ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಷರತ್ತು ಹಾಕಿದ ಸಾಯಿ ಪಲ್ಲವಿ

ದಕ್ಷಿಣ ಭಾರತದಲ್ಲಿ ಮಿಂಚುವ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಳ್ಳುವುದು ಹೊಸದೇನೂ ಅಲ್ಲ. ಇದಕ್ಕೆ ತಾಜಾ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ.

ಕೆಲವೇ ಸಿನಿಮಾಗಳಲ್ಲಿ ನಟಿಸಿದ ಕೂಡಲೇ ಬಾಲಿವುಡ್‌ಗೆ ಹಾರಿರುವ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ಎರಡು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಇನ್ನು ಮುಂದೆ ಬಾಲಿವುಡ್‌ನಲ್ಲಿಯೇ ನೆಲೆಯೂರಲು ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ರಂತೆಯೇ ನಟಿ ಸಾಯಿ ಪಲ್ಲವಿ ಸಹ ದಕ್ಷಿಣ ಭಾರತದ ಜನಪ್ರಿಯ ಹಾಗೂ ಯಶಸ್ವೀ ನಟಿ. ತಮ್ಮ ಸಮಕಾಲೀನ ನಟಿಯರಲ್ಲಿ ಅತಿ ಹೆಚ್ಚು ಪ್ರತಿಭಾವಂತ ನಟಿ ಎಂದೂ ಕರೆಯಬಹುದಾದ ಸಾಯಿ ಪಲ್ಲವಿಯ ಡ್ಯಾನ್ಸ್‌ಗೆ ಹಾಗೂ ಭಾವ ಚೆಲ್ಲುವ ನಟನೆಗೆ ಪ್ರತ್ಯೇಕ ಅಭಿಮಾನಿ ವರ್ಗವೇ ದಕ್ಷಿಣದ ರಾಜ್ಯಗಳಲ್ಲಿದೆ. ಇದೀಗ ರಶ್ಮಿಕಾ ಮಂದಣ್ಣರಂತೆ ನಟಿ ಸಾಯಿ ಪಲ್ಲವಿ ಸಹ ಬಾಲಿವುಡ್‌ಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಹಿಂದಿ ಸಿನಿಮಾಗಳಲ್ಲಿ ನಟಿಸಲು ಷರತ್ತೊಂದನ್ನು ಇರಿಸಿದ್ದಾರೆ ಸಾಯಿ ಪಲ್ಲವಿ.

ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲ್ಲ ಸಾಯಿ ಪಲ್ಲವಿ

ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲ್ಲ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಬಹಳ ಒಳ್ಳೆಯ ನಟಿ ಅಂತೆಯೇ ತಮ್ಮ ಸಿನಿಮಾಗಳು, ತಮ್ಮ ಪಾತ್ರಗಳ ಬಗ್ಗೆ ಸಾಕಷ್ಟು ಸ್ಪಷ್ಟತೆಯನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ಸಾಯಿ ಪಲ್ಲವಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ, ಗ್ಲಾಮರಸ್ ಎನಿಸುವ ಉಡುಗೆಗಳನ್ನು ಧರಿಸುವುದಿಲ್ಲ, ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ, ಉದ್ದೀಪನಗೊಳಿಸುವಂತೆ ಮಾದಕ ನೃತ್ಯ ಮಾಡುವುದಿಲ್ಲ. ಇನ್ನೂ ಕೆಲವು ಷರತ್ತುಗಳನ್ನು ಇರಿಸಿಯೇ ಅವರು ಸಿನಿಮಾ ಒಪ್ಪಿಕೊಳ್ಳುವುದು.

ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಷರತ್ತು

ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಷರತ್ತು

ಅಂತೆಯೇ ಇದೀಗ ಸಾಯಿ ಪಲ್ಲವಿ ನಟನೆಯ 'ಶ್ಯಾಮ ಸಿಂಘ ರಾಯ್' ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿದ್ದು, ಸಿನಿಮಾಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ, ತಮಗೂ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಆಸೆಯಿದೆ ಆದರೆ ಚಿತ್ರಕತೆ ಸರಿಯಾಗಿರಬೇಕು, ಚಿತ್ರಕತೆ ನನಗೆ ಒಪ್ಪಿಗೆಯಾಗುವಂತಿದ್ದರೆ ಮಾತ್ರವೇ ನಾನು ನಟಿಸುತ್ತೇನೆ. ನನಗೆ ಚಿತ್ರಕತೆಯೇ ಮುಖ್ಯ ಎಂದು ಹೇಳಿದ್ದಾರೆ. ನನಗೆ, ನನ್ನ ವ್ಯಕ್ತಿತ್ವಕ್ಕೆ ಒಪ್ಪಿಗೆ ಆಗುವ ಪಾತ್ರವಾಗಿದ್ದರೆ ಮಾತ್ರವೇ ನಾನು ನಟಿಸುತ್ತೇನೆ'' ಎಂದಿದ್ದಾರೆ ಸಾಯಿ ಪಲ್ಲವಿ.

ಹಿಟ್ ಆದ 'ಶ್ಯಾಮ ಸಿಂಘ ರಾಯ್'

ಹಿಟ್ ಆದ 'ಶ್ಯಾಮ ಸಿಂಘ ರಾಯ್'

ಸಾಯಿ ಪಲ್ಲವಿ ನಟಿಸಿರುವ 'ಶ್ಯಾಮ ಸಿಂಘ ರಾಯ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ನಾನಿ ನಾಯಕರಾಗಿದ್ದಾರೆ. ನಾನಿ ಜೊತೆಗೆ ಸಾಯಿ ಪಲ್ಲವಿ ಅವರದ್ದು ಇದು ಎರಡನೇ ಸಿನಿಮಾ. ಈ ಮೊದಲು 'ಮಿಡ್ಲ್‌ ಕ್ಲಾಸ್ ಅಬ್ಬಾಯಿ' ಹೆಸರಿನ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. 'ಶ್ಯಾಮ್ ಸಿಂಘ ರಾಯ್' ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆಗೆ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಸಹ ನಟಿಸಿದ್ದಾರೆ. ಜೊತೆಗೆ ಮಡೋನಾ ಸೆಬಾಸ್ಟಿಯನ್ ಸಹ ಇದ್ದಾರೆ. ಸಿನಿಮಾವನ್ನು ರಾಹುಲ್ ಸಾಂಕೃತ್ಯಾಯನ್ ನಿರ್ದೇಶನ ಮಾಡಿದ್ದಾರೆ.

ಸಾಯಿ ಪಲ್ಲವಿಯ ಮುಂದಿನ ಸಿನಿಮಾ

ಸಾಯಿ ಪಲ್ಲವಿಯ ಮುಂದಿನ ಸಿನಿಮಾ

ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಇದೀಗ 'ಶ್ಯಾಮ ಸಿಂಘ ರಾಯ್' ಸಿನಿಮಾ ಸಹ ಹಿಟ್ ಆಗಿದೆ. ಇವುಗಳನ್ನು ಹೊರತುಪಡಿಸಿ ಸಾಯಿ ಪಲ್ಲವಿ ನಟನೆಯ 'ವಿರಾಟ ಪರ್ವಂ' ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. ರಾಣಾ ದಗ್ಗುಬಾಟಿ, ಪ್ರಿಯಾಮಣಿ ಸಹ ಈ ಸಿನಿಮಾದಲ್ಲಿದ್ದು, ನಕ್ಸಲೈಟ್‌ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಸಿನಿಮಾದ ಬಗ್ಗೆ ಸಾಯಿ ಪಲ್ಲವಿಗೆ ಸಾಕಷ್ಟು ನಿರೀಕ್ಷೆಗಳಿವೆ. ಸಾಯಿ ಪಲ್ಲವಿ ಸಹೋದರಿ ಪೂಜಾ ಸಹ ನಟಿಯಾಗಿದ್ದು, ಅವರು ನಟಿಸಿರುವ 'ಚಿತ್ರೈ ಸೆವ್ವನಂ' ಸಿನಿಮಾ ಜೀ5 ನಲ್ಲಿ ಬಿಡುಗಡೆ ಆಗಿದೆ.

More from Filmibeat

English summary
Actress Sai Pallavi wants to act in Bollywood movies. But she has some conditions to act in Hindi movies. She said I will act in Bollywood movies if only the character suits my personality.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X