For Quick Alerts
  ALLOW NOTIFICATIONS  
  For Daily Alerts

  ನ್ಯೂಯಾರ್ಕ್‌ಗೆ ಭಾವುಕ ವಿದಾಯ ಹೇಳಿದ ಶಾರುಖ್ ಮಗಳು

  |

  ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಭಾರತದಲ್ಲಿಲ್ಲ ಎಂಬುದು ಗುಟ್ಟೇನೂ ಅಲ್ಲ. ಸುಹಾನಾ ಖಾನ್ ಇರುವುದು ಅಮೆರಿಕದಲ್ಲಿ ಅಲ್ಲಿ ಸಿನಿಮಾ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಸುಹಾನಾ.

  ಶಾರುಖ್ ಖಾನ್ ಮಕ್ಕಳು ಮಾತ್ರವೇ ಅಲ್ಲ ಹಲವು ಸ್ಟಾರ್ ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಮಕ್ಕಳು ವಿದೇಶಗಳಲ್ಲಿಯೇ ಇರುವುದು. ಕೆಲವರು ಓದಲು ವಿದೇಶಕ್ಕೆ ತೆರಳಿದರೆ, ಇನ್ನು ಕೆಲವರು ಸುಮ್ಮನೆ ತೆರಳಿರುತ್ತಾರೆ.

  ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಓದಲೆಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇಷ್ಟು ದಿನ ವಾಸವಿದ್ದರು. ಅಲ್ಲಿನ ಸಿನಿಮಾ ಕಾಲೇಜೊಂದರಲ್ಲಿ ಸಿನಿಮಾ ತಂತ್ರಜ್ಞಾನ ನಟನೆ ಕುರಿತು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿರುವ ಸುಹಾನಾ ಖಾನ್ ಇದೀಗ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ.

  ಕೆಲ ವರ್ಷಗಳ ಕಾಲ ನ್ಯೂಯಾರ್ಕ್‌ನಲ್ಲಿ ತಂಗಿದ್ದ ಸುಹಾನಾ ಖಾನ್, ನ್ಯೂಯಾರ್ಕ್‌ನಲ್ಲಿ ಗೆಳೆಯ-ಗೆಳತಿಯರೊಟ್ಟಿಗೆ ಸೇರಿ ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಸಾಕಷ್ಟು ಒಳ್ಳೆಯ ಸಮಯಗಳನ್ನು ಕಳೆದಿದ್ದಾರೆ. ಇದೀಗ ಒಮ್ಮೆಗೆ ನ್ಯೂಯಾರ್ಕ್‌ಗೆ ವಿದಾಯ ಹೇಳಬೇಕಾಗಿರುವುದು ಸಹಜವಾಗಿಯೇ ಅವರಿಗೆ ಬೇಸರ ಮೂಡಿಸಿದೆ.

  ಭಾರವಾದ ಹೃದಯದಿಂದ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿರುವ ಸುಹಾನಾ ಖಾನ್, ದೊಡ್ಡ ಕಟ್ಟಡದ ಮುಂದೆ ಲಾರಿಯೊಂದು ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಲಾರಿಯ ಮೇಲೆ, ''ಚಿಂತಿಸದಿರಿ, ನೀವು ನ್ಯೂಯಾರ್ಕ್‌ ತೊರೆದು ಹೋದರು ನ್ಯೂಯಾರ್ಕನ್ ಆಗಿರುತ್ತೀರಿ'' ಎಂದು ಬರೆದಿದೆ. ಸುಹಾನಾರ ಈ ಪೋಸ್ಟ್‌ಗೆ ಅವರ ನ್ಯೂಯಾರ್ಕ್ ಗೆಳೆಯರು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

  ನ್ಯೂಯಾರ್ಕ್‌ನಲ್ಲಿ ಸುಹಾನಾ ಗೆಳೆಯರೊಟ್ಟಿಗೆ ಮಾಡುತ್ತಿದ್ದ ಪಾರ್ಟಿಗಳ ಚಿತ್ರಗಳನ್ನು ಆಗಾಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು. ಸುಹಾನಾ ತಮ್ಮ ಗೆಳತಿಯರೊಟ್ಟಿಗೆ ಮಾಡಿದ್ದ ಪೂಲ್ ಪಾರ್ಟಿಯ ಚಿತ್ರಗಳು ಭಾರತದಲ್ಲಿ ಸಖತ್ ವೈರಲ್ ಆಗಿದ್ದವು.

  ಸುಹಾನಾ ನ್ಯೂಯಾರ್ಕ್‌ನಲ್ಲಿ ಸಿನಿಮಾ ತಂತ್ರಜ್ಞಾನ ಶಿಕ್ಷಣ ಮುಗಿಸಿದ್ದಾರೆ. ತಮ್ಮ ವಿದ್ಯಾರ್ಥಿ ಅವಧಿಯಲ್ಲಿ ಸುಹಾನಾ ಕಿರು ಚಿತ್ರವೊಂದರಲ್ಲಿ ನಟಿಸಿದ್ದಾರೆ ಹಾಗೂ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸುಹಾನಾ ಬಾಲಿವುಡ್‌ಗೆ ಶೀಘ್ರದಲ್ಲಿಯೇ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಭಾರತಕ್ಕೆ ಆಗಮಿಸಿದ ಕೂಡಲೇ ಕರಣ್ ಜೋಹರ್ ಅಥವಾ ಇನ್ನಾವುದೇ ಸಿನಿಮಾ ನಿರ್ದೇಶಕರೊಟ್ಟಿಗೆ ಸಹಾಯಕ ನಿರ್ದೇಶಕಿಯಾಗಿ ಸುಹಾನ ಸೇರಿಕೊಳ್ಳುವ ಸಾಧ್ಯತೆ ಇದೆ. ಸೈಫ್ ಅಲಿ ಖಾನ್ ಪುತ್ರ ಈಗಾಗಲೇ ಕರಣ್ ಜೋಹರ್ ಜೊತೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿಸಿತ್ತು. ಸುಮಾರು ಒಂದು ತಿಂಗಳ ಕಾಲ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು. ಇದೀಗ ಆರ್ಯನ್ ಖಾನ್‌ಗೆ ಜಾಮೀನು ದೊರೆತಿದೆ. ಆರ್ಯನ್ ಖಾನ್ ಪ್ರಕರಣದಲ್ಲಿ ಎನ್‌ಸಿಬಿ ನಿಯಮ ಪಾಲಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಆ ಬಗ್ಗೆ ತನಿಖೆ ನಡೆಸುತ್ತಿದೆ.

  English summary
  Shah Rukh Khan's daughter Suhana Khan coming to back to India from New York. She emotionally says bye to New York.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X