ಸಲ್ಮಾನ್ ಖಾನ್ ಹಣ ಹಂಚುತ್ತಿದ್ದಾರೆಂದು ಮುಗಿಬಿದ್ದ ಜನ, ಪೊಲೀಸರಿಗೆ ತಲೆನೋವು

ರಂಜಾನ್ ಅಥವಾ ಈದ್ ಹಬ್ಬಕ್ಕೆ ಮುಸ್ಲಿಮರು ದಾನ ಮಾಡುವುದು ಪ್ರತೀತಿ. ಸಲ್ಮಾನ್ ಖಾನ್ ಸಹ ಪ್ರತಿ ರಂಜಾನ್‌ ಗೆ ಹಣ, ಬಟ್ಟೆ, ಆಹಾರ ದಾನ ಮಾಡುತ್ತಾರೆ.

Recommended Video

ಮುದ್ದು ಮಗಳ ಹುಟ್ಟುಹಬ್ಬಕ್ಕೆ ಸುದೀಪ್ ವಿಶ್ ಮಾಡಿದ್ದು ಹೇಗೆ ನೋಡಿ | Sudeep wish to daughter

ಈ ಬಾರಿಯೂ ರಂಜಾನ್‌ ಗೆ ಸಲ್ಮಾನ್ ಖಾನ್ ಹಣ, ಆಹಾರ ದಾನ ನೀಡುತ್ತಿದ್ದಾರೆಂದು ಸುಳ್ಳು ಸುದ್ದಿ ನಂಬಿ ನೂರಾರು ಮಂದಿ ಮಸೀದಿಯೊಂದರ ಬಳಿ ಜಮಾಯಿಸಿಬಿಟ್ಟಿದ್ದರು.

ಲಾಕ್‌ಡೌನ್ ಸಮಯದಲ್ಲಿ ಇಷ್ಟೋಂದು ಮಂದಿ ಒಂದೆಡೆ ಜಮಾಯಿಸಿದ್ದು ಪೊಲೀಸರಿಗೆ ತಲೆನೋವು ತರಿಸಿತು. ಕೊನೆಗೆ ಎಲ್ಲರನ್ನೂ ಪೊಲೀಸರೇ ಸ್ಥಳದಿಂದ ಸಾಗುಹಾಕಿದರು.

ಮುಂಬೈನ ಬಿವಾಂಡಿಯ ಮಸೀದಿಯೊಂದರ ಬಳಿ ಸಲ್ಮಾನ್ ಖಾನ್ ಬಂದಿದ್ದಾರೆಂದು, ದಾನ ಮಾಡುತ್ತಿದ್ದಾರೆಂದು ಗಾಳಿ ಸುದ್ದಿ ಹರಿದಾಡಿತ್ತು. ಇದನ್ನು ನಂಬಿ ಬುಧವಾರದಂದು ಸಂಜೆ ವೇಳೆಗೆ ನೂರಾರು ಸಂಖ್ಯೆಯಲ್ಲಿ ಜನರು ನೆರೆದುಬಿಟ್ಟರು.

ಮುಂಬೈನಲ್ಲಿ ಮೇರೆ ಮೀರಿದೆ ಕೊರೊನಾ

ಮುಂಬೈನಲ್ಲಿ ಮೇರೆ ಮೀರಿದೆ ಕೊರೊನಾ

ಮುಂಬೈನಲ್ಲಿ ಈಗಾಗಲೇ ಕೊರೊನಾ ವೈರಸ್ ಮೇರೆ ಮೀರಿದೆ. ಮುಂಬೈ ನಗರವೊಂದರಲ್ಲೇ ಕೊರೊನಾ ಪೀಡಿತರ ಸಂಖ್ಯೆ 25,000 ದಾಟಿದೆ. ಇಂಥಹುದರಲ್ಲಿ ಇಷ್ಟೋಂದು ಸಂಖ್ಯೆಯಲ್ಲಿ ಜನ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಇಲ್ಲದೆ ಬಂದಿದ್ದು ಆತಂಕ ಮೂಡಿಸಿತ್ತು.

ಶಾಂತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಶಾಂತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಕೊನೆಗೆ ಶಾಂತಿ ನಗರ ಪೊಲೀಸರು ಮಧ್ಯ ಪ್ರವೇಶಿಸಿ, ಜನರನ್ನು ಚದುರಿಸಿದರು. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿದ ವರದಿ ಆಗಿಲ್ಲ. ಆದರೆ ಗಾಳಿಸುದ್ದಿ ಹರಡಿಸಿದವರು ಯಾರೆಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸುಳ್ಳು ಸುದ್ದಿ ಮೂಲ ಹುಡುಕಲಾಗುತ್ತಿದೆ: ಪೊಲೀಸ್

ಸುಳ್ಳು ಸುದ್ದಿ ಮೂಲ ಹುಡುಕಲಾಗುತ್ತಿದೆ: ಪೊಲೀಸ್

ಶಾಂತಿ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮಮತಾ ಲಾರೆನ್ಸ್ ಡಿಸೋಜಾ ಮಾತನಾಡಿ, 'ಯಾರು ಹಾಗೂ ಹೇಗೆ ಸುಳ್ಳು ಸುದ್ದಿ ಹರಡಿಸಿದರು ಹಾಗೂ ಸುಳ್ಳು ಸುದ್ದಿ ಮೂಲವನ್ನು ಹುಡುಕಲಾಗುತ್ತಿದೆ. ಆನಂತರವೇ ಹೇಗೆ ಕ್ರಮಕೈಗೊಳ್ಳಬೇಕೆಂದು ನಿರ್ಣಯಿಸುತ್ತೇವೆ' ಎಂದು ಹೇಳಿದ್ದಾರೆ.

ಪೆನ್ವೇಲ್ ಫಾರ್ಮ್‌ನಲ್ಲಿದ್ದಾರೆ ಸಲ್ಮಾನ್ ಖಾನ್

ಪೆನ್ವೇಲ್ ಫಾರ್ಮ್‌ನಲ್ಲಿದ್ದಾರೆ ಸಲ್ಮಾನ್ ಖಾನ್

ಅಸಲಿಗೆ ಸಲ್ಮಾನ್ ಖಾನ್ ಮುಂಬೈ ನಲ್ಲಿ ಇಲ್ಲ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿನ ಪೆನ್ವೇಲ್‌ ಎಂಬಲ್ಲಿನ ತಮ್ಮ ಫಾರ್ಮ್ ಹೌಸ್‌ನಲ್ಲಿದ್ದಾರೆ. ಅಲ್ಲಿಯೇ ಅವರ ಕುಟುಂಬ ಕೆಲವರು ಗೆಳೆಯರು ಇದ್ದಾರೆ. ಅಲ್ಲಿಯೇ ಹಾಡೊಂದನ್ನು ಚಿತ್ರಿಸಿ ಬಿಡುಗಡೆಯನ್ನೂ ಇತ್ತೀಚೆಗೆ ಮಾಡಿದ್ದರು ಸಲ್ಮಾನ್ ಖಾನ್.

More from Filmibeat

English summary
Rumors spread that Salman Khan distributing money and food in Bhiwandi. So hundreds of people gathered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X