For Quick Alerts
  ALLOW NOTIFICATIONS  
  For Daily Alerts

  ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?

  |

  ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ವರ್ಷದ ಪ್ರಾರಂಭದಲ್ಲೇ, ಬಿ ಟೌನ್ ಜೋಡಿಹಕ್ಕಿಗಳಾಗಿರುವ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಹಸೆಮಣೆ ಏರುತ್ತಿದ್ದಾರೆ. ಇಬ್ಬರ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ.

  ಅಂದಹಾಗೆ ವರುಣ್ ಧವನ್ ಮದುವೆ ಅಲಿಬಾಗ್ ನಲ್ಲಿ ನಡೆಯುತ್ತಿದೆ. ಇದೇ ತಿಂಗಳು ಜನವರಿ 24ರಂದು ವರುಣ್ ಧವನ್ ಬಾಲ್ಯದ ಗೆಳತಿ ನತಾಶಾಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅಂದಹಾಗೆ ಇಬ್ಬರ ಮದುವೆ ಅಲಿಬಾಗ್ ನ ಐಷಾರಾಮಿ ದಿ ಮ್ಯಾನ್ಷನ್ ಹೌಸ್ ಹೋಟೆಲ್ ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ.

  ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ

  ಮ್ಯಾನ್ಷನ್ ಹೌಸ್ ಸಖತ್ ರಾಯಲ್ ಆಗಿದ್ದು, ನೋಡಲು ಅಷ್ಟೆ ಸುಂದರವಾಗಿದೆ. ಕಣ್ಣು ಕುಕ್ಕುವಂತಿರುವ ಮಾನ್ಷನ್ ಹೌಸ್ ನಲ್ಲಿ ವರುಣ್ ಮತ್ತು ನತಾಶಾ ಹಸಮಣೆ ಏರುತ್ತಿದ್ದಾರೆ. ಮಾನ್ಷನ್ ಹೌಸ್ ನಲ್ಲಿ ಒಟ್ಟು 25 ರೂಮ್ ಗಳಿಗೆ. ಮದುವೆಗೆ ಸುಮಾರ್ 150 ಜನ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊರೊನಾ ಕಾರಣದಿಂದ ಕೇವಲ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ.

  ಐಷಾರಾಮಿ ಮ್ಯಾನ್ಷನ್ ಹೌಸ್ ನಲ್ಲಿ ಒಂದು ದಿನದ ವಾಸ್ತವ್ಯಕ್ಕೆ ಬರೋಬ್ಬರಿ 4.5 ಲಕ್ಷ ರೂಪಾಯಿ ನೀಡಬೇಕು. ಇದು ವಸತಿ ಮತ್ತು ಊಟ ಎಲ್ಲಾ ಸೇರಿದೆ. ವರುಣ್ ಧವನ್ ಮದುವೆ ಸುಮಾರು 5 ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ. 5 ದಿನಕ್ಕೆ ವರುಣ್ ಕುಟುಂಬ ವಸತಿ ವೆಚ್ಚಕ್ಕೆ ಲಕ್ಷಗಟ್ಟಲೇ ಖರ್ಚು ಮಾಡುತ್ತಿದ್ದಾರೆ ಅಂದರೆ ಇನ್ನು ಮದುವೆಗೆ ಎಷ್ಟು ಖರ್ಚಾಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ಅಂದಹಾಗೆ ವರುಣ್ ಮದುವೆಗೆ ಕುಟುಂಬದವರು ಹೊರತುಪಡಿಸಿ, ಕರಣ್ ಜೋಹರ್, ಅಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಜೋಡಿ, ಸಲ್ಮಾನ್ ಖಾನ್ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ, ವರುಣ್ ಮತ್ತು ನತಾಶಾ ಹೇಗೆ ಮಿಂಚಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Rs 4 lakh per day cost of Accommodation at Varun Dhawan and Natasha's wedding in Alibaug.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X