For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಒಪ್ಪಿದರೆ, 13 ಕೋಟಿ ಗ್ಯಾರೆಂಟಿ.!

  By Harshitha
  |

  ಕಪ್ಪು ಕಂಗಳ ಮುಗ್ಧ ನೋಟ, ಮನಕಲಕುವ ಮನೋಜ್ಞ ಅಭಿನಯ, ಮೈನವಿರೇಳಿಸುವ ಈಕೆಯ ಮೋಹಕ ಮೈಮಾಟಕ್ಕೆ ಯಾರು ಬೇಕಾದ್ರೂ ಹೇಳ್ತಾರೆ ಊಲಾಲಾ....ಅಂತ.

  ಹೌದು, 'ಡರ್ಟಿ ಪಿಕ್ಚರ್'ನಲ್ಲಿ ''ಊಲಾಲಾ...'' ಅಂತ ಕುಣಿದು ಕುಪ್ಪಳಿಸಿದ ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಬಹುಬೇಡಿಕೆಯ ನಟಿ. ಎಲ್ಲೇ ಹೋದರೂ, ತಮ್ಮದೇ ಸ್ಟೈಲ್ ಮೇನ್ಟೇನ್ ಮಾಡುವ ವಿದ್ಯಾ 'ಸೀರೆ'ಗಳಿಂದಲೇ ಜನಪ್ರಿಯ.

  ಮೈತುಂಬ ಸೀರೆಯುಟ್ಟು, ಕಿವಿತುಂಬಾ ಜುಮ್ಕಿ ತೊಟ್ಟು, ಕ್ಯಾಮರಾ ಕಣ್ಣುಗಳಲ್ಲಿ ಲಕ ಲಕ ಅಂತ ಹೊಳೆಯುವ ವಿದ್ಯಾ ಬಾಲನ್ ಗೆ ಈಗ ಗೋಲ್ಡನ್ ಆಫರ್ ಸಿಕ್ಕಿದೆ. [ಮಕ್ಕಳಾಗಲು ಆಸ್ಪತ್ರೆಗೆ ಅಲೆಯುತ್ತಿರುವ ವಿದ್ಯಾ ಬಾಲನ್?]

  ಈ ಆಫರ್ ನ ವಿದ್ಯಾ ಬಾಲನ್ ಏನಾದರೂ ಒಪ್ಪಿಕೊಂಡರೆ, 13 ಕೋಟಿ ರೂಪಾಯಿ ಗ್ಯಾರೆಂಟಿ. ಅದ್ಯಾವ ಆಫರ್ ಅಂತ ತಿಳಿದುಕೊಳ್ಳಬೇಕಾದರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ಸೀರೆ ಎಂಡೋರ್ಸ್ ಮಾಡ್ಬೇಕು.!

  ಸೀರೆ ಎಂಡೋರ್ಸ್ ಮಾಡ್ಬೇಕು.!

  ಪ್ರಖ್ಯಾತ ಕಂಪನಿಯೊಂದು, ತಮ್ಮ ಹೊಸ ಬ್ರ್ಯಾಂಡ್ ಸೀರೆಗಳನ್ನು ಎಂಡೋರ್ಸ್ ಮಾಡುವುದಕ್ಕೆ ನಟಿ ವಿದ್ಯಾ ಬಾಲನ್ ಸೂಕ್ತ ಅಂತ ಅಭಿಪ್ರಾಯ ಪಟ್ಟಿದೆ.

  ಬ್ರಾಂಡ್ ಎಂಡೋರ್ಸ್ ಗೆ 13 ಕೋಟಿ.!

  ಬ್ರಾಂಡ್ ಎಂಡೋರ್ಸ್ ಗೆ 13 ಕೋಟಿ.!

  ತಮ್ಮ ಹೊಸ ಬ್ರ್ಯಾಂಡ್ ಸೀರೆಗೆ ಪ್ರಚಾರ ರಾಯಭಾರಿಯಾಗುವುದಕ್ಕೆ ವಿದ್ಯಾ ಬಾಲನ್ ರಿಗೆ ಬರೋಬ್ಬರಿ 13 ಕೋಟಿ ರೂಪಾಯಿ ಕೊಡುವುದಕ್ಕೆ ಕಂಪನಿ ತಯಾರಾಗಿದೆ.

  ವಿದ್ಯಾ ಬಾಲನ್ ಯಾಕೆ?

  ವಿದ್ಯಾ ಬಾಲನ್ ಯಾಕೆ?

