ಬಾಲಿವುಡ್ ಪ್ರವೇಶಿಸಲು ತಯಾರಾದ ಸಚಿನ್ ಪುತ್ರಿ ಸಾರಾ

ವಿಶ್ವ ಕಂಡ ಅಪ್ರತಿಮ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಈಗ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕುಟುಂಬ, ಗೆಳೆಯರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಸಹ ಕ್ರಿಕೆಟ್‌ ಆಟಗಾರರಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿದ್ದಾರೆ. ಬೌಲರ್ ಆಗಿರುವ ಅರ್ಜುನ್‌ಗೆ ಈವರೆಗೆ ಯಾವುದೇ ಐಪಿಎಲ್ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ.

ಅರ್ಜುನ್ ತೆಂಡೂಲ್ಕರ್ ಅಪ್ಪನ ಹಾದಿ ಹಿಡಿದರೆ ಸಚಿನ್‌ ಮಗಳು ಸಾರಾ ತೆಂಡೂಲ್ಕರ್ ಅಮ್ಮನ ಹಾದಿ ಹಿಡಿದಿದ್ದರು. ಲಂಡನ್‌ನಲ್ಲಿ ಮೆಡಿಸಿನ್‌ ಪದವಿ ಪಡೆದಿರುವ ಸಾರಾ ಬುದ್ಧಿವಂತೆ. ಆದರೆ ತಮ್ಮ ಪದವಿಗೆ ಸಂಬಂಧಿಸಿದ ಉದ್ಯೋಗ ಮಾಡದೆ, ಕೆಲ ತಿಂಗಳ ಹಿಂದೆ ಬ್ರ್ಯಾಂಡ್ ಒಂದಕ್ಕೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಹೆಚ್ಚಾಗಿ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಬಂದಿರುವ ಸುದ್ದಿಯಂತೆ ಸಾರಾ ತೆಂಡೂಲ್ಕರ್ ಸಿನಿಮಾಗಳಲ್ಲಿ ನಟಿಸಲಿದ್ದಾರಂತೆ.

Sachin Tendulkars Daughter Anjali Tendulkar Will Make Her Bollywood Debut Soon

ಸಾರಾ ತೆಂಡೂಲ್ಕರ್ ನಟನಾ ತರಬೇತಿ ಪಡೆಯುತ್ತಿದ್ದು, ಸಿನಿಮಾಗಳಲ್ಲಿ ಅದೃಷ್ಟ ಹುಡುಕಲು ಸಾರಾ ನಿಶ್ಚಯಿಸಿದ್ದಾರೆ. ಸಾರಾಳ ನಿರ್ಣಯಕ್ಕೆ ತಂದೆ ಸಚಿನ್, ತಾಯಿ ಅಂಜಲಿಯ ಒಪ್ಪಿಗೆ ಇದೆಯಂತೆ. ಸಾರಾಳ ತರಬೇತಿಯನ್ನು ತಾಯಿ ಅಂಜಲಿಯೇ ಸೂಪರ್‌ವೈಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸಾರಾ ತೆಂಡೂಲ್ಕರ್‌ಗೆ ಈ ಹಿಂದೆ ಬಾಲಿವುಡ್‌ನಿಂದ ಸಾಕಷ್ಟು ಅವಕಾಶಗಳು ಬಂದಿದ್ದವು ಆದರೆ ತಾಯಿ ಅಂಜಲಿ ಅವನ್ನು ಬೇಡವೆಂದಿದ್ದರು. ಮಗಳು ಇನ್ನಷ್ಟು ದೊಡ್ಡವಳಾದ ಬಳಿಕ ಸಿನಿಮಾ ರಂಗ ಪ್ರವೇಶಿಸಲಿ ಎಂಬುದು ಅಂಜಲಿಯ ಆಸೆಯಾಗಿತ್ತಂತೆ.

ಇನ್‌ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್ ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ. ಈಗ ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಲಿದ್ದಾರೆ.

More from Filmibeat

English summary
Sachin Tendulkar's daughter Sara Tendulkar will make her Bollywood debut soon. She taking acting classes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X