ಹುಟ್ಟುಹಬ್ಬದ ದಿನವೇ ಪ್ರಭಾಸ್ ಚಿತ್ರದ ಮೇಲೆ ಕೇಳಿ ಬಂದ ಆರೋಪವಿದು!
ಟಾಲಿವುಡ್ ನಟ 'ಬಾಹುಬಲಿ' ಪ್ರಭಾಸ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಅವರ ಈ ವರ್ಷದ ಹುಟ್ಟುಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡುವುದಕ್ಕೆ 'ಸಾಹೋ' ಚಿತ್ರದ ಫಸ್ಟ್ ಲುಕ್ ಕೂಡ ಇಂದು ರಿಲೀಸ್ ಆಗಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿರುವ 'ಸಾಹೋ' ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈಗ ಇದೇ ಪೋಸ್ಟರ್ 'ಕಾಪಿ' ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ಸದ್ಯ ರಿಲೀಸ್ ಆದ 'ಸಾಹೋ' ಪೋಸ್ಟರ್ ಇಂಗ್ಲೀಷ್ ಭಾಷೆಯ 'ಬ್ಲೇಡ್ ರನ್ನರ್: 2049' ಚಿತ್ರದ ಪೋಸ್ಟರ್ ರೀತಿಯೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಎರಡೂ ಚಿತ್ರಗಳ ಪೋಸ್ಟರ್ ವೈರಲ್ ಆಗಿದೆ.

ಅಂದಹಾಗೆ, 'ಸಾಹೋ' ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಮೂಲಕ ಟಾಲಿವುಡ್ ಸ್ಟಾರ್ ಪ್ರಭಾಸ್ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸುಜೀತ್ ರೆಡ್ಡಿ ನಿರ್ದೇಶನದ ಈ ಚಿತ್ರ 2018ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.
More from Filmibeat
English summary
Prabhas starrer 'Saaho' movie first look released.


Click it and Unblock the Notifications











