ಡಿವೋರ್ಸ್ ಸಿಕ್ಕ ಖುಷಿಯಲ್ಲಿ ಗಂಡನ ಜೊತೆ ಕುಡಿದು ತೂರಾಡಿದ ಖ್ಯಾತ ನಟಿ...!
ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ. ದೇವದಾಸರಾಗಿದ್ದು ಇದೆ.
ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಯಾವ ಲವಲೇಶವೂ ಕೂಡ ಮುಖದಲ್ಲಿ ಕಾಣಿಸುವುದಿಲ್ಲ. ಬದಲಿಗೆ ದಾಂಪತ್ಯ ಮುರಿದು ಬಿದ್ದ ಖುಷಿಯಲ್ಲಿ ಕೆಲವರು ಪಾರ್ಟಿಯನ್ನು ಮಾಡುತ್ತಾರೆ. ಕಂಠಪೂರ್ತಿ ಕುಡಿಯುತ್ತಾರೆ. ಇದಕ್ಕೆ ಸಾಯಿ ತಮ್ಹಂಕರ್ ಮತ್ತು ಅಮೇ ಗೋಸಾವಿ ಸದ್ಯದ ಅತ್ಯುತ್ತಮ ಉದಾಹರಣೆ.

ಹೌದು, ಸನಯ್ ಚೌಗಡೇ.. ಸುಂಬರಾನ್.. ನೋ ಎಂಟ್ರಿ ಫುಡೇ ದೋಖಾ ಹೈ.. ದುನಿಯಾ ದಾರಿ.. ತೆಂಡೂಲ್ಕರ್ ಔಟ್.. ಹೀಗೆ ಹಲವಾರು ಚಿತ್ರಗಳ ಮೂಲಕ ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಮತ್ತು ಮಾನ ಹೊಂದಿರುವ ಸಾಯಿ ತಮ್ಹಂಕರ್ 2013ರಲ್ಲಿ ನಿರ್ಮಾಪಕ ಅಮೇ ಗೋಸಾವಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕೇವಲ ಎರಡೇ ವರ್ಷ ಇವರ ಪ್ರೀತಿ ಕಮರಿ ಹೋಯ್ತು. ದಾಂಪತ್ಯ ಜೀವನ 2015ರಲ್ಲಿ ಮುರಿದು ಬಿತ್ತು. ನ್ಯಾಯಾಲಯದಲ್ಲಿ ಡಿವೋರ್ಸ್ ಕೂಡ ಸಿಕ್ಕಿತು.
ತಮ್ಮ ಈ ಅತ್ಯಲ್ಪ ಅವಧಿಯ ಸಾಂಸಾರಿಕ ಜೀವನದ ಬಗ್ಗೆ ಸಾಯಿ ತಮ್ಹಂಕರ್ ಈಗ ಮಾತನಾಡಿದ್ದಾರೆ. ವಿಚ್ಛೇದನ ಸಿಕ್ಕ ನಂತರ ತಾವು ಇಬ್ಬರು ಮಾಡಿದ ಮೊದಲ ಕೆಲಸವೇನು ಎನ್ನುವುದನ್ನು ಕೂಡ ಹೇಳಿದ್ದಾರೆ. ಈ ಕುರಿತು ಹಾಟರ್ ಫ್ಲೈಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಾಯಿ ತಮ್ಹಂಕರ್ ಅವತ್ತು ಡಿವೋರ್ಸ್ ಸಿಕ್ಕ ತಕ್ಷಣ ನಮ್ಮಿಬ್ಬರ ಮನಸ್ಥಿತಿ ಹದಗೆಟ್ಟಿತ್ತು. ದೂರವಾಗುತ್ತಿರುವುದಕ್ಕೆ ಇಬ್ಬರಲ್ಲಿ ನೋವು ಇತ್ತು ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು, ಹೀಗಾಗಿ ಎಲ್ಲ ನೋವುಗಳನ್ನು ಮರೆತು ನಾವು ಇಬ್ಬರು ರಿಲ್ಯಾಕ್ಸ್ ಆಗೋಣ ಎಂದು ಬಯಸಿದ್ವಿ ಎಂದಿದ್ದಾರೆ. ಈ ಕಾರಣಕ್ಕೆ ನಾನು ಮತ್ತು ಅಮೇ ಆ ನಂತರ ಪಾರ್ಟಿಯನ್ನು ಮಾಡಲು ಮುಂದಾದ್ವಿ ಎಂದಿರುವ ಸಾಯಿ ಎಣ್ಣೆ ಹೊಡೆಯುತ್ತಾ ಪರಸ್ಪರ ಕಣ್ಣೀರು ಸುರಿಸಿ, ನಮ್ಮ ಪ್ರೀತಿಯ ದಿನಗಳನ್ನು ನೆನಪು ಮಾಡಿಕೊಂಡೆವು ಎಂದು ಹೇಳಿದ್ದಾರೆ. ಪರಸ್ಪರ ಜೀವನದ ಕುರಿತು ಸಲಹೆಯನ್ನು ನೀಡಿದೆವು ಎಂದು ಹೇಳಿದ್ದಾರೆ.
