For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಕರೀನಾ ಕಪೂರ್

  |

  ಬಾಲಿವುಡ್ ನಟ ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಕರೀನಾ ಕಪೂರ್ ಇಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

  ಗರ್ಭಿಣಿಯಾಗಿದ್ದ ಕರೀನಾ ಕಪೂರ್ ಮುಂಬೈನ ಬ್ರಿಡ್ಜ್ ಕ್ಯಾಂಡಿ ಹಾಸ್ಪಿಟಲ್‌ನಲ್ಲಿ ದಾಖಲಾಗಿದ್ದರು. ಅಲ್ಲಿಯೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.

  2016 ರಲ್ಲಿ ಕರೀನಾ ಕಪೂರ್-ಸೈಫ್ ಗೆ ಗಂಡು ಮಗು ಜನನಾಗಿತ್ತು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಕರೀನಾ ಕಪೂರ್.

  ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಈ ಜೋಡಿ ಕೆಲವು ದಿನಗಳ ಹಿಂದಷ್ಟೆ ದೊಡ್ಡ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಮಗುವಿನ ಆರೈಕೆಗೆ, ಈಗಿರುವ ಮಗನ ಆರೈಕೆಗೆ ಸೂಕ್ತವಾದ ವ್ಯವಸ್ಥೆ ಮಾಡಿಕೊಂಡು ಹೊಸ ಮನೆಗೆ ಬದಲಾವಣೆ ಆಗಿದ್ದಾರೆ.

  ಕರೀನಾ ಕಪೂರ್ ಅವರಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಕುಟುಂಬ ಸದಸ್ಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದಾರೆ. ಕರೀನಾ ಕಪೂರ್ ಗೆ ಇದು ಎರಡನೇ ಮಗುವಾದರೂ, ಸೈಫ್ ಅಲಿ ಖಾನ್ ಗೆ ನಾಲ್ಕನೇ ಮಗು. ಮೊದಲ ಪತ್ನಿ ಅಮೃತಾ ಸಿಂಗ್ ಜೊತೆಗೆ ಎರಡು ಮಕ್ಕಳನ್ನು ಸೈಫ್ ಅಲಿ ಖಾನ್ ಹೊಂದಿದ್ದು, ಅದರಲ್ಲಿ ಒಬ್ಬರು ಬಾಲಿವುಡ್ ನ ಖ್ಯಾತ ನಟಿ ಸಾರಾ ಅಲಿ ಖಾನ್.

  ಪೊಗರು ತಂಡದ ಪೊಗರನ್ನು ಕಡಿಮೆ ಮಾಡಿದ ಸಚ್ಚಿದಾನಂದ ಮೂರ್ತಿ | Filmibeat Kannada

  ಕರೀನಾ-ಸೈಫ್ ದಂಪತಿಯ ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದರು, ಇದು ಭಾರಿ ವಿವಾದ ಎಬ್ಬಿಸಿತ್ತು. ತೈಮೂರ್ ಎಂಬುದು ಒಬ್ಬ ದುಷ್ಟ ರಾಜನ ಹೆಸರಾಗಿರುವ ಕಾರಣ ಹೆಸರಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಾಗಿತ್ತು. ಇದೀಗ ಎರಡನೇ ಮಗುವಿಗೆ ಏನು ಹೆಸರಿಡುತ್ತಾರೆ ಎಂಬುದು ಕಾದು ನೋಡಬೇಕಿದೆ.

  English summary
  Kareena Kapoor gave birth to baby boy in Mumbai's hospital. Saif-Kareena welcomes second baby into their life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X