ಎಕ್ಸ್‌ಕ್ಯೂಸ್ ಮಿ ; ಈ ಬಾಲಿವುಡ್ ಜೋಡಿಯ ನಡುವೆ ಇರುವ ವಯಸ್ಸಿನ ಅಂತರವೆಷ್ಟು ಗೊತ್ತಾ..?

ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ. ದೊಡ್ಡವರ ಈ ಮಾತನ್ನ ಹಿಂದಿ ಚಿತ್ರರಂಗದಲ್ಲಿ ಸದ್ಯಕ್ಕೆ ಅನೇಕರು ನೆನಪು ಮಾಡಿಕೊಳ್ತಿದ್ದಾರೆ. ಇದಕ್ಕೆ ಕಾರಣ ಸಾಹಿಲ್ ಖಾನ್

ಯಸ್, ಸಾಹಿಲ್ ಖಾನ್, ಒಂದ್ಕಾಲದ ಖ್ಯಾತ ನಟ. ಇವರ 'ಸ್ಟೈಲ್', 'ಎಕ್ಸ್ ಕ್ಯೂಸ್ ಮಿ' ಸಿನಿಮಾಗಳನ್ನ ಅಂದಕಾಲತ್ತಿಲ್ ನೋಡಿದವರ ಸಂಖ್ಯೆಯನ್ನ ಈಗ ಹೇಳಲು ಸಾಧ್ಯ ಇಲ್ಲ. ಆ ಕಾಲಕ್ಕೆ ಹೆಣೈಕ್ಳ ಹಾಟ್ ಫೇವರಿಟ್ ಆಗಿದ್ದ ಸಾಹಿಲ್ ಖಾನ್, ಸದ್ಯಕ್ಕೆ ಎರಡನೇ ಮದುವೆಯಾಗಿದ್ದಾರೆ. ಅದು ತನಕ್ಕಿಂತ 26 ವರ್ಷ ಕಿರಿಯ ಯುವತಿಯ ಜೊತೆ. ಸದ್ಯಕ್ಕೆ ಮುಂಬೈ ವಲಯದಲ್ಲಿ ಇದೇ ಬ್ರೇಕಿಂಗ್ ನ್ಯೂಸ್

 Sahil Khan on getting engaged to 21-year-old girlfriend Mile ..

47ರ ಪ್ರಾಯದಲ್ಲಿ 21ರ ಹರೆಯದ ಸುಂದರ ಯುವತಿಯನ್ನ ಸಾಹಿಲ್ ಖಾನ್ ಮದುವೆಯಾಗಿದ್ದಾರೆ. ತಮ್ಮ ಹನಿಮೂನ್ ಫೋಟೋಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಸಾಹಿಲ್ ಖಾನ್ ಅವರ ಈ ಮಧುಚಂದ್ರದ ಫೋಟೋಗಳನ್ನ ಸಾಮಾಜಿಕ ಜಾಲತಾಣದ ಸಹಾಯದಿಂದ ನೋಡಿರುವ ಅನೇಕರು ಸದ್ಯಕ್ಕೆ ಥರೇವಾರಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಹಜವಾಗಿ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಇದೆಲ್ಲ ಈ ವಯಸ್ಸಿನಲ್ಲಿ ಬೇಕಿತ್ತಾ ಎಂಬ ಪ್ರಶ್ನೆಯನ್ನ ಕೂಡ ಅನೇಕರು ಕೇಳ್ತಿದ್ದಾರೆ

ಇನ್ನೂ ತಮ್ಮ ನಡುವೆ ತುಂಬಾನೇ ಅಂತರ ಇದೆ ಅನ್ನುವುದನ್ನ ಒಪ್ಪಿಕೊಂಡಿರುವ ಸಾಹಿಲ್ ಖಾನ್, ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಆಕೆಯ ವಯಸ್ಸು 21 ವರ್ಷವಾದರೂ ಅವಳಿಗೆ ಅತಿಯಾದ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆ ಇದೆ. ನಮ್ಮ ವಯಸ್ಸಿನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅವಳು ಇತರ 21 ವರ್ಷ ವಯಸ್ಸಿನವರಿಗಿಂತ ಮಾನಸಿಕವಾಗಿ ಹೆಚ್ಚು ಪ್ರಬುದ್ಧಳಾಗಿದ್ದಾಳೆ ಮತ್ತು ಸ್ವಭಾವತಃ ತುಂಬಾ ಶಾಂತವಾಗಿದ್ದಾಳೆ ಎಂದಿದ್ದಾರೆ ಸಾಹಿಲ್ ಖಾನ್.