ಹೀಗೆ ನಾವು ಇಬ್ಬರೇ ಕುಳಿತು ಬದುಕಿನ ಆತ್ಮಾವಲೋಕನ ಮಾಡಿಕೊಳ್ಳುವ ಸಮಯದಲ್ಲಿ ನಮ್ಮ 8-10 ಸ್ನೇಹಿತರು ಒಬ್ಬರಾದ ಮೇಲೊಬ್ಬರು ಕರೆ ಮಾಡಲು ಶುರು ಮಾಡಿದರು, ನಾವು ಇದ್ದ ಜಾಗದ ಮಾಹಿತಿಯನ್ನು ಪಡೆದರು, ಆ ನಂತರ ಅವರೆಲ್ಲ ಕೂಡ ಬಂದು ನಮ್ಮ ಇಬ್ಬರ ಜೊತೆ ಪಾರ್ಟಿಗೆ ಸೇರಿಕೊಂಡರು ಎಂದಿರುವ ಸಾಯಿ ತಮ್ಹಂಕರ್ ಅವತ್ತು ಪಾರ್ಟಿಯನ್ನು ತುಂಬಾನೇ ಎಂಜಾಯ್ ಮಾಡಿದ್ವಿ, ಎಲ್ಲರು ಕಂಠಪೂರ್ತಿ ಕುಡಿದ್ವಿ ಎಂದು ಹೇಳಿದ್ದಾರೆ.
ಅಂದ್ಹಾಗೇ ಅಮೇ ಮತ್ತು ಸಾಯಿ ದೂರವಾಗಿ ಹತ್ತು ವರ್ಷಗಳಾಗಿವೆ. ಆದರೆ ಇವತ್ತು ಇಬ್ಬರ ನಡುವೆ ಪ್ರೇಮ ಇಲ್ಲದಿದ್ದರೂ ಸ್ನೇಹ ಇದೆ. ಆಗಾಗ ಸಾಯಿ ಮತ್ತು ಅಮೇ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ಇನ್ನು, ಬ್ರೇಕಪ್ ಆದ ಮೇಲೆ, ದಾಂಪತ್ಯ ಮುರಿದು ಬಿದ್ದ ಮೇಲೆ ಅನೇಕರು ತಮ್ಮ ಸಂಗಾತಿಯ ನೆನಪುಗಳನ್ನು ಅಳಿಸಿ ಹಾಕುತ್ತಾರೆ. ಆದರೆ ತಾವು ಹಾಕಿಸಿಕೊಂಡ ಮದುವೆಯ ದಿನಾಂಕ ಮತ್ತು ಮಾಜಿ ಪತಿ ಅಮೆ ತಮಗೆ ಪ್ರಪೋಸ್ ಮಾಡಿದ್ದ ದಿನಾಂಕದ ಹಚ್ಚೆಗಳನ್ನು ಸಾಯಿ ತಮ್ಹಂಕರ್ ಇವತ್ತು ಕೂಡ ಹಾಗೇ ತಮ್ಮ ದೇಹದ ಮೇಲೆ ಉಳಿಸಿಕೊಂಡಿದ್ದಾರೆ.


Click it and Unblock the Notifications











