For Quick Alerts
  ALLOW NOTIFICATIONS  
  For Daily Alerts

  'ಸಾಂಡ್ ಕೀ ಆಂಖ್' ಸಿನಿಮಾಕ್ಕೆ ಪ್ರೇರಣೆ ಅಜ್ಜಿ ಚಂದ್ರೊ ತೋಮರ್ ಸಾವು

  |

  ಕೆಲವು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ 'ಸಾಂಡ್ ಕಿ ಆಂಖ್'ಗೆ ಪ್ರೇರಕರಾಗಿದ್ದ ಅಜ್ಜಿ ಚಂದ್ರೊ ತೋಮರ್ ಕೋವಿಡ್‌ನಿಂದಾಗಿ ಬಲಿಯಾಗಿದ್ದಾರೆ.

  ಚಂದ್ರೊ ತೋಮರ್ ಅವರು ರಾಷ್ಟ್ರಮಟ್ಟದ ಶೂಟರ್ ಆಗಿದ್ದರು, ತಮ್ಮ 60ನೇ ವರ್ಷ ವಯಸ್ಸಿನಲ್ಲಿ ಶೂಟಿಂಗ್ ಕಲಿತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿದ್ದರು. ಪ್ರಕಾಶಿ ತೋಮರ್ ಸಹ ಚಂದ್ರೊ ತೋಮರ್ ಜೊತೆಗೆ ಭಾರತದ ಹಿರಿಯ ಶೂಟರ್ ಆಗಿ ಹೆಸರು ಮಾಡಿದ್ದಾರೆ. ಇಬ್ಬರೂ ಒಂದೇ ಊರಿನ ಸಹೋದರಿಯರು.

  ನಟಿ ತಾಪ್ಸಿ ಪನ್ನು ಹಾಗೂ ಭೂಮಿ ಪಡ್ನೇಕರ್ ಅವರು ಚಂದ್ರೊ ತೋಮರ್, ಪ್ರಕಾಶಿ ತೋಮರ್ ಅವರ ಪಾತ್ರದಲ್ಲಿ ನಟಿಸಿದ್ದ 'ಸಾಂಡ್ ಕಿ ಆಂಖ್' ಸಿನಿಮಾ 2019 ರಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಸಿನಿಮಾವನ್ನು ತುಷಾರ್ ಹೀರಾನಂದಾನಿ ನಿರ್ದೇಶನ ಮಾಡಿದ್ದರು. ಅನುರಾಗ್ ಕಶ್ಯಪ್ ನಿರ್ಮಾಣ ಮಾಡಿದ್ದರು. ಚಂದ್ರೊ ತೋಮರ್, ಪ್ರಕಾಶಿ ತೋಮರ್ ಅವರ ಜೀವನ ಹಾಗೂ ಸಾಧನೆಯನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು.

  ಚಂದ್ರೊ ತೋಮರ್ ಅಗಲಿಕೆಗೆ ಟ್ವೀಟ್ ಮಾಡಿರುವ ತಾಪ್ಸಿ ಪನ್ನು, 'ನನ್ನ ಪ್ರೀತಿಯ ರಾಕ್‌ಸ್ಟಾರ್ ಆತ್ಮಕ್ಕೆ ಶಾಂತಿ ಸಿಗಲಿ. ನೀವು ನೀಡಿದ ಸ್ಪೂರ್ತಿ ಹೆಣ್ಣುಮಕ್ಕಳ ಹೃದಯದಲ್ಲಿ ಬೆಚ್ಚಗೆ ಇರಲಿದೆ. ಅವರ ಸಾಧನೆಗೆ ಕಾರಣವಾಗಲಿದೆ' ಎಂದಿದ್ದಾರೆ.

  ಭೂಮಿ ಪಡ್ನೇಕರ್ ಸಹ ಟ್ವೀಟ್ ಮಾಡಿದ್ದು, 'ನಿಮ್ಮ ಜೀವನ ನಮಗೆ ದೊಡ್ಡ ಪಾಠವಾಗಿ ಸದಾ ಕಾಲ ಇರಲಿದೆ' ಎಂದಿದ್ದಾರೆ. ಹಲವಾರು ಬಾಲಿವುಡ್‌ ಸೆಲೆಬ್ರಿಟಿಗಳು ಚಂದ್ರೊ ತೋಮರ್ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ. ನಟಿ ಕಂಗನಾ ರಣೌತ್‌ ಸಹ ಚಂದ್ರೊ ತೋಮರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  ಕಿತ್ತಾಡೋದು ಬಿಟ್ಟು ಜನರ ಜೀವ ಉಳಿಸಿ ಸರ್ಕಾರಕ್ಕೆ ಇದು ದೊಡ್ಡ ಕೆಲಸ ಅಲ್ಲ | Filmibeat Kannada

  ಚಂದ್ರೋ ತೋಮರ್‌ರ ಸಹೋದರಿಯೂ ಆಗಿದ್ದ ಹಿರಿಯ ಶೂಟರ್ ಪ್ರಕಾಶಿ ತೋಮರ್ ಸಹ ಟ್ವೀಟ್ ಮಾಡಿದ್ದು, 'ನನ್ನ ಜೊತೆ ಯಾರೂ ಇಲ್ಲವಾಗಿದೆ. ಚಂದ್ರೊ ಎಲ್ಲಿ ಹೋಗಿಬಿಟ್ಟೆ' ಎಂದು ಟ್ವೀಟ್ ಮಾಡಿದ್ದಾರೆ.

  English summary
  Saand ki Aankh movie inspiration Chandro Tomar died of coronavirus. Taapsee Pannu, Bhumi Pednekar and many celebs express condolence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X