For Quick Alerts
  ALLOW NOTIFICATIONS  
  For Daily Alerts

  ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್

  |

  ಬಾಲಿವುಡ್‌ನಲ್ಲಿ ಕೆಲವು ಕುಟುಂಬಗಳ ಪೀಳಿಗೆಗಳು ಸಲೀಸಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಆದರೆ ಹೊರಗಿನಿಂದ ಬರುವ ಹೊಸಬರು ಎಷ್ಟೇ ಪ್ರತಿಭೆಗಳಿದ್ದರೂ ಅವರನ್ನು ಬೆಳೆಯಲು ಬಿಡುವುದಿಲ್ಲ ಎಂಬ ಆರೋಪ ಕೇಳಬರುತ್ತಿದೆ. ನಟ ಸೈಫ್ ಅಲಿಖಾನ್ ನೀಡಿರುವ ಹೇಳಿಕೆ ಸ್ವಜನಪಕ್ಷಪಾತದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

  ಹೊಸ ಪ್ರತಿಭೆಗಳು ಅಂದ್ರೆ ಪುನೀತ್ ರಾಜಕುಮಾರ್ ಹೇಗೆ ಸಪೋರ್ಟ್ ಮಾಡ್ತಾರೆ ನೋಡಿ

  ತಮ್ಮ ಪರಂಪರಾಗತ ಸವಲತ್ತಿನ ಇಮೇಜ್‌ಅಡಿ ಬೆಳೆದಿರುವುದಕ್ಕೆ ಖುಷಿಯಾಗುತ್ತದೆ. ವಿಶಾಲ್ ಭಾರದ್ವಾಜ್ ಅವರ 'ಓಂಕಾರ' ಚಿತ್ರದಲ್ಲಿ ಲಂಗ್ಡಾ ತ್ಯಾಗಿ ಪಾತ್ರದ ಅಭಿನಯಕ್ಕಾಗಿ ಗೌರವ ಪಡೆದುಕೊಂಡಿದ್ದೆ ಎಂದು ಸೈಫ್ ಅಲಿ ಖಾನ್ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಚಿತ್ರರಂಗದಿಂದ ಬರುವ ಪ್ರತಿಭಾವಂತ ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗದೆ ಇರುವುದು ಸಾಮಾನ್ಯ ಸಂಗತಿ ಎಂದಿದ್ದಾರೆ.

  ಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂ

  ಮೊದಲ ದಿನದ ಕೆಲಸದ ಬಳಿಕ ಚಿತ್ರತಂಡದಲ್ಲಿದ್ದ ಸಿಬ್ಬಂದಿ, 'ಖಾನ್ ಸಾಹಾಬ್' ಎಂದು ಸಂಭೋದಿಸುತ್ತಿದ್ದರು. ಇದರ ಸೈಫ್ ಅಲಿ ಖಾನ್ ಮಾತನಾಡಿದ್ದಾರೆ. ಮುಂದೆ ಓದಿ...

  ಕೆಲವರು ಕಷ್ಟಪಟ್ಟು ಬರುತ್ತಾರೆ

  ಕೆಲವರು ಕಷ್ಟಪಟ್ಟು ಬರುತ್ತಾರೆ

  'ನಾನು ಆ ರೀತಿಯ ವ್ಯಕ್ತಿತ್ವದವನು. ಸಿನಿಮಾಗಳನ್ನು ಮಾಡುವಾಗ ಸವಲತ್ತು ಮತ್ತು ಸವಲತ್ತಿನ ಕೊರತೆಯ ಜ್ಞಾನವೂ ಇರುತ್ತದೆ. ಕೆಲವು ಜನರು ಬಹಳ ಕಷ್ಟಪಟ್ಟು ಬರುತ್ತಾರೆ. ಇನ್ನು ಕೆಲವರು ಬಹಳ ಸುಲಭದ ಮಾರ್ಗದಲ್ಲಿ ಬರುತ್ತಾರೆ. ಅಲ್ಲಿ ಮುಖ್ಯವಾಗಿ ಎನ್‌ಡಿಸಿಯಿಂದ ಮತ್ತು ಫಿಲಂ ಇನ್‌ಸ್ಟಿಟ್ಯೂಟ್‌ನಿಂದ ಬರುವವರ ಯಾವಾಗಲೂ ಒಂದು ಅಂತಃಪ್ರವಾಹ ಇರುತ್ತದೆ ಎಂದಿದ್ದಾರೆ.

