»   » ಪ್ರಿಯಾಂಕಾ ಚೋಪ್ರಾಗೆ ಏಳು ನಿಮಿಷಕ್ಕೆ ಆರು ಕೋಟಿ

ಪ್ರಿಯಾಂಕಾ ಚೋಪ್ರಾಗೆ ಏಳು ನಿಮಿಷಕ್ಕೆ ಆರು ಕೋಟಿ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಲ್ಲಿ ಸಂಭಾವನೆಗಿಂತಲೂ ಈಗ ಐಟಂ ಡಾನ್ಸ್ ಗಳದ್ದೇ ಹವಾ. ಇನ್ನೇನು ವರ್ಷ ವರ್ಷವನ್ನು ಬರಮಾಡಿಕೊಳ್ಳಲು ಕೆಲವೇ ದಿನಗಳು ಬಾಕಿ ಇದೆ. ಆಗಲೇ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ವರ್ಷದ ಉತ್ಸಾಹ ಪುಟಿದೇಳುತ್ತಿದೆ.

ಹೊಸ ವರ್ಷದ ಉತ್ಸಾಹಕ್ಕೆ ಇನ್ನಷ್ಟು ಮೆರುಗು ನೀಡಲು ಬಾಲಿವುಡ್ ತಾರೆಗಳನ್ನು ಕುಣಿಸಲು ಸಿದ್ಧತೆಗಳು ಗರಿಗೆದರಿವೆ. ಚೆನ್ನೈನಲ್ಲಿ ಆಯೋಜಿಸಿರುವ ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಆಹ್ವಾನಿಸಲಾಗಿದೆ. [ಆರು ಸಲ ಮದುವೆಯಾಗುತ್ತೇನೆ ಎಂದ ಪ್ರಿಯಾಂಕಾ]


ಕೇವಲ ಏಳು ನಿಮಿಷಗಳ ಕಾಲ ಪ್ರಿಯಾಂಕಾ ಚೋಪ್ರಾ ಕುಣಿದರೆ ಸಾಕು. ರು. 6 ಕೋಟಿ ಎಣಿಸುತ್ತಾರೆ. ಯಾರಿಗುಂಟು ಯಾರಿಗಿಲ್ಲ ಹೇಳಿ ಈ ಸುವರ್ಣ ಅವಕಾಶ. ಆ ರೀಯ ಅವಕಾಶ ಪಿಗ್ಗಿಗೆ ಬಂದಿದೆ. ಇಷ್ಟು ಕೊಟ್ಟರೆ ಕುಣಿಯುತ್ತೇನೆ ಎಂದು ಸ್ವತಃ ಡಿಮಾಂಡ್ ಮಾಡಿದ್ದಾರೆ ಪಿಗ್ಗಿ.

ಈ ಸಂಬಂಧ ಕಳೆದ ಕೆಲವು ವಾರಗಳಿಂದ ಪಿಗ್ಗಿ ಹಾಗೂ ಕಾರ್ಯಕ್ರಮದ ಆಯೋಜಕರ ನಡುವೆ ಹಗ್ಗಾಜಗ್ಗಾಟ ನಡೆಯುತ್ತಲೇ ಇತ್ತಂತೆ. ಕಡೆಗೆ ವ್ಯವಹಾರ ಕುದುರಿ ಈಗ ಡಿಸೆಂಬರ್ 31ರ ರಾತ್ರಿ ಕುಣಿಯಲು ಪಿಗ್ಗಿ ಮುಂದೆ ಒಪ್ಪಂದ ಪತ್ರಗಳನ್ನು ಇಟ್ಟಿದ್ದಾರೆ. ಆದರೆ ಪಿಗ್ಗಿ ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲವಂತೆ.

ಕಾರ್ಯಕ್ರಮ ಆಯೋಜಕರು ಇಂತಿಷ್ಟು ಎಂದು ಟಿಕೆಟ್ ಬೆಲೆ ನಿರ್ಧರಿಸಿ ಡಬ್ಬಲ್ ಹಣ ಸಂಪಾದಿಸುತ್ತಾರೆ. ಒಟ್ಟಾರೆಯಾಗಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಕೊನೆಕ್ಷಣದವರೆಗೂ ಕಾಯಿಸಿ ಬಳಿಕ ಪಿಗ್ಗಿ ಎಸ್ ಎನ್ನಬಹುದೇನೋ? (ಏಜೆನ್ಸೀಸ್)

English summary
Bollywood bindaas beauty Priyanka Chopra has agreed to perform at a New Year bash in Chennai. The actress has apparently demanded Rs 6 crore to get jiggy. 
Please Wait while comments are loading...