»   » ದೀಪಿಕಾಗೆ ಹತ್ತಿರವಾಗಲು ರಣವೀರ್ ಬಹುದೊಡ್ಡ ಪ್ಲಾನ್! ಏನದು?

ದೀಪಿಕಾಗೆ ಹತ್ತಿರವಾಗಲು ರಣವೀರ್ ಬಹುದೊಡ್ಡ ಪ್ಲಾನ್! ಏನದು?

Posted By:
Subscribe to Filmibeat Kannada

ಹಾಟ್ ಬಾಯ್ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಇಬ್ಬರೂ ಲವ್ ಬರ್ಡ್ಸ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಇಬ್ಬರ ಬಗ್ಗೆ ಲೇಟೆಸ್ಟ್ ಸುದ್ದಿ ಏನಂದ್ರೆ ರಣವೀರ್ ದೀಪಿಕಾಗೆ ಹೆಚ್ಚು ಹತ್ತಿರವಾಗಿರಲು ಈಗ ಬಹುದೊಡ್ಡ ಪ್ಲಾನ್ ಮಾಡಿದ್ದರಂತೆ.

ಅದೇನಂದ್ರೆ ರಣವೀರ್ ಮುಂಬೈನಲ್ಲಿ ದೊಡ್ಡ ಮನೆಯೊಂದನ್ನು ಖರೀದಿಸಲು ಸ್ಕೆಚ್ ಹಾಕಿದ್ದು, ಅದೂ ದೀಪಿಕಾಗೆ ಹತ್ತಿರವಾಗುವ ಉದ್ದೇಶದಿಂದ ಎಂಬ ರೂಮರ್ಸ್ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದು ಪಕ್ಕಾ ದೀಪಿಕಾಗೆ ಕ್ಲೋಸ್ ಆಗಲು ಮಾಡಿರುವ ಪ್ಲಾನ್. ಆದರೆ ರಣವೀರ್ ಈ ಬಗ್ಗೆ ಇನ್ನೂ ಕನ್ಫರ್ಮ್ ನೀಡಿಲ್ಲ ಎನ್ನುತ್ತಿವೆ ವರದಿಗಳು. ಮುಂದೆ ಓದಿರಿ..

ರಣವೀರ್-ದೀಪಿಕಾ

ರಣವೀರ್ ಸಿಂಗ್ ತಮ್ಮ ಪ್ರಿಯತಮೆ ದೀಪಿಕಾ ಪಡುಕೋಣೆಗೆ ತುಂಬಾ ಹತ್ತಿರವಾಗಿ ಅಕ್ಕಪಕ್ಕದಲ್ಲಿ ಇರಲು ಬಯಸಿದ್ದಾರಂತೆ.

ಮನೆಗಾಗಿ ಹುಡುಕಾಟ

ಡಿಪ್ಪಿ ವಾಸವಿರುವ ನೆರೆಹೊರೆಯ ಸ್ಥಳದಲ್ಲಿ ಇರಲು ರಣವೀರ್ ಆಕೆ ಇರುವ ಪ್ರಭಾದೇವಿ ಅಪಾರ್ಟ್‌ಮೆಂಟ್ ನಲ್ಲಿಯೇ ಹೊಸ ಮನೆ ಖರೀದಿಸಲು ಹುಡುಕಾಟ ನಡೆಸಿದ್ದಾರಂತೆ.

ಪ್ರಭಾದೇವಿ ಅಪಾರ್ಟ್‌ಮೆಂಟ್

ಅಂದಹಾಗೆ ದೀಪಿಕಾ ಮುಂಬೈ ನಲ್ಲಿನ ಪ್ರಭಾದೇವಿ ಅಪಾರ್ಟ್‌ಮೆಂಟ್ ನಲ್ಲಿ ತಮ್ಮ ಕುಟುಂಬದವರೊಂದಿಗೆ 26ನೇ ಫ್ಲೋರ್ ನಲ್ಲಿ ವಾಸವಿದ್ದಾರೆ.

ಡಿಪ್ಪಿ ವಾಸದ ಮನೆ ಬೆಲೆ ಎಷ್ಟು ಗೊತ್ತೇ?

ಡಿಪ್ಪಿ ಪ್ರಭಾದೇವಿ ಅಪಾರ್ಟ್‌ಮೆಂಟ್ ನಲ್ಲಿ 2,776 ಸ್ಕ್ವೇರ್ ಫೀಟ್ ಮನೆಯಲ್ಲಿ ವಾಸವಿದ್ದಾರೆ. ಈ ಬಹುದೊಡ್ಡ ಮನೆ ಖರೀದಿಸಲು 16 ಕೋಟಿ ರೂ ಕೊಟ್ಟಿದ್ದಾರೆ.

ರಣವೀರ್ ದೀಪಿಕಾಗೆ ಹತ್ತಿರವಾಗೋದು ಪಕ್ಕಾನಾ?

ರಣವೀರ್ ಮುಂಬೈನಲ್ಲಿ ಮನೆ ಖರೀದಿಸುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ಆದರೆ ದೀಪಿಕಾಗೆ ಹತ್ತಿರವಾಗಲು ಪ್ರಭಾದೇವಿ ಅಪಾರ್ಟ್‌ಮೆಂಟ್ ನಲ್ಲಿಯೇ ಮನೆ ಖರೀದಿಸುತ್ತಾರಾ, ಅವರ ಅಕ್ಕಪಕ್ಕದ ಮನೆಯಲ್ಲಿಯೇ ಉಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Rumoured couple Ranveer Singh and Deepika Padukone might just be ready to take their relationship to the next level. Contrary to reports stating that the two were moving in together, the latest buzz is that the two will soon be neighbours.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada