ಮನೆಯಲ್ಲಿದ್ದರೆ ಇನ್ನೊಂದೆರಡು ಮಕ್ಕಳಾಗುತ್ತವೆ: ಸೈಫ್ ಅಲಿ ಖಾನ್ ಆತಂಕ

ನಟ ಸೈಫ್ ಅಲಿ ಖಾನ್‌ಗೆ ಈಗಾಗಲೇ ನಾಲ್ಕು ಮಕ್ಕಳಿವೆ, ಆದರೆ ತಾನು ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಆತಂಕ ಇದೆಯಂತೆ ಈ ಬಾಲಿವುಡ್ ನಟನಿಗೆ.

ತಮ್ಮ ಸಿನಿಮಾ 'ಬಂಟಿ ಔರ್ ಬಬ್ಲಿ 2' ಸಿನಿಮಾದ ಪ್ರಮೋಷನ್‌ಗೆ ಕಪಿಲ್‌ ಶರ್ಮಾ ಶೋಗೆ ಬಂದಿದ್ದ ಸೈಫ್ ಅಲಿ ಖಾನ್ ಈ ವಿಷಯ ಹೇಳಿದ್ದಾರೆ.

ಕಪಿಲ್ ಶರ್ಮಾ ಶೋನಲ್ಲಿ ಸೈಫ್ ಅಲಿ ಖಾನ್, ರಾಣಿ ಮುಖರ್ಜಿ, ಸಿದ್ಧಾಂಥ್ ಚತುರ್ವೇಧಿ, ಶರ್ವರಿ ವಾಘ್ ಭಾಗವಹಿಸಿದ್ದು ಶೋನ ಪ್ರೋಮೋ ಇದೀಗ ಬಿಡುಗಡೆ ಆಗಿದೆ.

Saif Ali Khan Fears If He Stays In Home He Will Have Few More Kids

''ಸೈಫ್ ಅಲಿ ಖಾನ್ ಈ ವರ್ಷದಲ್ಲಿ ಈಗಾಗಲೇ ಮೂರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ ಈಗ ಇದು ಇವರ ನಾಲ್ಕನೇ ಪ್ರಾಜೆಕ್ಟ್. ನಿಮಗೆ ಕೆಲಸ ಇಷ್ಟವಾಗುತ್ತದೆಯೇ? ಅಥವಾ ಮನೆಯಲ್ಲಿರುವುದು ಇಷ್ಟವಿಲ್ಲವೇ?'' ಎಂದು ಕಪಿಲ್ ಶರ್ಮಾ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ನಗುತ್ತಾ ಉತ್ತರಿಸುವ ಸೈಫ್ ಅಲಿ ಖಾನ್, ''ಮನೆಯಲ್ಲಿದ್ದರೆ ಇನ್ನಷ್ಟು ಮಕ್ಕಳಾಗಿಬಿಡುತ್ತವೆಯೇನೋ ಎಂಬ ಭಯ, ನನಗೆ ಈಗಾಗಲೇ ನಾಲ್ಕು ಮಕ್ಕಳಿವೆ'' ಎಂದಿದ್ದಾರೆ ಸೈಫ್.

ಸೈಫ್ ಅಲಿ ಖಾನ್‌ ಮೊದಲ ಪತ್ನಿ ಅಮೃತ್ ಸಿಂಗ್ ಜೊತೆಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಸಾರಾ ಅಲಿ ಖಾನ್ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಇಬ್ರಾಹಿಂ ಅಲಿ ಖಾನ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಪತ್ನಿ ಕರೀನಾ ಕಪೂರ್ ಜೊತೆಗೆ ತೈಮೂರ್ ಅಲಿ ಖಾನ್ ಹಾಗೂ ಜಹಾಂಗೀರ್ ಅಲಿ ಖಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಕಪಿಲ್ ಶರ್ಮಾ ಶೋನಲ್ಲಿ ಇನ್ನೂ ಹಲವು ವಿಷಯಗಳನ್ನು ಸೈಫ್ ಅಲಿ ಖಾನ್ ಮಾತನಾಡಿದ್ದಾರೆ. ಸಹ ನಟಿ ರಾಣಿ ಮುಖರ್ಜಿ ಬಗ್ಗೆ ಮಾತನಾಡಿರುವ ಸೈಫ್, ''ನಾವಿಬ್ಬರು ಈ ಮುಂಚೆ ಕೆಲವು ಸಿನಿಮಾಗಳನ್ನು ಯಶ್ ರಾಜ್‌ ಫಿಲಮ್ಸ್‌ಗಾಗಿ ಮಾಡಿದ್ದೇವೆ. ಆಗೆಲ್ಲ ನಾನು ಹಾಗೂ ರಾಣಿ ಇಬ್ಬರೂ ಸಂಭಾವನೆಯ ಚೆಕ್‌ ಅನ್ನು ನಿರ್ಮಾಣ ಸಂಸ್ಥೆಯವರು ಯಾವಾಗ ಕೊಡುತ್ತಾರೆ ಎಂದು ಕಾಯುತ್ತಿದ್ದೆವು. ಆದರೆ ಈಗ ನಾನು ಒಬ್ಬನೇ ಕಾಯುತ್ತಿದ್ದೇನೆ ರಾಣಿ ಮುಖರ್ಜಿ ನನ್ನ ಚೆಕ್‌ ಅನ್ನು ಯಾವಾಗ ಕೊಡುತ್ತಾರೆ ಎಂದು'' ಎಂದಿದ್ದಾರೆ. ರಾಣಿ ಮುಖರ್ಜಿ ಯಶ್ ರಾಜ್ ಫಿಲಮ್ಸ್‌ನ ಆದಿತ್ಯ ಚೋಪ್ರಾ ಅವರನ್ನು ವಿವಾಹವಾಗಿದ್ದಾರೆ, ಯಶ್ ರಾಜ್ ಫಿಲಮ್ಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸೈಫ್ ಅಲಿ ಖಾನ್ ಹಾಗೂ ರಾಣಿ ಮುಖರ್ಜಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ 'ಬಂಟಿ ಔರ್ ಬಬ್ಲಿ 2' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇವರೊಟ್ಟಿಗೆ ಯುವ ಜೋಡಿ ಸಿದ್ಧಾಂಥ್ ಚತುರ್ವೇಧಿ, ಶರ್ವರಿ ವಾಘ್ ಸಹ ನಟಿಸಿದ್ದಾರೆ. 'ಬಂಟಿ ಔರ್ ಬಬ್ಲಿ 2' ಸಿನಿಮಾವು ನವೆಂಬರ್ 19 ರಂದು ಬಿಡುಗಡೆ ಆಗಲಿದೆ. 2005 ರಲ್ಲಿ 'ಬಂಟಿ ಔರ್ ಬಬ್ಲಿ' ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ಒಟ್ಟಿಗೆ ನಟಿಸಿದ್ದರು. 'ಕಜರಾರೆ ಕಜರಾರೆ' ಹಾಡು ಬಹಳ ಪ್ರಖ್ಯಾತಿ ಪಡೆದಿತ್ತು.

More from Filmibeat

English summary
Saif Ali Khan said he fears if he stays in home he will have few more kids. Already Saif have 4 kids. Two with first wife Amritha Singh and two with second wife Kareena Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X