ಕರೀನಾಳಿಂದ ಮಕ್ಕಳು ನಿರೀಕ್ಷಿಸಿಲ್ಲ: ಸೈಫ್ ಅಲಿ ಖಾನ್
ಬಾಲಿವುಡ್ ರೊಮ್ಯಾಂಟಿಕ್ ಜೋಡಿ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ತಮ್ಮ ಸಾಂಸಾರಿಕ ಜೀವನವನ್ನು ಹ್ಯಾಪಿಯಾಗಿ ಕಳೆಯುತ್ತಿದ್ದಾರೆ. ಆದರೆ ಬಾಲಿವುಡ್ ಮಾತ್ರ ಕರೀನಾ ಕಪೂರ್ ಅವರು ಯಾವಾಗ ಗರ್ಭಿಣಿಯಾಗುತ್ತಾರೋ ಎಂಬ ನಿರೀಕ್ಷೆಯಲ್ಲಿ ಇದ್ದೇ ಇದೆ.
ಈ ನಿರೀಕ್ಷೆಯ ಬಲೂನನ್ನು ಛೋಟಾ ನವಾಬ್ ಸೈಫ್ ಆಲಿ ಖಾನ್ (43+) ಠುಸ್ ಎನ್ನಿಸಿದ್ದಾರೆ. ಕರೀನಾಳಿಂದ ತಾನು ಮಕ್ಕಳನ್ನು ನಿರೀಕ್ಷಿಸಿಲ್ಲ ಎಂದು ಸೈಫ್ ಹೇಳಿಕೊಂಡಿದ್ದಾರೆ. ತಾವಿಬ್ಬರೂ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದೇವೆ. ಆದರೆ ಮಕ್ಕಳ ಬಗ್ಗೆ ನಮಗೆ ಯೋಚಿಸುವಷ್ಟೂ ಸಮಯವಿಲ್ಲ ಎಂದಿದ್ದಾರೆ. [ನಟಿ ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?]
"ಸದ್ಯಕ್ಕೆ ನಮಗೆ ಮಕ್ಕಳು ಬೇಕೆಂಬ ಸ್ವಾರ್ಥವಿಲ್ಲ. ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲುಹಲು ನಮಗೆ ಸಮಯವೂ ಇಲ್ಲ" ಎಂದಿದ್ದಾರೆ. ಮಕ್ಕಳ ಬಗ್ಗೆ ಕರೀನಾ ಕಪೂರ್ ಖಾನ್ ಅಭಿಪ್ರಾಯವೂ ಇದೇ ಆಗಿದೆ. ಅವರೂ ತಮ್ಮ ಪತಿಯ ಮಾತಿಗೆ ಧ್ವನಿಗೂಡಿಸಿದ್ದಾರೆ. [ಕರೀನಾ ಕಪೂರ್ ಮದುವೆ ಚಿತ್ರಗಳು]"ತಾನೇನು ಮಕ್ಕಳಿಗಾಗಿ ಈ ಮದುವೆಯಾಗಿಲ್ಲ. ನನಗೀಗ ಇನ್ನೂ 32ರ ಪ್ರಾಯ. ಯಾರಿಗೆ ಗೊತ್ತು ಮುಂದೆ ಮಕ್ಕಳು ಬೇಕು ಎಂಬ ಆಲೋಚನೆ ಬರಲೂ ಬಹುದು. ನಾವೇನು ಭಾರತೀಯ ಮಾದರಿಯ ದಂಪತಿಗಳಂತೆ ಮಕ್ಕಳಿಗಾಗಿ ಮಾತ್ರ ಮದುವೆಯಾಗಿಲ್ಲ. ನಾವು ಆಧುನಿಕ ದಂಪತಿಗಳು. ಸೈಫ್ ಗೆ ಈಗಾಗಲೆ ಇಬ್ಬರು ಮಕ್ಕಳಿದ್ದಾರಲ್ಲಾ" ಎಂದಿದ್ದಾರೆ ಕರೀನಾ.
ತನ್ನ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಂದ ಸೈಫ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಸರಾ (20) ಹಾಗೂ ಪುತ್ರ ಇಬ್ರಾಹಿಂ ಅಲಿ ಖಾನ್ (18) ದೊಡ್ಡವರಾಗಿದ್ದಾರೆ. ಮೊಮ್ಮಕ್ಕಳನ್ನು ನೋಡುವ ವಯಸ್ಸಲ್ಲಿ ಈಗ ಮಕ್ಕಳನ್ನು ಬಯಸುವುದು ಸೈಫ್ ಆಲಿ ಖಾನ್ ಗೆ ಇಷ್ಟವಿಲ್ಲ ಎನ್ನಿಸುತ್ತದೆ.


Click it and Unblock the Notifications












