twitter
    For Quick Alerts
    ALLOW NOTIFICATIONS  
    For Daily Alerts

    800 ಕೋಟಿ ಆಸ್ತಿಯನ್ನು ಮರಳಿ ಪಡೆದುಕೊಂಡ ಸೈಫ್ ಅಲಿ ಖಾನ್

    |

    ಬಾಲಿವುಡ್ ನಟ ಸೈಫ್ ಅಲಿ ಖಾನ್ ನವಾಬರ ಕುಟುಂಬಕ್ಕೆ ಸೇರಿದವರು. ಸೈಫ್ ಅಲಿ ಖಾನ್‌ರ ತಂದೆ ಭಾರತದ ಕೊನೆಯ ನವಾಬರಲ್ಲಿ ಒಬ್ಬರಾದ ಮನ್ಸೂರ್ ಅಲಿ ಖಾನ್ ಪಟೌಡಿ, ಭಾರತೀಯ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು ಪಟೌಡಿ. ಸೈಫ್ ಅಲಿ ಖಾನ್‌ರ ತಾತ, ಇಫ್ತಿಕರ್ ಅಲಿಖಾನ್ ಪಟೌಡಿ ನವಾಬರಾಗಿ ಆಳ್ವಿಕೆ ಮಾಡಿದವರು.

    ಪಟೌಡಿ ಕುಟುಂಬಕ್ಕೆ ಉತ್ತರ ಭಾರತದ ಕೆಲವೆಡೆ ಅದರಲ್ಲಿಯೂ ಹರಿಯಾಣ, ದೆಹಲಿ, ಭೋಪಾಲ್‌ ಭಾಗಗಳಲ್ಲಿ ಅರಮನೆಗಳು, ಕೋಟೆಗಳು, ಸಾಕಷ್ಟು ಜಮೀನುಗಳು ಇವೆ. ಸೈಫ್ ಅಲಿ ಖಾನ್ ಕುಟುಂಬದ ಅಧ್ಯಾಯ ಭಾರತೀಯ ಇತಿಹಾಸದಲ್ಲಿ ದಾಖಲಾಗಿದೆ.

    ತಮ್ಮ ತಂದೆಗೆ ಸೇರಿದ್ದ 800 ಕೋಟಿ ಮೌಲ್ಯದ ಅರಮನೆಯನ್ನು ಇತ್ತೀಚೆಗಷ್ಟೆ ನಟ ಸೈಫ್ ಅಲಿ ಖಾನ್ ಮರಳಿ ಖರೀದಿಸಿದ್ದಾರೆ. ಗುರುಗಾಂವ್‌ನಲ್ಲಿರುವ ಅರಮನೆ ಬಹುತೇಕ ಸೈಫ್ ಅಲಿ ಖಾನ್ ಕೈ ತಪ್ಪಿ ಹೋಗಿತ್ತು. ಸಾಕಷ್ಟು ಹಣ ತೆತ್ತು, ಕಾನೂನು ಹೋರಾಟ ನಡೆಸಿ ಸೈಫ್ ಅಲಿ ಖಾನ್ ಅದನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ಮಾತನಾಡಿದ್ದಾರೆ.

    ನೀಮ್ರಾನಾ ಹೋಟೆಲ್‌ಗೆ ಲೀಸ್ ನೀಡಲಾಗಿತ್ತು

    ನೀಮ್ರಾನಾ ಹೋಟೆಲ್‌ಗೆ ಲೀಸ್ ನೀಡಲಾಗಿತ್ತು

    ''ತಂದೆ ಪಟೌಡಿ ನಿಧನದ ವೇಳೆಗೆ ಗುರುಗ್ರಾಮದ ಇಬ್ರಾಹಿಂ ಕೋಟೆ ಅರಮನೆಯನ್ನು ನೀಮ್ರಾನಾ ಹೋಟೆಲ್‌ಗೆ ಲೀಸ್‌ಗೆ ನೀಡಲಾಗಿತ್ತು. ಆ ಅರಮನೆ ನನಗೆ ವಂಶದತ್ತವಾಗಿ ಬರಲಿಲ್ಲ. ಬದಲಿಗೆ ನಾನು ಬಹಳ ದೊಡ್ಡ ಮೊತ್ತದ ಹಣವನ್ನು ಅದಕ್ಕಾಗಿ ತೆತ್ತು ಹಲವು ಸುತ್ತುಗಳ ಕಾನೂನು ಹೋರಾಟ ಮಾಡಿದ ಮೇಲಷ್ಟೆ ಆ ಹೋಟೆಲ್ ನನಗೆ ಬಂತು. ಅದನ್ನು ನಾನು ಮರು ಖರೀದಿಸಲಿಲ್ಲ. ಆದರೆ ಹೋಟೆಲ್‌ನ ಲೀಸ್ ಮೊತ್ತ ತೀರಿಸುವುದು, ಕಾನೂನು ಪ್ರಕ್ರಿಯೆ ಇದಕ್ಕೆಲ್ಲ ಬಹಳ ದೊಡ್ಡ ಮೊತ್ತವನ್ನೇ ಖರ್ಚು ಮಾಡಬೇಕಾಯಿತು'' ಎಂದಿದ್ದಾರೆ ಸೈಫ್ ಅಲಿ ಖಾನ್.

