Sai Pallavi: ತನ್ನ ಫೇವರಿಟ್ ಬಾಲಿವುಡ್ ನಟನ ಮಗನೊಟ್ಟಿಗೆ ಸಾಯಿ ಪಲ್ಲವಿ ರೊಮ್ಯಾನ್ಸ್

ಸಹಜ ಸುಂದರಿ ಸಾಯಿ ಪಲ್ಲವಿ ತಮ್ಮ ಅಭಿನಯದ ಮೂಲಕ ಸಿನಿರಸಿಕರಿಗೆ ಮೋಡಿ ಮಾಡಿದ್ದಾರೆ. ನಟನೆ ಜೊತೆಗೆ ತನ್ನ ಡ್ಯಾನ್ಸ್‌ನಿಂದಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕುಣಿದು ಲೈಮ್‌ಲೈಟ್‌ಗೆ ಬಂದ ಪಲ್ಲವಿ ಮುಂದೆ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಯಿಂದ ಸಾಯಿ ಪಲ್ಲವಿ ಸುದ್ದಿಯಾದರು. ಕಾಶ್ಮೀರ್ ಪಂಡಿತರ ನರಮೇಧದ ಕುರಿತು ಆಕೆಯ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಕೊನೆಗೆ ಅದಕ್ಕೆ ಆಕೆ ಸ್ಪಷ್ಟನೆಯನ್ನು ನೀಡಿದ್ದರು. ಇನ್ನು ಇದೆಲ್ಲದರ ನಡುವೆ ಇದ್ದಕ್ಕಿದಂತೆ ಆಕೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಯಿತು. ಆಕೆ ಚಿತ್ರರಂಗ ತೊರೆಯುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿ ಬಂತು. ಆದರೆ ಅದೆಲ್ಲ ಸುಳ್ಳು ಅನ್ನೋದು ಬಳಿಕ ಗೊತ್ತಾಯಿತು.

Sai Pallavi to make her Bollywood Debut opposite Aamir Khans son Junaid

ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಜೋಡಿಯಾಗಿ ಚಿತ್ರವೊಂದರಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಟೈಟಲ್ ಫೈನಲ್ ಆಗಿಲ್ಲ. ಇದೆಲ್ಲದರ ನಡುವೆ ಸಾಯಿ ಪಲ್ಲವಿ ಬಾಲಿವುಡ್ ಎಂಟ್ರಿ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಕಾಲಿವುಡ್ ಬೆಡಗಿ ತೆರೆ ಹಂಚಿಕೊಳ್ಳುತ್ತಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ.

ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಬಾಲಿವುಡ್ ಪ್ರವೇಶಿಸುವ ಬಗ್ಗೆ ಸಾಕಷ್ಟು ದಿನಗಳಿಂದ ಚರ್ಚೆ ಆಗುತ್ತಿದೆ. ಈಗಾಗಲೇ ಯಶ್‌ ರಾಜ್ ಫಿಲ್ಮ್ಸ್ ಬ್ಯಾನರ್ ಚಿತ್ರದಲ್ಲಿ ಜುನೈದ್ ನಟಿಸುತ್ತಿದ್ದಾರೆ. ಬಳಿಕ ಸುನಿಲ್ ಪಾಂಡೆ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದೇ ಚಿತ್ರದಲ್ಲಿ ಸೌತ್ ಬ್ಯೂಟಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ.

ಈಗಾಗಲೇ ಕೆಲ ಸಿನಿಮಾಗಳಿಗೆ ಜುನೈದ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ತಂದೆ ಹೆಸರು ಹೇಳದೇ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಬೇಕು ಎನ್ನುವ ಹಠ ತೊಟ್ಟಿದ್ದಾರೆ. ಹೀರೊ ಆಗೋಕೆ ಭರ್ಜರಿ ಸಿದ್ಧತೆ ಕೂಡ ನಡೆಸಿದ್ದಾರೆ. ಕಳೆದ ವರ್ಷ 'ವಿರಾಟ ಪರ್ವಂ' ಹಾಗೂ 'ಗಾರ್ಗಿ' ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಭಾರೀ ಕುತೂಹಲ ಮೂಡಿಸಿದೆ.

Sai Pallavi to make her Bollywood Debut opposite Aamir Khans son Junaid

ಆಮೀರ್ ಖಾನ್ ನಟನೆಯ 'ಲಾಲ್‌ ಚಡ್ಡಾ' ಚಿತ್ರದಲ್ಲಿ ನಾಗಚೈತನ್ಯ ನಟಿಸಿದ್ದರು. ಹಾಗಾಗಿ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ 'ಲವ್‌ ಸ್ಟೋರಿ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಆಮೀರ್ ಖಾನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಆಮೀರ್ ಖಾನ್‌ನ ನೋಡಿ ಸಾಯಿ ಪಲ್ಲವಿ ಎಕ್ಸೈಟ್ ಆಗಿದ್ದರು. ಆ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದರು. ಇದೀಗ ಆಕೆ ಆಮೀರ್ ಪುತ್ರನ ಜೊತೆಗೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ವಿಶೇಷ.

ತಮಿಳಿನ 'ಲವ್ ಟುಡೇ' ರೀಮೇಕ್‌ನಲ್ಲೂ ಜುನೈದ್ ಖಾನ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಚಿತ್ರದಲ್ಲಿ ಖುಷಿ ಕಪೂರ್ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಆ ವಿಚಾರ ಈಗ ಸೈಲೆಂಟ್ ಆಗಿದ್ದು ಜುನೈದ್ ಹಾಗೂ ಸಾಯಿ ಪಲ್ಲವಿ ಜೋಡಿಯ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಸೌತ್ ಕಲಾವಿದರು ಬಾಲಿವುಡ್‌ನಲ್ಲಿ ನಟಿಸೋದು ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಈಗ ಸರ್ವೇ ಸಾಧಾರಣವಾಗಿದೆ.

'ಜವಾನ್' ಸಿನಿಮಾ ಮೂಲಕ ನಯನತಾರಾ ಬಾಲಿವುಡ್ ಪ್ರವೇಶಿಸಿದ್ದಾರೆ. ರಶ್ಮಿಕಾ ಮಂದಣ್ಣ ಸಹ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ಸಾಯಿ ಪಲ್ಲವಿ ಕೂಡ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಕಷ್ಟ ಏನಲ್ಲ ಎನ್ನಲಾಗ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ಈ ಸಿನಿಮಾ ಸುದ್ದಿ ಹೊರಬೀಳುವ ನಿರೀಕ್ಷೆಯಿದೆ.

More from Filmibeat

English summary
Sai pallavi first bollywood entry with Aamir Khan Son Junaid Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X