ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದ ನಟ ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಬಗ್ಗೆ ಹೇಳಿದ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಹೇಳಿಕೆ ಹಿಂಪಡೆಯುವುದಾಗಿ ಹೇಳಿದ್ದಾರೆ.

ನಟ ಸೈಫ್ ಅಲಿ ಖಾನ್ 'ಆದಿಪುರುಷ್' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ರಾಮನಾಗಿ ನಟಿಸಿದರೆ ಸೈಫ್ ರಾವಣನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಸೈಫ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ರಾವಣನ ಬಗ್ಗೆ ಮತ್ತು ಪಾತ್ರದ ಬಗ್ಗೆ ವಿವರಿಸಿದ್ದರು. ರಾವಣ ಸಹ ಒಳ್ಳೆಯವನು ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತೆ ಎನ್ನುವ ರೀತಿಯಲ್ಲಿ ಸೈಫ್ ಮಾತನಾಡಿದ್ದರು.

ಇದೀಗ ಪ್ರತಿಕ್ರಿಯೆ ನೀಡಿರುವ ಸೈಫ, ಜನರು ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ನನಗೆ ತಿಳಿದಿದೆ. ಆದರೆ ಇದು ನನ್ನ ಉದ್ದೇಶವಾಗಿರಲಿಲ್ಲ. ಇದರಿಂದ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಮುಂದೆ ಓದಿ...

ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್

ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್

ಇದೀಗ ಕ್ಷಮೆಯಾಚಿಸಿರುವ ಸೈಫ್, 'ಸಂದರ್ಶವೊಂದರಲ್ಲಿ ನನ್ನ ಒಂದು ಹೇಳಿಕೆಯು ವಿವಾದವನ್ನು ಉಂಟುಮಾಡಿದೆ. ಜನರು ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ನನಗೆ ತಿಳಿದಿದೆ. ಆದರೆ ಇದು ನನ್ನ ಉದ್ದೇಶವಾಗಿರಲಿಲ್ಲ. ಇದರಿಂದ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಮತ್ತು ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ರಾಮ ಯಾವಾಗಲು ವೀರತೆಯ ಸಂಕೇತ. ಆದಿಪುರುಷ್ ದುಷ್ಟರ ವಿರುದ್ಧ ಒಳ್ಳೆತನದ ಗೆಲುವಿನ ಬಗ್ಗೆ ಇದೆ. ಈ ಸಿನಿಮಾದಲ್ಲಿ ಯಾವುದೇ ವಿರೂಪಗಳಿಲ್ಲದೆ ಮಹಾಕಾವ್ಯವನ್ನು ಪ್ರಸ್ತುತಪಡಿಸಲು ಇಡೀ ತಂಡವು ಒಟ್ಟಾಗಿ ಕೆಲಸಮಾಡುತ್ತಿದೆ' ಎಂದು ಹೇಳಿದ್ದಾರೆ.

ಸೈಫ್ ಅಲಿ ಖಾನ್ ಹೇಳಿದ್ದೇನು?

ಸೈಫ್ ಅಲಿ ಖಾನ್ ಹೇಳಿದ್ದೇನು?

'ರಾವಣನಾಗಿ ನಟಿಸಲು ಉತ್ಸುಕನಾಗಿದ್ದೇನೆ. ಆ ಪಾತ್ರ ನಿರ್ವಹಣೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಮನರಂಜನೆ ದೃಷ್ಟಿಯಿಂದ ಆ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ. ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳುವ ಕಾರಣಕ್ಕಾಗಿಯೇ ರಾವಣನು ಸೀತೆಯನ್ನು ಅಪರಿಸಿದ್ದ ಮತ್ತು ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದರು.

ನೆಟ್ಟಿಗರ ಆಕ್ರೋಶ

ನೆಟ್ಟಿಗರ ಆಕ್ರೋಶ

ಈ ಹೇಳಿಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಸೈಫ್ ಅಲ್ ಖಾನ್, ರಾವಣನು ಸೀತೆ ಅಪಹರಣ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ರಾವಣನೇ ಹೀರೋ ಎನ್ನುವ ರೀತಿಯಲ್ಲಿ ಸೈಫ್ ಮಾತನಾಡಿದ್ದಾರೆ. ಇಲ್ಲಿ ರಾಮಾಯಣವನ್ನು ತಿರುಚಲಾಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Recommended Video

ನಿಮ್ಮ ಸಪೋರ್ಟ್ ಇದ್ರೇನೆ ನಮಗೆ ಒಂದು ಧೈರ್ಯ | Manasa | Pursothrama |Filmibeat Kannada
ಸೈಫ್ ಅಲಿ ಖಾನ್ ರನ್ನ ಸಿನಿಮಾದಿಂದ ಕೈಬಿಡುವಂತೆ ಒತ್ತಾಯ

ಸೈಫ್ ಅಲಿ ಖಾನ್ ರನ್ನ ಸಿನಿಮಾದಿಂದ ಕೈಬಿಡುವಂತೆ ಒತ್ತಾಯ

ಅಷ್ಟೆಯಲ್ಲ ಸಿನಿಮಾದಿಂದ ಸೈಫ್ ಅಲಿ ಖಾನ್ ರನ್ನು ಕೈಬಿಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಸೈಫ್ ನಟಿಸಬಾರದು, ಸೈಫ್ ಬದಲಿಗೆ ಬೇರೆ ನಟನನ್ನು ಆಯ್ಕೆ ಮಾಡಿ ಎಂದು ನೆಟ್ಟಿಗರು ಸಿನಿಮಾತಂಡಕ್ಕೆ ಒತ್ತಾಯ ಮಾಡುತ್ತಿದ್ದಾರೆ.

More from Filmibeat

English summary
Bollywood Actress Saif Ali Khan Apologises for comments on Humane Raavan statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X