For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿನ ಆಗಮನದ ದಿನಾಂಕ ತಿಳಿಸಿದ ಸೈಫ್-ಕರೀನಾ ದಂಪತಿ

  |

  ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಮೊದಲ ಮಗ ತೈಮೂರ್‌ಗೆ ಈಗ ನಾಲ್ಕು ವರ್ಷವಾಗಿದ್ದು, ಈಗ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ನಟಿ ಕರೀನಾ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗುವಿನ ಡಿಲೆವರಿ ಡೇಟ್‌ ಅನ್ನು ಹೇಳಿದ್ದಾರೆ ಸೈಫ್ ಅಲಿ ಖಾನ್.

  ಫೆಬ್ರವರಿ ಮೊದಲ ವಾರದಲ್ಲಿ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಈ ವಿಷಯವನ್ನು ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೊದಲ ಮಗುವಿನ ಸಮಯದಲ್ಲಿ ಕರೀನಾ ಸಾಕಷ್ಟು ಆತಂಕದಲ್ಲಿದ್ದರು, ಆದರೆ ಈ ಬಾರಿ ಕೂಲ್ ಆಗಿದ್ದಾರೆ ಎಂದು ಹೇಳಿದ್ದಾರೆ ಸೈಫ್.

  ಹೊಸ ಮಗುವಿನ ಆಗಮನಕ್ಕೆ ಸಾಕಷ್ಟು ತಯಾರಿಯನ್ನು ಸೈಫ್ ಹಾಗೂ ಕರೀನಾ ಮಾಡಿಕೊಂಡಿದ್ದಾರೆ. ಈಗಿರುವ ಮನೆಯನ್ನು ಬಿಟ್ಟು ಮುಂಬೈನಲ್ಲಿಯೇ ಇನ್ನೂ ದೊಡ್ಡ ಮನೆ ಖರೀದಿಸಿದ್ದು, ಹೊಸ ಮಗುವಿನ ಆರೈಕೆ ಹಾಗೂ ತೈಮೂರ್ ಆರೈಕೆಗಾಗಿ ಅನುಕೂಲವಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

  ಇನ್ನು 'ಪಾಪಾರಾಟ್ಜಿ'ಗಳಲ್ಲಿ ಮನವಿ ಸಹ ಮಾಡಿರುವ ಸೈಫ್ ಹಾಗೂ ಕರೀನಾ. ಹೊಸ ಮಗುವಿನ ಚಿತ್ರಗಳನ್ನು ದಯವಿಟ್ಟು ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ. ಮಗುವಿಗೆ ಅನಗತ್ಯ ಪ್ರಾಮುಖ್ಯತೆ ದೊರೆಯುವುದು ನಮಗೆ ಇಷ್ಟವಿಲ್ಲ ಎಂದಿದ್ದಾರೆ ಈ ತಾರಾ ದಂಪತಿ.

  English summary
  Saif ali Khan and Kareena Kapoor to well come their second baby on February first week said Saif in a interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X