ಸುಂದರವಾದ ನಟಿಯ ಅಶ್ಲೀಲ ಚಾಟ್ ಲೀಕ್ ; ಮೆಸೇಜ್ ಓದಿ ಚಿತ್ರರಂಗ ಕಕ್ಕಾಬಿಕ್ಕಿ - ದೂರು ದಾಖಲು

ಹೇಳಿ ಕೇಳಿ ಇದು 5G ಯುಗ. ಈ ಯುಗದಲ್ಲಿ ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಹಲವರು ಹೈರಾಣಾಗಿದ್ದಾರೆ. ಮತ್ತೊಂದು ಕಡೆ ಸೈಬರ್ ವಂಚಕರಿಂದ ಹಲವರು ಕಂಗಾಲಾಗುತ್ತಿದ್ಧಾರೆ. ಬದಲಾದ ಈ ಕಾಲದಲ್ಲಿ ಹಣದಾಸೆಗೆ ಕಳ್ಳರು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದಾರೆ.

ಇನ್ನೊಂದು ಕಡೆ ತಮ್ಮ ಚಾಕ್ಯಚಕ್ಯತೆಯಿಂದ ಬೇರೆಯವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಈ ಹಿನ್ನೆಲೆ ಈ ಸೋಶಿಯಲ್ ಮೀಡಿಯಾ ಮತ್ತು ತಂತ್ರಜ್ಞಾನದ ಚಕ್ರವ್ಯೂಹದಲ್ಲಿ ಸಿಲುಕಿ ಹಲವರು ನರಳುತ್ತಿದ್ದಾರೆ. ಅದರಲ್ಲಿಯೂ ಸೆಲೆಬ್ರೇಟಿಗಳ ಪಾಡು ಹೇಳಲು ಅಸಾಧ್ಯ. ಇದಕ್ಕೆ ರೂಹಿ ಸಿಂಗ್ ಅವರ ಪ್ರಕರಣ ಸದ್ಯದ ಮತ್ತೊಂದು ಉದಾಹರಣೆ.

Ruhi Singh Strikes Back Masti 4 Files Police Complaint After Filthy Impersonation Chats Go Viral

ಹೌದು, ರೂಹಿ ಸಿಂಗ್.. ಬಾಲಿವುಡ್‌ನ ಬಿಂದಾಸ್ ಚೆಲುವೆ. 2011ರಲ್ಲಿ ನಡೆದ 'ಫೆಮಿನಾ ಮಿಸ್ ಇಂಡಿಯಾ ಈಸ್ಟ್'ನ ರನ್ನರ್ ಅಪ್. ಮಿಯಾಮಿಯಲ್ಲಿ ನಡೆದ 'ಮಿಸ್ ಯುನೈಟೆಡ್ ನೇಷನ್ಸ್‌'ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಡಗಿ. 2015ರಲ್ಲಿ ಮಧುರ್ ಭಂಡಾರ್ಕರ್ ನಿರ್ದೇಶನದ ''ಕ್ಯಾಲೆಂಡರ್ ಗರ್ಲ್ಸ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರೂಹಿ ಸಿಂಗ್ ''ಸ್ಪಾಟ್‌ಲೈಟ್''.. ''ಪರ್ಚಾಯೀ''.. ''ಬ್ಯಾಂಗ್ ಬ್ಯಾಂಗ್''.. ''ರನ್‌ಅವೇ ಲೂಗಾಯಿ''.. ''ಚಕ್ರವ್ಯೂಹ್'' ಸೇರಿದಂತೆ ಹಲವು ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ. ''ಮಸ್ತಿ 4'' ಇವರ ಇತ್ತೀಚಿನ ಚಿತ್ರ.