  ನಮಗೆ ಬಾಗಿಲು ತೆರೆದಿರುತ್ತದೆ

  ನಮಗೆ ಬಾಗಿಲು ತೆರೆದಿರುತ್ತದೆ

  ಅವರೆಲ್ಲರೂ ಪರಿಶುದ್ಧ ಪ್ರತಿಭೆಯಿಂದಲೇ ಬರುತ್ತಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ ಅದರ ನಡುವೆ ನಮ್ಮಂತಹ ಕೆಲವರಿಗೆ ನಮ್ಮ ಜನ್ಮದಿಂದ ಬರುವ ವಿಶೇಷ ಸೌಲಭ್ಯ ಹಾಗೂ ನಮ್ಮ ಪೋಷಕರ ಕಾರಣದಿಂದ ಬಾಗಿಲುಗಳು ತೆರೆದೇ ಇರುತ್ತವೆ. ನೀವು ಸೆಟ್‌ನಲ್ಲಿದ್ದು ದೃಶ್ಯವೊಂದಕ್ಕೆ ಎಲ್ಲರಿಗಿಂತ ಹೆಚ್ಚು ಸಿದ್ಧತೆ ನಡೆಸಿದಾಗ ಮತ್ತು ಬೇರೆಯವರಿಗಿಂತ ಹೆಚ್ಚು ಉತ್ತಮವಾಗಿ ಅಭಿನಯಿಸಿದಾಗ ನಿಮಗೆ ಸಮಾಧಾನ ತರುತ್ತದೆ. ಆ ಜನರಿಂದ ಗೌರವ ಪಡೆದುಕೊಳ್ಳುವುದು ಬಹಳ ಮುಖ್ಯ.

  'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ

  ಕಂಗನಾ ಕ್ಷಮೆ ಕೇಳಿದ್ದ ಸೈಫ್

  ಕಂಗನಾ ಕ್ಷಮೆ ಕೇಳಿದ್ದ ಸೈಫ್

  2017ರಲ್ಲಿ ಪ್ರಶಸ್ತಿ ಸಮಾರಂಭವೊಂದರಲ್ಲಿ ವರುಣ್ ಧವನ್ ಮತ್ತು ಕರಣ್ ಜೋಹರ್ ಜತೆ ಸೈಫ್ ಅಲಿ ಖಾನ್ 'ನೆಪೋಟಿಸಂ ರಾಕ್ಸ್' ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಸ್ಪಷ್ಟೀಕರಣ ನೀಡಿದ್ದ ಸೈಫ್ ಅಲಿ ಖಾನ್ ಬಹಿರಂಗ ಪತ್ರ ಬರೆದಿದ್ದರು. ಇದು ನಮ್ಮ ಮೂವರ ಮೇಲಿನ ತಮಾಷೆಯಾಗಿತ್ತು. ಇದು ದೊಡ್ಡ ಸಂಗತಿಯಾಗುವಂಥದ್ದೇನಲ್ಲ. ಆದರೆ ಒಂದು ಅಂಶದಲ್ಲಿ ಅದು ಕಂಗನಾ ರಣಾವತ್ ಅವರಿಗೆ ನೋವು ತಂದಿರಬಹುದು. ಇದಕ್ಕಾಗಿ ಅವರಿಗೆ ಕರೆ ಮಾಡಿ ವೈಯಕ್ತಿಕವಾಗಿ ಕ್ಷಮೆ ಕೇಳಿದ್ದೆ. ಅದು ಅಲ್ಲಿಗೇ ಕೊನೆಯಾಗಬೇಕಿತ್ತು ಎಂದಿದ್ದರು.

  ನನ್ನ ವಿರೋಧವಿದೆ

  ನನ್ನ ವಿರೋಧವಿದೆ

  'ಸ್ವಜನಪಕ್ಷಪಾತ ಎನ್ನುವುದು ಭಯಾನಕ ಸಂಗತಿ. ಸ್ವಜನಪಕ್ಷಪಾತದ ವಿರುದ್ಧ ನನಗೆ ಸಂಪೂರ್ಣ ವಿರೋಧವಿದೆ. ಅದರಿಂದ ನನಗೆ ಲಾಭವಾಗಿರುವುದು ನಿಜ. ಸಿನಿಮಾರಂಗದೊಂದಿಗೆ ನಂಟು ಇಲ್ಲದಿರರುವರಿಗಿಂತ ನಮಗೆ ಹೆಚ್ಚು ಅವಕಾಶಗಳು ಸಿಗುತ್ತಿರುವುದಂತೂ ಖಂಡಿತ' ಎಂದು ಸೈಫ್ ತಿಳಿಸಿದ್ದರು.

  ಅವಾರ್ಡ್ ಫಂಕ್ಷನ್‌ಗಳಲ್ಲಿ ಕಡೆಗಣನೆ: ಬಾಲಿವುಡ್ ಲಾಬಿ ವಿರುದ್ಧ ಕಿಡಿಕಾರಿದ ಅಭಯ್ ಡಿಯೋಲ್ಅವಾರ್ಡ್ ಫಂಕ್ಷನ್‌ಗಳಲ್ಲಿ ಕಡೆಗಣನೆ: ಬಾಲಿವುಡ್ ಲಾಬಿ ವಿರುದ್ಧ ಕಿಡಿಕಾರಿದ ಅಭಯ್ ಡಿಯೋಲ್

  English summary
  Bollywood actor Saif Ali Khan admitted that it is common in India for good actors to not get opportunities than privileged people like him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X