For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿಯ ನಡುವೆಯೂ ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹಾರಿದ ಕರೀನಾ ದಂಪತಿ

  |

  ಭಾರತೀಯ ಸಿನಿ ತಾರೆಯರ ಸ್ವರ್ಗ ಎಂದೇ ಮಾಲ್ಡೀವ್ಸ್ ಅನ್ನು ಕರೆಯಲಾಗುತ್ತಿದೆ. ಕೊರೊನಾ ಮೊದಲನೇ ಅಲೆ ಮುಗಿಯುತ್ತಿದ್ದಂತೆ ಭಾರತೀಯ ಸಿನಿತಾರೆಯರು ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದರು. ಲಾಕ್ ಡೌನ್‌ನಿಂದ ಮನೆಯಲ್ಲೇ ಕೂತು ಬೋರಾಗಿದ್ದ ಸೆಲೆಬ್ರಿಟಿಗಳಿಗೆ ಎಂಜಾಯ್ ಮಾಡಲು ಸಿಕ್ಕ ಸ್ಥಳ ಮಾಲ್ಡೀವ್ಸ್. ಬಹುತೇಕ ತಾರೆಯರು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುವ ಮೂಲಕ ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಜೊತೆಗೆ ಸುಂದರ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದರು.

  ಇನ್ನು ಭಾರತದಲ್ಲಿ ಕೊರೊನಾ 2ನೇ ಅಲೆಯ ಲಾಕ್ ಡೌನ್ ಘೋಷಿಸುತ್ತಿದ್ದಂತೆ ಮತ್ತೆ ಮಾಲ್ಡೀವ್ಸ್ ಕಡೆ ಹಾರಿದ್ದರು. ಬಾಲಿವುಡ್ ನ ಬಹುತೇಕ ಮಂದಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು. ಸೆಲೆಬ್ರಿಟಿಗಳ ಮಾಲ್ಡೀವ್ಸ್ ಪ್ರವಾಸ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟೀಕೆಗೂ ಗುರಿಯಾಗಿದ್ದರು. ಆದರೆ ಅಷ್ಟರಲ್ಲೇ ಭಾರತದಲ್ಲಿ ಕೊರೊನಾ ಜಾಸ್ತಿ ಸಂಖ್ಯೆ ದಿಢೀರ್ ಏರಿಕೆಯಾಯಿತು. ಇದರಿಂದ ಮಾಲ್ಡೀವ್ಸ್ ಸರ್ಕಾರ ಭಾರತ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

  ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೆ: ಕರೀನಾ ಕಪೂರ್ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೆ: ಕರೀನಾ ಕಪೂರ್

  "ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯವು ಭಾರತೀಯರ ಪ್ರವಾಸವನ್ನು ನಿರ್ಬಂಧಿಸುವುದಾಗಿ ಹೇಳಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಶಾಕ್ ನೀಡಿತ್ತು. 'ಏಪ್ರಿಲ್ 27ರಿಂದ ಭಾರತದಿಂದ ಮಾಲ್ಡೀವ್ಸ್ ದ್ವೀಪಗಳಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳುವ ಸೌಲಭ್ಯವನ್ನು ನಿರ್ಬಂಧಿಸಿದೆ. ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸಲು ನೀಡಿದ ಬೆಂಬಲಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿತ್ತು. ಬಳಿಕ ಸೆಲೆಬ್ರಿಟಿಗಳು ಅಲ್ಲಿಂದ ಕಾಲ್ತಿತ್ತಿದ್ದರು.

  ಇದೀಗ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ ಮತ್ತೆ ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದಾರೆ.

