ಪಾಕಿಸ್ತಾನಿ ಗೆಳೆಯನ ಜೊತೆ ಮದುವೆಯನ್ನು ಕೊನೆ ಹಂತದಲ್ಲಿ ರದ್ದು ಮಾಡಿದ ನಟಿ
ಬಾಲಿವುಡ್ ಸಿನಿಮಾದಲ್ಲಿ ನಟಿಸಿರುವ ಸಬಾ ಖಮರ್ ಧೈರ್ಯಶಾಲಿ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಆಗಬೇಕಿದ್ದ ತಮ್ಮ ಮದುವೆಯನ್ನು ಅವರು ರದ್ದು ಮಾಡಿದ್ದಾರೆ.
ಸಬಾ ಖಮರ್ ಅವರ ಮದುವೆ ಪಾಕಿಸ್ತಾನ ಮೂಲದ ಆಸ್ಟ್ರೇಲಿಯಾ ನಿವಾಸಿ ಅಜೀಮ್ ಖಾನ್ ಜೊತೆಗೆ ಆಗುವುದರಲ್ಲಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗುತ್ತದೆ ಎನ್ನಲಾಗಿತ್ತು, ಆದರೆ ಅಂತಿಮ ಹಂತದಲ್ಲಿ ಮದುವೆಯನ್ನು ರದ್ದು ಮಾಡಿದ್ದಾರೆ ಸಬಾ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಸಬಾ, 'ನಾನು ಅಜೀಮ್ ಖಾನ್ ಜೊತೆ ವಿವಾಹವಾಗುತ್ತಿಲ್ಲ. ನನ್ನ ಈ ನಿರ್ಧಾರವನ್ನು ನೀವು (ಅಭಿಮಾನಿಗಳು) ಬೆಂಬಲಿಸುತ್ತೀರಿ ಎಂದು ಭಾವಿಸಿದ್ದೇನೆ. ತಡವಾದರೂ ಸರಿ ಕಹಿಯಾದ ಸತ್ಯವನ್ನು ತಿಳಿದುಕೊಳ್ಳುವುದು ಅವಶ್ಯಕ' ಎಂದು ನಟಿ ಬರೆದಿದ್ದಾರೆ.

ಮುಂದುವರೆದು, 'ಈ ವರೆಗೆ ನಾನು, ಅಜೀಮ್ ಖಾನ್ ಅನ್ನು ಒಮ್ಮೆಯೂ ಭೇಟಿಯಾಗಿಲ್ಲ. ಕೇವಲ ಫೊನಿನಲ್ಲಿ ಅಷ್ಟೆ ನಾವು ಸಂಪರ್ಕದಲ್ಲಿದ್ದೆವು. ಇದು ನನಗೆ ಬಹಳ ಕಷ್ಟದ ಸಮಯ ಆದರೆ ಈ ಕೆಟ್ಟ ಸಮಯವೂ ಕಳೆದು ಹೋಗುತ್ತದೆ ಎಂದು ನಂಬಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಸಬಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಅಜೀಜ್ ಖಾನ್, 'ಹೌದು, ಬ್ರೇಕ್ ಅಪ್ ಆಗಿರುವುದನ್ನು ಅಂಗೀಕರಿಸುತ್ತೇನೆ ಮತ್ತು ಇದರ ಹೊಣೆಗಾರಿಕೆಯನ್ನು ಹೊರುತ್ತೇನೆ' ಎಂದಿದ್ದಾರೆ.
ಮುಂದುವರೆದು, 'ಸಬಾ, ನೀವೊಬ್ಬರು ಅದ್ಭುತವಾದ ವ್ಯಕ್ತಿ. ನಿಮಗೆ ದೇವರು ಎಲ್ಲ ಸಂತೋಷ, ಸುಖಗಳನ್ನು ನೀಡಲಿ. ಕಷ್ಟದ ಹಾದಿಯಲ್ಲಿ ನಡೆದವರು ಸುಂದರವಾದ ಗುರಿಗಳನ್ನು ಮುಟ್ಟುತ್ತಾರೆ' ಎಂದು ಹೇಳಿದ್ದಾರೆ.
Recommended Video
ಸಬಾ ಅವರು ಬಾಲಿವುಡ್‌ನ 'ಹಿಂದಿ ಮೀಡಿಯಮ್' ಸಿನಿಮಾದಲ್ಲಿ ನಟಿಸಿದ್ದರು. ಕೆಲವು ಪಾಕಿಸ್ತಾನಿ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು ಸಬಾ.


Click it and Unblock the Notifications











