For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟಿಯ ತಂಗಿಯೊಡನೆ, ಶಾರುಖ್ ಖಾನ್ ಮಗನ ಲವ್ವಿ-ಡವ್ವಿ!?

  |

  ಡ್ರಗ್ಸ್ ಪ್ರಕರಣದಿಂದಾಗಿ ಕಳೆದ ವರ್ಷಾಂತ್ಯದಲ್ಲಿ ಭಾರಿ ಸುದ್ದಿಯಲ್ಲಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಬೇರೆಯದ್ದೇ ಕಾರಣಕ್ಕೆ.

  ಡ್ರಗ್ಸ್ ಪ್ರಕರಣದಿಂದ ಬಹುತೇಕ ಹೊರ ಬಂದಿರುವ ಆರ್ಯನ್ ಖಾನ್ ಇದೀಗ ಕೆಲ ತಿಂಗಳಿನಿಂದ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಸಾರ್ವಜನಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಭೆ-ಸಮಾರಂಭಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ.

  ಇದೀಗ ಆರ್ಯನ್ ಖಾನ್ ಮತ್ತೆ ಸುದ್ದಿಗೆ ಬಂದಿರುವುದು ಡೇಟಿಂಗ್ ಕಾರಣಕ್ಕೆ. ಆರ್ಯನ್ ಖಾನ್, ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ಸಹೋದರಿಯ ಜೊತೆ ಡೇಟಿಂಗ್ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಟಿಯ ಸಹೋದರಿಯೊಟ್ಟಿಗಿನ ಆರ್ಯನ್ ಖಾನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ನಟಿ ಶ್ರುತಿ ಚೌಹಾಣ್ ಹುಟ್ಟುಹಬ್ಬದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಹುಟ್ಟುಹಬ್ಬದ ಸಮಾರಂಭದಲ್ಲಿ ಆರ್ಯನ್ ಖಾನ್, ಕಿರುತೆರೆ ನಟ ಕರಣ್ ಟಕ್ಕರ್ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ನಟಿ ಕತ್ರಿನಾ ಕೈಫ್ ಕಿರಿಯ ಸಹೋದರಿ ಇಸಾಬೆಲ್ಲ ಕೈಫ್ ಸಹ ಭಾಗಿಯಾಗಿದ್ದರು.

  ಆರ್ಯನ್ ಖಾನ್ ಹಾಗೂ ಇಸಾಬೆಲ್ಲ ಕೈಫ್ ಪರಸ್ಪರ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗ ಚಿತ್ರಗಳು ಹರಿದಾಡುತ್ತಿದ್ದು, ಅನುಮಾನಗಳಿಗೆ ಪುಷ್ಠಿ ನೀಡುತ್ತಿವೆ. ಆದರೆ ಆರ್ಯನ್ ಖಾನ್ ಹಾಗೂ ಇಸಾಬೆಲ್ ಕತೆ ಕೇವಲ ವದಂತಿಗಳಷ್ಟೆ ಎನ್ನಲಾಗುತ್ತಿದೆ. ಆರ್ಯನ್‌ಗೆ ಬೇರೊಬ್ಬ ಸ್ಟಾರ್ ನಟನ ಪುತ್ರಿಯೊಟ್ಟಿಗೆ ಪ್ರೀತಿ ಇದೆ ಎಂಬ ಮಾತುಗಳೂ ಇವೆ.

  ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಆರ್ಯನ್ ಖಾನ್ ಅನ್ನು ಎನ್‌ಸಿಬಿ ಬಂಧಿಸಿತ್ತು. ಆದರೆ ಆ ಬಳಿಕ ಎನ್‌ಸಿಬಿ ನಿಯಮ ಉಲ್ಲಂಘಿಸಿ ಆರ್ಯನ್ ಅನ್ನು ಬಂಧಿಸಿರುವುದು ಎನ್‌ಸಿಬಿಯ ಒಳತನಿಖೆಯಿಂದ ಬಹಿರಂಗಗೊಂಡಿತ್ತು. ಕೊನೆಗೆ ಎನ್‌ಸಿಬಿಯೇ ಚಾರ್ಜ್‌ಶೀಟ್‌ನಿಂದ ಆರ್ಯನ್ ಖಾನ್ ಹೆಸರು ಕೈಬಿಟ್ಟಿತು.

  ಆರ್ಯನ್ ಖಾನ್ ಇದೀಗ ವೆಬ್ ಸರಣಿಯೊಂದನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಅಮೆಜಾನ್‌ ಜೊತೆ ಈ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.

  English summary
  Rumors spreading in Bollywood that Shah Rukh Khan's son Aryan Khan dating Katrina Kaif's sister Isabelle Kaif. Both participated in actress Shruti Chauhan's birthday.
  Thursday, September 1, 2022, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X