ಇದ್ದ ಕಾಸ್ಟಿಂಗ್ ಡೈರೆಕ್ಟರ್ ಒಬ್ಬರಿಗೆ ತೋರಿಸಿದೆ, ಆಗ ಅವರು ಕೂಡಲೇ ಮೆಸೇಜ್ ಡಿಲೀಟ್ ಮಾಡು ಆ ವ್ಯಕ್ತಿಯನ್ನು ಬ್ಲಾಕ್ ಮಾಡು ಎಂದು ನನಗೆ ಅವರು ಹೇಳಿದರು ಎಂದಿದ್ದಾರೆ. ಹೊಂದಾಣಿಕೆ ಅಂದರೆ ಚಿತ್ರರಂಗದ ಭಾಷೆಯಲ್ಲಿ ಪಾತ್ರಕ್ಕಾಗಿ ಪಲ್ಲಂಗಕ್ಕೇರುವುದು, ಹಾಸಿಗೆ ಹಂಚಿಕೊಳ್ಳುವುದು ಎಂದು ಗೊತ್ತಾದಾಗ ನನಗೆ ಆಘಾತವಾಯ್ತು ಎಂದಿದ್ದಾರೆ.
ಮುಂದುವರೆದು ಸಾಮಾನ್ಯವಾಗಿ ಇಂತಹ ವಿಷಯಗಳನ್ನು ಹಲವರು ಫೋನ್‌ನಲ್ಲಿ ಮಾತನಾಡುತ್ತಾರೆ. ಅಥವಾ ಮುಖಾಮುಖಿಯಾದಾಗ ಪ್ರಸ್ತಾಪ ಮಾಡುತ್ತಾರೆ. ಯಾಕೆಂದರೆ ಅಲ್ಯಾವುದು ಸಾಕ್ಷಿ ಇರಬಾರದು ಎನ್ನುವ ಆಲೋಚನೆ ಹಲವರದ್ದಾಗಿರುತ್ತೆ. ತಮ್ಮ ವಿರುದ್ದ ದೂರು ನೀಡಿದರೆ ಎನ್ನುವ ಭಯ ಇರುತ್ತೆ ಎಂದು ಹೇಳಿರುವ ಮಾನ್ವಿ ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಆ ವ್ಯಕ್ತಿ ನನಗೆ 1 ಲಕ್ಷ ಪ್ಲಸ್ ಕಾಂಪ್ರಮೈಸ್ ಎಂದು ನೇರವಾಗಿ ಮೆಸೇಜ್ ಮಾಡಿದ್ದ, ಅದೇ ನನಗೆ ಆಗ ಆದ ಆಶ್ಚರ್ಯ ಎಂದು ಹೇಳಿದ್ದಾರೆ. ಮನಸಿನ ಮೇಲೆ ಈ ಘಟನೆ ತುಂಬಾನೇ ಪರಿಣಾಮ ಬೀರಿತ್ತು, ಭವಿಷ್ಯದ ಬಗ್ಗೆ ಆತಂಕ ಕಾಡಲು ಶುರುವಾಗಿತ್ತು ಎಂದಿದ್ದಾರೆ. ಮಾನ್ವಿ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ.


Click it and Unblock the Notifications