ಇಂಥಾ ರೂಹಿ ಸಿಂಗ್ ಅವರ ಹೆಸರು ಮತ್ತು ಫೋಟೊಗಳನ್ನು ಅನಾಮಧೇಯ ವ್ಯಕ್ತಿಯೊಬ್ಬ ದುರ್ಬಳಕೆ ಮಾಡಿಕೊಂಡಿದ್ದಾನೆ. ವಾಟ್ಸಾಪ್‌ನಲ್ಲಿ ಅಸಭ್ಯ ಮತ್ತು ಅಶ್ಲೀಲವಾದ ಸಂದೇಶಗಳನ್ನು ಚಿತ್ರರಂಗದಲ್ಲಿ ಸಿಕ್ಕ ಸಿಕ್ಕವರಿಗೆ ಕಳಿಸಿದ್ದಾನೆ. ಇದರಿಂದ ಚಿತ್ರರಂಗ ಕೂಡ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದೆ. ಫೋಟೋಶೂಟ್ ನೆಪದಲ್ಲಿ ಅತ್ಯಂತ ಆಕ್ಷೇಪಾರ್ಹ ಮತ್ತು ದ್ವಂದ್ವಾರ್ಥದ ಮಾತುಗಳನ್ನಾಡಿರುವ ವ್ಯಕ್ತಿ,'ಮಸ್ತಿ ಸೈಡ್', 'ಬೇಬಿ ಸೈಡ್' ಮತ್ತು ನನ್ನ 'ರಿಯಲ್ ಸೈಡ್'‌ನ ನೀನು ಇನ್ನೂ ನೋಡಿಲ್ಲ ಎಂಬರ್ಥದಲ್ಲಿ ಮೆಸೇಜ್ ಮಾಡಿದ್ದಾನೆ. ಆಗ ಎದುರುಗಡೆ ಇರುವ ವ್ಯಕ್ತಿಗೆ ಅನುಮಾನ ಬಂದು ನೀವು ಯಾವತ್ತೂ ಈ ರೀತಿ ಮಾತನಾಡಿದವರಲ್ಲವಲ್ಲ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ದಾರಿ ತಪ್ಪಿಸುವ ಮತ್ತು ಅಸಭ್ಯವಾದ ಸಂದೇಶಗಳು ನನ್ನ ಹೆಸರಿನಲ್ಲಿ ಎಲ್ಲರಿಗೆ ರವಾನೆಯಾಗುತ್ತಿರುವ ವಿಚಾರವನ್ನು ತಿಳಿದ ರೂಹಿ ಸಿಂಗ್, ಆಘಾತಕ್ಕೊಳಗಾಗಿದ್ದಾರೆ. ತಡ ಮಾಡದೇ ಸೈಬರ್ ಕ್ರೈಂಗೆ ದೂರನ್ನು ಕೂಡ ಸಲ್ಲಿಸಿರುವ ರೂಹಿ ಸಿಂಗ್ ಸ್ವತಃ ಮುಂದೆ ಬಂದು ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆದ ವಾಟ್ಸಾಪ್ ಚಾಟ್‌ಗಳನ್ನು ಹಂಚಿಕೊಂಡು, ಈ ಸಂದೇಶಗಳು ತಮ್ಮದಲ್ಲ ಎಂದು ಸ್ಪಷ್ಟಪಡಿಸಿರುವ ರೂಹಿ ಸಿಂಗ್, ಯಾರೋ ನನ್ನ ಫೋಟೊ ಮತ್ತು ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 6369584327 ನಂಬರ್ ದಿಂದ ಮೆಸೇಜ್ ಬಂದರೆ ಕೂಡಲೇ ಆ ನಂಬರ್ ಬ್ಲಾಕ್ ಮಾಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿರುವ ರೂಹಿ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವ ಬದಲು, ನಿಮ್ಮ ಜೀವನದಲ್ಲಿ ಒಂದು ಸ್ವಲ್ಪ ಒಳ್ಳೆಯ ಕೆಲಸ ಮಾಡಿ ಎಂದು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ruhi Singh Strikes Back Masti 4 Files Police Complaint After Filthy Impersonation Chats Go Viral

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೂಹಿ ಸಿಂಗ್, ಪೊಲೀಸರಿಗೆ ಸದ್ಯ ದೂರು ನೀಡಿದ್ದು, ಪೊಲೀಸರು ಸೈಬರ್ ವಂಚಕನ ಪತ್ತೆಗೆ ಜಾಲ ಬೀಸಿದ್ದಾರೆ. ಮತ್ತೊಂದು ಕಡೆ ಇದು ವೈಯಕ್ತಿಕ ದಾಳಿಯಲ್ಲ, ರೂಹಿ ಅವರ ವೃತ್ತಿಜೀವನವನ್ನು ಹಾಳು ಮಾಡಲು ಯಾರು ಬೇಕಂತಲೇ ಇಂತಹದ್ದೊಂದು ಸಂಚು ರೂಪಿಸಿರಬಹುದು ಎನ್ನುವ ಅನುಮಾನವನ್ನು ಸದ್ಯ ಚಿತ್ರರಂಗದಲ್ಲಿ ಹಲವರು ವ್ಯಕ್ತಪಡಿಸುತ್ತಿದ್ದಾರೆ.

Ruhi Singh Strikes Back Masti 4 Files Police Complaint After Filthy Impersonation Chats Go Viral
Ruhi Singh Strikes Back Masti 4 Files Police Complaint After Filthy Impersonation Chats Go Viral

More from Filmibeat

English summary
Ruhi Singh exposed? The actress breaks her silence on the "dirty chats" leaked online, revealing a shocking case of digital impersonation. See the screenshots and find out why she's taking the scammer to the Cyber Cell!
Read more about: cyber crime viral photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X