22 ವರ್ಷದ ಚೆಲುವೆ, 48 ವರ್ಷದ ಮುಸ್ಲಿಂ ನಟ, ಮದುವೆ ಮತ್ತು ಮತಾಂತರ..!
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಆದರೆ ಈಗೀಗ ಪ್ರೀತಿಯ ಹೆಸರಿನಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಸಾಹಿಲ್ ಖಾನ್ ಪತ್ನಿ ಸದ್ಯದ ಉದಾಹರಣೆ.
ಹೌದು, ಸಾಹಿಲ್ ಖಾನ್, ಒಂದ್ಕಾಲದ ಬಾಲಿವುಡ್ ಸ್ಟಾರ್. 'ಸ್ಟೈಲ್' ಮತ್ತು 'ಎಕ್ಸ್ ಕ್ಯೂಸ್ ಮಿ' ಚಿತ್ರಗಳ ಮೂಲಕ ಆ ಕಾಲದಲ್ಲಿ ಸಖತ್ ಹವಾ ಸೃಷ್ಟಿಸಿದವರು ಇವರು. ತಮ್ಮ ಹುರಿಗೊಳಿಸಿದ ದೇಹದಿಂದನೇ ಅಸಂಖ್ಯಾತ ಹೆಣ್ಣು ಮಕ್ಕಳ ನೆಚ್ಚಿನ ಸ್ಟಾರ್ ಆಗಿದ್ದ ಸಾಹಿಲ್ ಖಾನ್ ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ತನಗಿಂತ 26 ವರ್ಷ ಚಿಕ್ಕವಳಾದ ಯುರೋಪ್‌ನ ಬೆಲಾರಸ್ ಮೂಲದ ಮಿಲೆನಾ ಅಲೆಕ್ಸಾಂಡ್ರಾ ಅವರ ಜೊತೆ ಎರಡನೇ ಮದುವೆಯಾಗಿದ್ದರು. ತಮ್ಮ ಹನಿಮೂನ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಲ್‌ಚಲ್ ಎಬ್ಬಿಸಿದ್ದರು.

ಸಾಹಿಲ್ ಖಾನ್ ಅವರ ಈ ಮಧುಚಂದ್ರದ ಫೋಟೋಗಳನ್ನು ನೋಡಿ ಅನೇಕರು ಸದ್ಯಕ್ಕೆ ತರಹೇವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲ ಈ ವಯಸ್ಸಿನಲ್ಲಿ ಬೇಕಿತ್ತಾ ಎಂಬ ಪ್ರಶ್ನೆಯನ್ನ ಕೂಡ ಅನೇಕರು ಕೇಳಿದ್ದರು. ಇನ್ನೂ ತಮ್ಮ ನಡುವೆ ವಯಸ್ಸಿನ ಅಂತರ ತುಂಬಾ ಇದೆ ಎನ್ನುವುದನ್ನ ಒಪ್ಪಿಕೊಂಡಿದ್ದ ಸಾಹಿಲ್ ಖಾನ್, ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರು. ಆಕೆಯ ವಯಸ್ಸು 21 ವರ್ಷವಾದರೂ ಅವಳಿಗೆ ಅತಿಯಾದ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆ ಇದೆ. ನಮ್ಮ ವಯಸ್ಸಿನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅವಳು ಇತರ 21 ವರ್ಷ ವಯಸ್ಸಿನವರಿಗಿಂತ ಮಾನಸಿಕವಾಗಿ ಹೆಚ್ಚು ಪ್ರಬುದ್ಧಳಾಗಿದ್ದಾಳೆ ಮತ್ತು ಸ್ವಭಾವತಃ ತುಂಬಾ ಶಾಂತವಾಗಿದ್ದಾಳೆ ಎಂದಿದ್ದರು ಸಾಹಿಲ್ ಖಾನ್.
ಇಂಥಾ ಸಾಹಿಲ್ ಖಾನ್ ಈಗ ಮದುವೆಯಾಗಿ ಒಂದು ವರ್ಷದ ನಂತರ ಮಿಲೆನಾ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹೆಮ್ಮೆಯಿಂದ ಘೋಷಣೆಯನ್ನು ಮಾಡಿದ್ದಾರೆ. ನನ್ನ ಪತ್ನಿ ಮಿಲೇನಾ ಅಲೆಕ್ಸಾಂಡ್ರಾ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ತೀರ್ಮಾನ ಮಾಡಿದ್ದಾಳೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿರುವ ಸಾಹಿಲ್ ನಮ್ಮನ್ನು ಅಲ್ಲಾಹ್ ಕ್ಷಮಿಸಲಿ ನಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಲಿ ಎಂದು ಹೇಳಿದ್ದಾರೆ.