  ಮಕ್ಕಳ ಜೊತೆ ಕರೀನಾ ದಂಪತಿಯ ಮಾಲ್ಡೀವ್ಸ್ ಪ್ರವಾಸ

  ಮಕ್ಕಳ ಜೊತೆ ಕರೀನಾ ದಂಪತಿಯ ಮಾಲ್ಡೀವ್ಸ್ ಪ್ರವಾಸ

  ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಇಬ್ಬರು ಮುದ್ದಾದ ಮಕ್ಕಳ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಇಬ್ಬರನ್ನು ಮಾಲ್ಡೀವ್ಸ್ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದಾರೆ. ಕರೀನಾ ಮತ್ತು ಸೈಫ್ ಇಬ್ಬರೂ ಮನೆಯಿಂದ ಹೊರ ಬಂದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೊದಲ ಬಾರಿಗೆ ಎರಡನೇ ಪುತ್ರ ಜೆಹ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಮುದ್ದು ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ವರ್ಷದ ಬಳಿಕ ಪ್ರವಾಸ ಕೈಗೊಂಡ ಕರೀನಾ ದಂಪತಿ

  ವರ್ಷದ ಬಳಿಕ ಪ್ರವಾಸ ಕೈಗೊಂಡ ಕರೀನಾ ದಂಪತಿ

  ಕರೀನಾ ಮತ್ತು ಸೈಫ್ ಇಬ್ಬರಿಗೂ ಪ್ರವಾಸವೆಂದರೆ ತುಂಬಾ ಇಷ್ಟ. ಆದರೆ ಕೊರೊನಾ ಕಾರಣದಿಂದ ಇಬ್ಬರೂ ಮುಂಬೈನಲ್ಲೇ ಇರುವಂತಾಗಿತ್ತು. ಇದೀಗ ಒಂದು ವರ್ಷದ ಬಳಿಕ ಪ್ರವಾಸ ಕೈಗೊಂಡಿದ್ದಾರೆ. ಕೆಲ ದಿನಗಳು ಮಾಲ್ಡೀವ್ಸ್ ನಲ್ಲಿ ಕಳೆಯಲು ಕರೀನಾ ದಂಪತಿ ಪ್ಲಾನ್ ಮಾಡಿದ್ದು, ಮಕ್ಕಳ ಜೊತೆ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡಲಿದ್ದಾರೆ.

  ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಸೈಫ್

  ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಸೈಫ್

  ಅಂದಹಾಗೆ ಸೈಫ್ ಅಲಿ ಖಾನ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಆಗಸ್ಟ್‌ 16ಕ್ಕೆ ಸೈಫ್ ಅಲಿ ಖಾನ್ 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸೈಫ್ ಮಾಲ್ಡೀವ್ಸ್‌ನಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತನ್ನ ಕುಟುಂಬದ ಜೊತೆ ಸೈಫ್ ದೂರ ದ್ವೀಪದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಪ್ಲಾನ್ ಮಾಡಿಯೇ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ.

  ಕರೀನಾ ಬಳಿ ಇರುವ ಸಿನಿಮಾಗಳು

  ಕರೀನಾ ಬಳಿ ಇರುವ ಸಿನಿಮಾಗಳು

  ಅಂದಹಾಗೆ ಕರೀನಾ ಮತ್ತು ಸೈಫ್ ದಂಪತಿ ಖಾಸಗಿ ವಿಮಾನದಲ್ಲಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಇಬ್ಬರು ಖಾಸಗಿ ವಿಮಾನ ನಿಲ್ದಾಣದಿಂದ ಹೊರಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಕರೀನಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಈಗಾಗಲೇ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಕರೀನಾ, ಆಮೀರ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ.

  ಸೈಫ್ ಸಿನಿಮಾಗಳು

  ಸೈಫ್ ಸಿನಿಮಾಗಳು

  ಇನ್ನು ಸೈಫ್ ಅಲಿ ಖಾನ್ ಸದ್ಯ 'ಆದಿಪುರುಷ್' ಸಿನಿಮಾದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆದಿಪುರುಷ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದೆ. ಈ ಸಿನಿಮಾ ಜೊತೆಗೆ ಸೈಫ್ ಬಂಟಿ ಔರ್ ಬಬ್ಲಿ-2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಆದಿತ್ಯ ಚೋಪ್ರ ಬಂಡವಾಳ ಹೂಡಿದ್ದಾರೆ. ಸೈಫ್ ಜೊತೆ ರಾಣಿ ಮುಖರ್ಜಿ, ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood Actor Saif Ali Khan and Kareena Kapoor jet off to maldives with children Taimur and Jeh

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X