  ಸದಾ ಸೀರೆತೊಟ್ಟು ಮಿನುಗುವ ವಿದ್ಯಾ ಬಾಲನ್ 'ಸೀರೆ'ಗೆ ಪ್ರಚಾರ ರಾಯಭಾರಿ ಬೆಸ್ಟ್ ಚಾಯ್ಸ್ ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

  ಸೀರೆಯಲ್ಲಿ ಮಿನುಗುವ ವಿದ್ಯಾ ಬಾಲನ್

  ಸೀರೆಯಲ್ಲಿ ಮಿನುಗುವ ವಿದ್ಯಾ ಬಾಲನ್

  ಕೆಂಪು ಬಣ್ಣದ ಸೀರೆಯಲ್ಲಿ ವಿದ್ಯಾ ಬಾಲನ್

   ಕಾಟನ್ ಸೀರೆಗೂ ಸೈ

  ಕಾಟನ್ ಸೀರೆಗೂ ಸೈ

  ಕಪ್ಪು ಬಣ್ಣದ ಕಾಟನ್ ಸೀರೆಯಲ್ಲಿ 'ಡರ್ಟಿ' ಗರ್ಲ್ ವಿದ್ಯಾ ಬಾಲನ್

  ಎಲ್ಲೇ ಹೋದರೂ ಸೀರೆ ಫಿಕ್ಸ್

  ಎಲ್ಲೇ ಹೋದರೂ ಸೀರೆ ಫಿಕ್ಸ್

  ಬಾಲಿವುಡ್ ನ ಇತರೆ ನಟಿಯರಂತೆ ವಿದ್ಯಾ ಬಾಲನ್ ಸ್ಕರ್ಟ್ಸ್, ಗೌನ್ ತೊಡುವುದಿಲ್ಲ. ಬದಲಾಗಿ ಎಲ್ಲೇ ಹೋದರೂ, ಯಾವುದೇ ಫಂಕ್ಷನ್ ಗೆ ತೆರಳಿದರೂ ಸೀರೆಯನ್ನೇ ಉಡುತ್ತಾರೆ.

  ಸಿಂಪಲ್ ಲುಕ್ ನಲ್ಲಿ ವಿದ್ಯಾ

  ಸಿಂಪಲ್ ಲುಕ್ ನಲ್ಲಿ ವಿದ್ಯಾ

  ಬಿಳಿ ಮತ್ತು ಕೆಂಪು ಕಾಂಬಿನೇಷನ್ ನಲ್ಲಿ ವಿದ್ಯಾ ಸಿಂಪಲ್ ಆದ್ರೂ, ಅಷ್ಟೇ ಬ್ಯೂಟಿಫುಲ್.

  ಈಕೆ ಬಿಟ್ರೆ ಇನ್ಯಾರು?

  ಈಕೆ ಬಿಟ್ರೆ ಇನ್ಯಾರು?

  ಬಾಲಿವುಡ್ ನ ಈಗಿನ ನಟಿಯರ ಪೈಕಿ ಈಕೆ ಬಿಟ್ಟರೆ, ಇನ್ಯಾರ್ತಾನೆ 'ಸೀರೆ'ಗೆ ರಾಯಭಾರಿ ಆಗಲು ಸಾಧ್ಯ?

  ಮಲ್ಲು ಕುಟ್ಟಿ ವಿದ್ಯಾ

  ಮಲ್ಲು ಕುಟ್ಟಿ ವಿದ್ಯಾ

  ವಿದ್ಯಾ ಬಾಲನ್ ಮೂಲತಃ ಕೇರಳಾದವರು. ಮನೆಯಲ್ಲಿ ಮಲಯಾಳಂ ಮತ್ತು ತಮಿಳು ಮಾತನಾಡುವ ವಿದ್ಯಾ ಬಾಲನ್ ಗೆ ಸೀರೆ ಅಂದ್ರೆ ಪಂಚಪ್ರಾಣ.

  ಪ್ರಚಾರ ರಾಯಭಾರಿ ಆಗಲು ವಿದ್ಯಾ ಒಪ್ತಾರಾ?

  ಪ್ರಚಾರ ರಾಯಭಾರಿ ಆಗಲು ವಿದ್ಯಾ ಒಪ್ತಾರಾ?

  ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ವಿದ್ಯಾ ಬಾಲನ್ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಒಂದ್ವೇಳೆ ಒಪ್ಪಿದರೆ, ಸೀರೆಯಲ್ಲಿ ನೀರೆ ವಿದ್ಯಾ ಮತ್ತೆ ಮಿನುಗುತ್ತಾರೆ. ಅದು 13 ಕೋಟಿ ರೂಪಾಯಿ ಪಡೆದು.!

  English summary
  Bollywood Actress Vidya Balan has been approached by a prominent Saree Brand to endorse their product. For this the Actress has been offered Rs.13 Crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X