    ಅರಮನೆಯ ಮೌಲ್ಯ 800 ಕೋಟಿ

    ಅರಮನೆಯ ಮೌಲ್ಯ 800 ಕೋಟಿ

    'ಇಬ್ರಾಹಿಂ ಕೋಟೆ' ಅರಮನೆ ಸಾಮಾನ್ಯಾವಾದ ಅರಮನೆಯಲ್ಲಿ ಭಾರತದ ವೈಭವೋಪೇತ ಅರಮನೆಗಳಲ್ಲಿ ಇದು ಒಂದು. ಈ ಅರಮನೆಯನ್ನು 10 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಅರಮನೆಯಲ್ಲಿ 150 ಕೊಠಡಿಗಳಿವೆ. ಏಳು ಬಿಲಿಯರ್ಡ್ ಟೇಬಲ್ ರೂಂಗಳಿವೆ. ಹಲವು ಈಜುಕೊಳಗಳ, ಡ್ರೆಸ್ಸಿಂಗ್ ರೂಮ್, ವಿಶಾಲವಾದ ಹಾಲ್‌ಗಳು, ವೈಭವೋಪೇತ ಪೀಠೋಪಕರಣಗಳು ಇವೆ. ಈ ಅರಮನೆಯ ಇಂದಿನ ಅಂದಾಜು ಮೌಲ್ಯ 800 ಕೋಟಿ ರುಪಾಯಿ. ಈ ಅರಮನೆ ಈಗ ಪೂರ್ಣವಾಗಿ ಸೈಫ್ ಅಲಿ ಖಾನ್ ಪಾಲಾಗಿದೆ.

    ಅರಮನೆ ನಮ್ಮ ಕುಟುಂಬದ ಹೆಮ್ಮೆ: ಸೈಫ್ ಅಲಿ ಖಾನ್

    ಅರಮನೆ ನಮ್ಮ ಕುಟುಂಬದ ಹೆಮ್ಮೆ: ಸೈಫ್ ಅಲಿ ಖಾನ್

    ''ಆ ಅರಮನೆಯಲ್ಲಿ ಹಲವು ನೆನಪುಗಳಿವೆ. ಆ ಅರಮನೆ ಭಾರತೀಯ ಇತಿಹಾಸದ ಒಂದು ಭಾಗ. ನಮ್ಮ ಕುಟುಂಬದ ಹೆಮ್ಮೆ. ಅರಮನೆಯಲ್ಲಿ ಹಲವು ಮುಖ್ಯ ಘಟನೆಗಳು ನಡೆದಿವೆ. ಕುಟುಂಬಕ್ಕೆ ಸೇರಿದ ಹಲವು ಫೊಟೊಗಳು ಅಲ್ಲಿವೆ. ಆ ಅರಮನೆ ನಮ್ಮ ಕುಟುಂಬಕ್ಕೆ ಬಹಳ ಪ್ರಮುಖವಾದುದು ಹಾಗಾಗಿ ಆ ಅರಮನೆಯನ್ನು ನಾನು ದೊಡ್ಡ ಮೊತ್ತ ಖರ್ಚು ಮಾಡಿ ವಾಪಸ್ ಪಡೆದೆ'' ಎಂದಿದ್ದಾರೆ ಸೈಫ್ ಅಲಿ ಖಾನ್.

    ಹಲವು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ

    ಹಲವು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ

    ಈ ವೈಭವೊಪೇತ ಅರಮನೆಯಲ್ಲಿ ಬಾಲಿವುಡ್‌ನ ಹಲವು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. 'ಮಂಗಲ್ ಪಾಂಡೆ', 'ಗಾಂಧಿ ಮೈ ಫಾದರ್', ಶಾರುಖ್ ಖಾನ್-ಪ್ರೀತಿ ಜಿಂಟಾ ನಟಿಸಿರುವ 'ವೀರ್-ಜಾರಾ', 'ಈಟ್ ಪ್ರೇ ಲವ್', 'ಮೇರಿ ಬ್ರದರ್‌ ಕಿ ದುಲ್ಹನ್' ಇನ್ನೂ ಕೆಲವು ಸಿನಿಮಾಗಳನ್ನು ಇದೇ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಅರಮನೆಯನ್ನು ವಾಪಸ್ ಪಡೆದ ಬಳಿಕ ಅದನ್ನು ಯಾವುದೇ ಹೋಟೆಲ್ ಅಥವಾ ಖಾಸಗಿಯವರಿಗೆ ಸೈಫ್ ಅಲಿ ಖಾನ್‌ ನೀಡಿಲ್ಲ. ಕೆಲವು ತಿಂಗಳ ಮುಂಚೆ ಸೈಫ್, ಕರೀನಾ ಹಾಗೂ ತೈಮೂರ್ ಕೆಲವು ದಿನ ಆ ಅರಮನೆಯಲ್ಲಿ ಇದ್ದು ಬಂದರು.

    English summary
    Saif Ali Khan earned back his ancestral Pataudi palace which is in Gurgaon, Haryana. This palace is valued around 800 crore rs.
    Sunday, September 12, 2021, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X