ಗೋಧಿ ಹಿಟ್ಟು, ಹಣ ಮತ್ತು ಆಮೀರ್ ಖಾನ್: ಹಬ್ಬಿರುವ ವದಂತಿ ಬಗ್ಗೆ ಪರ್ಫೆಕ್ಷನಿಸ್ಟ್ ಹೇಳಿದ್ದೇನು?

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಬಡವರಿಗೆ ಸಹಾಯ ಮಾಡುವ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಆಮೀರ್ ಖಾನ್ ನೆರವು ನೀಡುತ್ತಿದ್ದಾರೆ. ಗೋಧಿ ಹಿಟ್ಟಿನ ಬ್ಯಾಗ್ ಗಳನ್ನು ಟ್ರಕ್ ಗಳ ಮೂಲಕ ಕಳುಹಿಸಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Recommended Video

ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

ಹಿಟ್ಟಿನ ಚೀಲಗಳನ್ನು ಮಾತ್ರವಲ್ಲದೆ ಅದರೊಳಗೆ 15,000 ರೂಪಾಯಿ ಇಟ್ಟು ಕಳುಹಿಸಿಕೊಡುತ್ತಿದ್ದಾರೆ. ಬಡವರಿಗೆ ನೆರವಾಗಲು ಆಮೀರ್ ಖಾನ್ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ಈ ಸುದ್ದಿ ಹೇಗೆ ಬಹಿದಾಡುತ್ತಿದೆ, ವಿಡಿಯೋ ಮಾಡಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ನಟ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಗೋಧಿ ಹಿಟ್ಟು ಮತ್ತು ಹಣದ ವದಂತಿ

ಗೋಧಿ ಹಿಟ್ಟು ಮತ್ತು ಹಣದ ವದಂತಿ

"ಗೋಧಿ ಹಿಟ್ಟಿನ ಚೀಲ ತುಂಬಿದ ಟ್ರಕ್ ಅನ್ನು ಆಮೀರ್ ಖಾನ್ ದೆಹಲಿಗೆ ಕಳುಹಿಸಿದ್ದಾರೆ. ಟ್ರಕ್ ನಲ್ಲಿ 1 ಕಿಲೋ ಗೋಧಿ ಹಿಟ್ಟಿನ ಬ್ಯಾಗ್ ಇದೆ. ಆ ನಂತರ ಅದನ್ನು ತೆರೆದು ನೋಡಿದಾಗ ಹಿಟ್ಟಿನ ಜೊತೆಗೆ 15,000 ಹಣ ಇಟ್ಟುಕಳುಹಿಸಿದ್ದಾರೆ. ಬಡವರಿಗೆ, ಹಣದ ಅವಶ್ಯಕತೆ ಇರುವವರಿಗೆ ಉಪಯೋಗವಾಗಲಿ ಎಂದು ಆಮೀರ್ ಖಾನ್ ಹೀಗೆ ಮಾಡಿದ್ದಾರೆ" ಎಂದು ವಿಡಿಯೋ ಮಾಡಿ ಹರಿಬಿಡಲಾಗಿದೆ.

ವಿಡಿಯೋ ಡಿಲೀಟ್ ಆಗಿದೆ

ವಿಡಿಯೋ ಡಿಲೀಟ್ ಆಗಿದೆ

ಜನರು ಮೊದಲು ಹಿಟ್ಟಿನ ಬ್ಯಾಗ್ ತೆಗೆದುಕೊಳ್ಳುಲು ನಿರಾಕರಿಸಿದರು. 1 ಕಿಲೋ ಹಿಟ್ಟು ಕುಟುಂಬ ನಿರ್ವಹಣೆಗೆ ಸಾಕಾಗಲ್ಲ ಎಂದು ಮೊದಲ ಹಿಟ್ಟಿನ ಚೀಲ ತೆಗೆದುಕೊಂಡಿಲ್ಲ. ಆ ನಂತರ ಹಣವಿರುವ ವಿಚಾರ ಗೊತ್ತಾಗಿ ಎಲ್ಲರೂ ಹಿಟ್ಟಿನ ಬ್ಯಾಗ್ ತೆಗೆದುಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೀಗ ಈ ವಿಡಿಯೋ ಡಿಲೀಟ್ ಆಗಿದೆ.

ಸ್ಪಷ್ಟನೆ ನೀಡಿದ ಆಮೀರ್ ಖಾನ್

ಸ್ಪಷ್ಟನೆ ನೀಡಿದ ಆಮೀರ್ ಖಾನ್

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಆಮೀರ್ ಖಾನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಆಮೀರ್ ಇದರಲ್ಲಿ ಯಾವುದೆ ಸತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಮೀರ್ ಖಾನು "ನಾನು ಗೋಧಿ ಚೀಲಗಳಲ್ಲಿ ಹಣವನ್ನು ಹಾಕುವ ವ್ಯಕ್ತಿಯಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ರಾಬಿನ್ ಹುಡ್ ತನ್ನನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಸುರಕ್ಷಿತವಾಗಿರಿ" ಎಂದು ಹೇಳಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್

ಆಮೀನ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹಾಲಿವುಡ್ ಸಿನಿಮಾದ ರಿಮೇಕ್ ಇದಾಗಿದ್ದು, ಕರೀನಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.

More from Filmibeat

English summary
Rumors spreading about Bollywood Actor Aamir Khan putting money in wheat bag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X