ಸದ್ಯಕ್ಕೆ ಸಾಹಿಲ್ ಖಾನ್ ಅವರ ಈ ಸಾಲುಗಳು ಅನೇಕರ ಅಸಮಾಧಾನಕ್ಕೆ ಕಾರಣವಾಗಿವೆ. ಹೀಗಾಗಿಯೇ ಸಾಹಿಲ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಅನೇಕರು ಆಕೆ ನಿನ್ನನ್ನು ಪ್ರೀತಿಸಿದ್ದರೆ ಇಸ್ಲಾಂ ಧರ್ಮ ಸ್ವೀಕರಿಸುವುದು ಅವಳಿಗೆ ಯಾಕೆ ಮುಖ್ಯವಾಯ್ತು ಎಂದು ಪ್ರಶ್ನೆ ಕೇಳಿದ್ದಾರೆ. ನೀವು ಆಕೆಯನ್ನು ನಿಜಕ್ಕೂ ಪ್ರೀತಿಸುತ್ತಿದ್ದರೆ ನೀವ್ಯಾಕೇ ಕ್ರಿಶ್ವಿಯನ್ ಧರ್ಮವನ್ನು ಸ್ವೀಕರಿಸಲಿಲ್ಲ ಎಂದು ಕೇಳಿದ್ದಾರೆ. ಮತಾಂತರ ಅಪರಾಧವಲ್ಲ ಆದರೆ ಇಸ್ಲಾಂ ಧರ್ಮವನ್ನು ಅಧ್ಯಯನ ಮಾಡದೆ ಸ್ವೀಕರಿಸುವುದರಿಂದ ಏನು ಪ್ರಯೋಜನ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದರೆ ನಿಮ್ಮ ಇಬ್ಬರ ನಡುವೆ ಬಾಂಧವ್ಯ ಗಟ್ಟಿ ಇದ್ದರೆ ಮಂತಾತರಗೊಳ್ಳುವುದೇಕೆ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಮದುವೆಯಾದ ನಂತರ ಧರ್ಮವನ್ನು ಬದಲಿಸುವ ಅಗತ್ಯವಾದರು ಏನಿದೆ ಎಂದು ಪ್ರಶ್ನಿಸಿದ್ದಾರೆ. ನಿಮ್ಮದು ನಿಜವಾದ ಪ್ರೀತಿಯಾಗಿದ್ದರೆ ಅವಳನ್ನು ಅವಳ ಧರ್ಮವನ್ನು ಬದಲಿಸಲು ನೀವು ಬಿಡುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಮಿಕ್ಕಂತೆ ಸಾಹಿಲ್ ಖಾನ್ ಬಗ್ಗೆ ಹೇಳಬೇಕೆಂದರೆ 2001 ರಲ್ಲಿ 'ಸ್ಟೈಲ್' ಚಿತ್ರದ ಮೂಲಕ ಸಾಹಿಲ್ ಖಾನ್ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದರು. ಆ ನಂತರ ಬಂದ ಎಕ್ಸ್ ಕ್ಯೂಸ್ ಮೀ ಇವರಿಗೆ ಸಿಕ್ಕಾಪಟ್ಟೆ ಹೆಸರನ್ನೂ ತಂದು ಕೊಟ್ಟಿತ್ತು. ಆದರೆ ದುರಾದೃಷ್ಟ ಬಾಲಿವುಡ್ ನಲ್ಲಿ ನೆಲೆ ನಿಲ್ಲುವ ಎಲ್ಲ ಅರ್ಹತೆ ಹೊಂದಿದ್ದರು, ಆ ನಂತರ ಚಿತ್ರರಂಗದಿಂದ ದೂರವಾದ ಸಾಹಿಲ್ ಖಾನ್ 2003 ರಲ್ಲಿ ನಿಗಾರ್ ಖಾನ್ ಅವರನ್ನು ವಿವಾಹವಾದರು 2005 ರಲ್ಲಿ ವಿಚ್ಛೇದನವನ್ನೂ ಪಡೆದಿದ್ದರು.


Click it and Unblock the Notifications