 Sahil Khan on getting engaged to 21-year-old girlfriend Mile ..

ಇಷ್ಟೇ ಅಲ್ಲ ನಾನು ಬೆಳಿಗ್ಗೆ ಎದ್ದು ಉತ್ತಮ ದಿನವನ್ನು ಕಳೆಯಲು ಬಯಸುತ್ತೇನೆ. ನಾನು ಸಂತೋಷವಾಗಿರಲು ಪ್ರಯತ್ನಿಸುತ್ತೇನೆ, ಎಲ್ಲರೂ ಶಾರುಖ್ ಖಾನ್ ಆಗಲು ಸಾಧ್ಯವಿಲ್ಲ. ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು.

ನನ್ನಲ್ಲಿ ಯಾವುದೇ ಕಹಿ ಇಲ್ಲ ಮತ್ತು ನನಗಿಂತ ಉತ್ತಮ ವ್ಯಕ್ತಿಗಳು ಇದ್ದಾರೆ ಎಂದು ನಾನು ನಂಬುತ್ತೇನೆ. ನಾನು ಏನು ಮಾಡಬಹುದು, ನಾನು ಮಾತ್ರ ಮಾಡಬಲ್ಲೆ, ನಾವೆಲ್ಲರೂ ನಮ್ಮದೇ ಆದ ಪರಿಣತಿಯನ್ನು ಹೊಂದಿದ್ದೇವೆ. ಇದು ಇಲ್ಲಿಯವರೆಗೆ ಆಸಕ್ತಿದಾಯಕ ಪ್ರಯಾಣವಾಗಿತ್ತು, ನಾನು ನನ್ನ ವ್ಯವಹಾರವನ್ನು ಇತ್ಯರ್ಥಪಡಿಸಿದೆ ಮತ್ತು ನನ್ನ ಹೆಂಡತಿಯನ್ನು ಸಹ ಕಂಡುಕೊಂಡೆ ಎಂದು ಕೂಡ ಸಾಹಿಲ್​ ಖಾನ್ ಹೇಳಿದ್ದಾರೆ.

 Sahil Khan on getting engaged to 21-year-old girlfriend Mile ..

ಮಿಕ್ಕಂತೆ ಸಾಹಿಲ್ ಖಾನ್ ಬಗ್ಗೆ ಹೇಳಬೇಕೆಂದರೆ 2001 ರಲ್ಲಿ 'ಸ್ಟೈಲ್' ಚಿತ್ರದ ಮೂಲಕ ಸಾಹಿಲ್ ಖಾನ್ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದರು. ಆ ನಂತರ ಬಂದ ಎಕ್ಸ್ ಕ್ಯೂಸ್ ಮೀ ಇವರಿಗೆ ಸಿಕ್ಕಾಪಟ್ಟೆ ಹೆಸರನ್ನೂ ತಂದು ಕೊಟ್ಟಿತ್ತು. ಆದರೆ ದುರಾದೃಷ್ಟ ಬಾಲಿವುಡ್ ನಲ್ಲಿ ನೆಲೆ ನಿಲ್ಲುವ ಎಲ್ಲ ಅರ್ಹತೆ ಹೊಂದಿದ್ದರು, ಆ ನಂತರ ಚಿತ್ರರಂಗದಿಂದ ದೂರವಾದ ಸಾಹಿಲ್ ಖಾನ್ 2003 ರಲ್ಲಿ ನಿಗಾರ್ ಖಾನ್ ಅವರನ್ನು ವಿವಾಹವಾದರು 2005 ರಲ್ಲಿ ವಿಚ್ಛೇದನವನ್ನೂ ಪಡೆದರು.

ಸದ್ಯಕ್ಕೆ ಸಾಹಿಲ್ ಖಾನ್ ತನಕ್ಕಿಂತ ಕಿರಿಯವಳಾದ ಮಿಲೆನಾ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲಿಯೇ ನಿಕಾಹ್ ಮಾಡಿಕೊಳ್ಳಲು ತುದಿಗಾಲಿನಲ್ಲಿಯೂ ನಿಂತಿದ್ದಾರೆ. ಇವರಿಬ್ಬರ ಮದುವೆಗೆ ಯಾರೆಲ್ಲ ಬರ್ತಾರೆ, ಮದುವೆ ನಡೆಯೋದು ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ

More from Filmibeat

English summary
Style And Excuse Me Fame Bollywood Actor Sahil Khan on getting engaged with 21-year-old girlfriend Milena
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X