ಫೋಟೋ ವೈರಲ್: ಅಪ್ಪನ ಜೊತೆ ಕೃಷಿ ಮಾಡುತ್ತಿರುವ ನಟಿ ಕರೀನಾ ಕಪೂರ್ ಮುದ್ದಿನ ಮಗ
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮುದ್ದಿನ ಮಗ ತೈಮೂರ್ ಅಲಿ ಖಾನ್ ಕೃಷಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಅಪ್ಪ ಸೈಫ್ ಅಲಿ ಖಾನ್ ಜೊತೆ ಹೊಲಕ್ಕೆ ಹೋಗಿರುವ ತೈಮೂರ್ ನೀರು, ಕೆಸರಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಕರೀನಾ ಮತ್ತು ಸೈಫ್ ಅಲಿ ಖಾನ್ ಸದ್ಯ ಪಟೌಡಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ವಿಡುವಿನ ವೇಳೆಯಲ್ಲಿ ಸೈಫ್ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪುತ್ರನನ್ನು ಕರೆದುಕೊಂಡು ಹೋಗಿದ್ದಾರೆ. ಪುಟ್ಟ ಪೋರ ತೈಮೂರ್ ಹೊಲದಲ್ಲಿ ನೀರಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದೆ. ಕೆಸರಿನಲ್ಲಿ ನಿಂತಿರುವ ತೈಮೂರ್ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ.
ಇತ್ತೀಚಿಗೆ ತೈಮೂರ್ ಗಲ್ಲಿ ಕ್ರಿಕೆಟ್ ಆಡುತ್ತಿರುವ ಫೋಟೋವನ್ನು ಕರೀನಾ ಕಪೂರ್ ಶೇರ್ ಮಾಡಿದ್ದರು. ಫೋಟೋ ಜೊತೆಗೆ ಐಪಿಎಲ್ ನಲ್ಲಿ ಸ್ಥಾನ ವಿದಿಯಾ? ಎಂದು ಕೇಳಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತನ್ನ ಮಗ ಆತನ ತಾತನ ಹಾಗೆ ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕರೀನಾ ಕಪೂರ್ ಸದ್ಯ ಎರಡನೇ ಬಾರಿಗೆ ಗರ್ಭಿಣಿ ಆಗಿದ್ದಾರೆ. ಕರೀನಾ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಕರೀನಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿರುವ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.


Click it and Unblock the Notifications











